ಗುರುವಾರ, ಮಾರ್ಚ್ 1, 2012

ಸಿದ್ಧರಾಮ ಹಿರೇಮಠ,ಕೂಡ್ಲಿಗಿ


ಟಿಪ್ಪಣಿ: ಅರುಣ್ ಜೋಳದಕೂಡ್ಲಿಗಿ


ಸಿದ್ಧರಾಮ ಹಿರೇಮಠ ಅವರು ಕೂಡ್ಲಿಗಿ ಭಾಗದಲ್ಲಿ ಸಾಹಿತ್ಯ ಪರಿಸರವನ್ನು ರೂಪಿಸುತ್ತಿರುವವರಲ್ಲಿ ಪ್ರಮುಖರು. ಹಿರೇಮಠರು ದಿ.ಶ್ರೀ.ಗುರುಲಿಂಗಯ್ಯ ಹಿರೇಮಠ. ಮತ್ತು ಶ್ರೀಮತಿ.ಶಾಂತಾದೇವಿ ಹಿರೇಮಠ ಅವರ ಮಗನಾಗಿ ೩೧.೧೦.೧೯೬೫ ರಲ್ಲಿ ರಾಯಚೂರಿನಲ್ಲಿ ಜನಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ (ಕನ್ನಡ) ಮಾಡಿದ ಅವರು ೧೯೮೮ ರಲ್ಲಿ ವಿಶ್ವವಿದ್ಯಾಲಯಕ್ಕೆ ೨ನೇ ರ‍್ಯಾಂಕ್ ಪಡೆದಿದ್ದರು. ಸದ್ಯಕ್ಕೆ ಹಿರೇಮಠ ವಿದ್ಯಾಪೀಠ ಸಂಯುಕ್ತ ಪದವಿ ಪೂರ್ವ
ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ದಿನಪತ್ರಿಕೆಯಲ್ಲಿ ಕಳೆದ ೬ ವರ್ಷಗಳಿಂದ ಅರೆಕಾಲಿಕ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಈತನಕ ಬಾನುಸುರಿದ ಮಾತು, ನನ್ನೊಳಗಿ ನಾನು, ಅನನ್ಯ, ೩೫ ಗಜಲ್‌ಗಳು, ೪೫ ಹೈಕುಗಳು- ಕವನ ಸಂಕಲನಗಳು. ಆಂಡಯ್ಯ(ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಂಪಾದಿತ ಕೃತಿ), 6 ಕೃತಿಗಳನ್ನು ರಚಿಸಿದ್ದಾರೆ. ಒಡೇವು ಎನ್ನುವ ಪತ್ರಿಕಾ ಬರಹಗಳ ಸಂಕಲನವೊಂದು ಪ್ರಕಟಣೆಯ ಹಂತದಲ್ಲಿದೆ.


ಹಿರೇಮಠರು ಮುಖ್ಯವಾಗಿ ಕೂಡ್ಲಿಗಿ ಭಾಗದ ಸಾಂಸ್ಕೃತಿಕ ವಿವರಗಳನ್ನು ಶೋಧಿಸಿ ಪತ್ರಿಕೆಗೆ ಬರಹ ಮಾಡಿದವರು. ನಾಡಿನ ವಿವಿಧ ದಿನ ಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಇವರ ಕವನ, ಲೇಖನಗಳು ಪ್ರಕಟಗೊಂಡಿವೆ.ಅವರ ಗಜಲ್ ಹೈಕುಗಳ ಸಂಕಲನ ಹಿರೇಮಠರ ಕಾವ್ಯದ ಹೊಸ ಹೊರಳುವಿಕೆಗೆ ಸಾಕ್ಷಿಯಂತಿದೆ.

ಬಹುರೂಪಿ(http://bahuroopi-siddha.blogspot.in/ )ಎನ್ನುವ ಬ್ಲಾಗ್ ಮಾಡಿಕೊಂಡು ತಾವು ತಮ್ಮ ಇಷ್ಟದ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. ಕನ್ನಡ ಜಾನಪದ ಬ್ಲಾಗ್ ನಲ್ಲಿ ಜಾನಪದಕ್ಕೆ ಸಂಬಂಧಿಸಿದಂತೆ ಇಪ್ಪತ್ತಕ್ಕೂ ಹೆಚ್ಚಿನ ಲೇಖನಗಳನ್ನು ಪ್ರಕಟಿಸಿ ಗಮನ ಸೆಳೆದಿದ್ದಾರೆ.ಕಣಜ ವೆಬ್ ಸೈಟ್ ಗೂ ಬರೆಯುತ್ತಿದ್ದಾರೆ.

ಗಜಲ್ :

ಬಂದೂಕಿನ ಬಾಯಲ್ಲಿ ಗುಂಡು ಸಿಡಿದರೂ ಗುಬ್ಬಿ ಗೂಡು ಕಟ್ಟಿದರೂ
ಬೆನ್ನು ಬಾಗಿಸಿ ಬೂಟು ಒರೆಸುವುದು ಇನ್ನೂ ತಪ್ಪಿಲ್ಲ ಈ ಕನಸುಗಳೇ ಹೀಗೆ!

ಪ್ರತಿ ಮನೆಯಲ್ಲೂ ಕಂಬನಿದುಂಬಿದ ಕಣ್ಣುಗಳಿವೆ
ಕಣ್ಣೊರೆಸುವ ಬಗೆಯ ತಿಳಿಯದಿರುವೆ ಹೇಗೆ ತೊಡೆಯಲಿ ಸಾಕಿ!


ಸಂಪರ್ಕ:
ಪ್ರಾಚಾರ್ಯರು, ಹಿರೇಮಠ ವಿದ್ಯಾಪೀಠ ಸಂಯುಕ್ತ ಪದವಿ ಪೂರ್ವ
ಕಾಲೇಜು, ಕೂಡ್ಲಿಗಿ. ಜಿ.ಬಳ್ಳಾರಿ
ಮೊಬೈಲ್ : ೯೪೪೮೬೩೨೪೫೧

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ