ಸೋಮವಾರ, ಆಗಸ್ಟ್ 5, 2013

ಪುಸ್ತಕ ಪ್ರೀತಿ ಬೆಳೆಸುವುದೇ ನಮ್ಮ ಕಾಯಕ

 
 
 
 ಸೌಜನ್ಯ:ಪ್ರಜಾವಾಣಿ
 
ಶಾಲೆ, ವಿದ್ಯುತ್, ಬಸ್ಸು ಇತ್ಯಾದಿ ನಾಗರಿಕ ಸವಲತ್ತುಗಳಿಲ್ಲದ ಅಕ್ಷರಶಃ ಕೊಂಪೆಯಲ್ಲಿ ಹುಟ್ಟಿ ಬೆಳೆದವನು ನಾನು. ನನ್ನ ತಂದೆ ಬೇಸಾಯಗಾರನಾಗಿದ್ದರೂ ಸದಾ ಸಾಧು-ಸನ್ಯಾಸಿಗಳ ಸಂಗದಲ್ಲಿರುತ್ತಿದ್ದ. ಸನ್ಯಾಸಿಯೊಬ್ಬ ಕಾಣಿಕೆಯಾಗಿ ನೀಡಿದ್ದ ಅಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕವೊಂದನ್ನು ನನ್ನ ತಂದೆ ಜಗುಲಿಯ ಮೇಲಿಟ್ಟು ದಿನಕ್ಕೆ ಎರಡು ಬಾರಿ ತಪ್ಪದೇ ಪೂಜಿಸುತ್ತಿದ್ದ. ದಿನಸಿ ಅಂಗಡಿಯವನು ಕಟ್ಟಿಕೊಟ್ಟ ಪೊಟ್ಟಣದ ಕಾಗದವನ್ನು ನನ್ನ ತಂದೆ ಆಗಾಗ ನನ್ನಿಂದ ಓದಿಸುತ್ತಿದ್ದರು.

ಅಕ್ಷರಲೋಕದ ಸಂಪರ್ಕವೇ ಇರದ ನನ್ನ ತಂದೆಯ ಇಂಥ ನಡೆಗಳಿಂದಾಗಿ ನನಗೆ ಅಕ್ಷರದ ಮೋಹ ಉಂಟಾಯಿತು. ಇದು ಖಚಿತರೂಪ ಪಡೆದದ್ದು ಹೊಸಪೇಟೆಯ ಹತ್ತಿರದ ರಾಮಸಾಗರದ ಹೈಸ್ಕೂಲು ಸೇರಿದಾಗ. ಈ ಊರಿನ ಸಮಾಜ ಸೇವಕ ತಳವಾರ ಶಂಕ್ರಪ್ಪನವರ ಮನೆ ವೈಚಾರಿಕ ಕೃತಿಗಳಿಂದ ತುಂಬಿರುತ್ತಿತ್ತು. ಲೇಖಕ, ಪತ್ರಕರ್ತ ಲಂಕೇಶರ ಉಗ್ರ ಅಭಿಮಾನಿಗಳಾಗಿದ್ದ ಈ ಕುಟುಂಬದವರು ನನಗೆ ಅಂದಿನ ದಿನಗಳಲ್ಲಿಯೇ ಹಲವು ಪುಸ್ತಕಗಳನ್ನು ಓದಿಸುತ್ತಿದ್ದರು. ತಲೆಬುಡ ಅರ್ಥವಾಗದ ನಾನು ಪುಸ್ತಕಗಳನ್ನು ಮುದ್ದಾಡುತ್ತಿದ್ದೆ. ಹೀಗೆ ಕ್ರಮೇಣ ಪುಸ್ತಕಗಳನ್ನು ಕಲೆ ಹಾಕುವುದನ್ನು ರೂಢಿಸಿಕೊಂಡೆ. ಹೀಗೆ ನನ್ನಲ್ಲಿ ಹುಟ್ಟಿಕೊಂಡಿತು ಪುಸ್ತಕಪ್ರೀತಿ.

ನನ್ನ ಮದುವೆಯಲ್ಲಿ ಬೀಗರು ಉಡುಗೊರೆಯಾಗಿ ಕೊಟ್ಟಿದ್ದ ಒಂದಿಷ್ಟು ಚಿನ್ನದ ಒಡವೆಗಳನ್ನು ಒತ್ತೆ ಇಟ್ಟು ಪುಸ್ತಕ ಪ್ರಕಟಿಸುವ ಸಾಹಸಕ್ಕೆ ಇಳಿದೆ. ಹೀಗೆ ಶುರುವಾದ ಪುಸ್ತಕ ಪ್ರಕಟಣೆ ನಂತರ ಸಾತ್ವಿಕ ವ್ಯಸನದಂತೆ ನನ್ನನ್ನು ಬಿಡಲಾಗದಂತೆ ಅಂಟಿಕೊಂಡಿತು.

ಅಭಿರುಚಿಯ ಕಾರಣಕ್ಕಾಗಿ ಪುಸ್ತಕ ಪ್ರಕಾಶನ ಆರಂಭಿಸಿದರೂ, ಪುಸ್ತಕೋದ್ಯಮದ ಬದ್ಧತೆ, ಹೊಣೆಗಾರಿಕೆಯ ಅರಿವೂ ಇದೆ. ಪುಸ್ತಕಕ್ಕೆ ತೊಡಗಿಸಿರುವ ಹಣದ ಮೊತ್ತವನ್ನು ಮಾತ್ರ ನಾವು ನಿರೀಕ್ಷಿಸಿಸುತ್ತೇವೆಯೇ ಹೊರತು, ಇದನ್ನೊಂದು ವ್ಯವಹಾರ ಎಂದು ಭಾವಿಸಿಲ್ಲ. ಈವರೆಗೆ 80 ಪುಸ್ತಕಗಳನ್ನು ಪ್ರಕಟಿಸಿರುವ `ಪಲ್ಲವ ಪ್ರಕಾಶನ', ಮತ ಧರ್ಮ, ಜಾತಿ, ಹಿಂಸೆ ಇತ್ಯಾದಿ ಕೆಡುಕಿನ ಸಂಗತಿಗಳಿಂದ ಪಾರು ಮಾಡಿ ಜೀವಪರ ನಿಲುವನ್ನು ಸೃಜಿಸುವ ಬರಹಗಳಿಗೆ ಆದ್ಯತೆ ನೀಡುತ್ತದೆ.

ನಮ್ಮ ಪ್ರಕಟಣೆಗಳೇ ನಮ್ಮ ಧೋರಣೆಯನ್ನು ತೋರಿಸುತ್ತಿವೆ. ಹಿರಿಯ ಲೇಖಕರ ಕೃತಿಗಳ ಪ್ರಕಟಣೆಗೆ ತೋರುವ ಕಾಳಜಿ, ಉತ್ಸಾಹಗಳನ್ನೇ ಹೊಸ ಬರಹಗಾರರ ಕೃತಿಗಳ ಪ್ರಕಟಣೆಗೂ ತೋರಿಸಲಾಗುತ್ತದೆ. `ಕಾವ್ಯ'ವನ್ನು ಕೊಳ್ಳುವವರೇ ಇಲ್ಲ ಎಂದು ದೂರುತ್ತಿರುವ ದಿನಗಳಲ್ಲಿ ಅನೇಕ ಹೊಸಬರ ಸಂಕಲನಗಳನ್ನು ಪ್ರಕಟಿಸಿದ ಸಾಹಸವನ್ನು ಪಲ್ಲವ ತೋರಿಸಿದೆ.

ವಿಚಾರ, ವಿನ್ಯಾಸ, ಮುದ್ರಣ... ಹೀಗೆ ಅನೇಕ ಸಂಗತಿಗಳಿಂದಾಗಿ `ಪಲ್ಲವ'ದ ಪುಸ್ತಕಗಳು ಗಮನ ಸೆಳೆಯುತ್ತಿವೆ. ನಾವು ಪ್ರಕಟಿಸುವ ಪುಸ್ತಕಗಳ ವಿನ್ಯಾಸದ ಹಿಂದೆ ಲೇಖಕ, ಅನುವಾದಕ ಸುಜ್ಞಾನಮೂರ್ತಿಯವರ ಸೃಜನಶೀಲ ಶ್ರಮ ಕೆಲಸ ಮಾಡುತ್ತಿದೆ. ಮೂರು ಬಾರಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸೊಗಸಿನ ಕಾರಣಕ್ಕಾಗಿ ಪ್ರಶಸ್ತಿ ಪಡೆದದ್ದು ನಮಗೆ ಹೆಮ್ಮೆಯ ಸಂಗತಿ. ಇದನ್ನು ನಮ್ಮ ಪುಸ್ತಕಗಳ ಗುಣಮಟ್ಟವನ್ನು ಹೇಳುವ ಇನ್ನೊಂದು ಅಂಶ ಎಂದೇ ಹೇಳಬಹುದು.

ರಾಜಧಾನಿ ಬೆಂಗಳೂರಿನಿಂದ ದೂರ ಇರುವ ನಮ್ಮಂಥ ಪ್ರಕಾಶನಗಳಿಗೆ ಮಾರಾಟ ತುಸು ಕಷ್ಟದ ಕೆಲಸ. ಪುಸ್ತಕ ಮಾರಾಟಗಾರರನ್ನು ಸಂಪೂರ್ಣವಾಗಿ ನೆಚ್ಚಿಕೊಳ್ಳದ ನಾವು ನಾಡಿನ ತುಂಬ ಹರಡಿಕೊಂಡಿರುವ ಓದುಗರ ಬೇಡಿಕೆಗೆ ತಕ್ಷಣವೇ ಸ್ಪಂದಿಸುತ್ತೇವೆ.

ಪುಸ್ತಕಗಳನ್ನು ತಲುಪಿಸಲು ಕೊರಿಯರ್, ಅಂಚೆಯ ಖರ್ಚುಗಳನ್ನು ಓದುಗನಿಗೆ ಹೊರಿಸದೇ ಪ್ರಕಾಶನವೇ ಆ ಜವಾಬ್ದಾರಿಯನ್ನು  ನಿಭಾಯಿಸುತ್ತದೆ. ಸಾಧ್ಯವಾದಷ್ಟು ಓದುಗರ ಬೇಡಿಕೆಯನ್ನು ತಕ್ಷಣಕ್ಕೆ ಪೂರೈಸುತ್ತೇವೆ. ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯ್ತಿ ದರದಲ್ಲಿ ಪುಸ್ತಕಗಳನ್ನು ನೀಡುವುದನ್ನು ನಾವು ನಮ್ಮ ಕರ್ತವ್ಯವೆಂದೇ ಭಾವಿಸಿದ್ದೇವೆ. ಈ ದಿಸೆಯಲ್ಲಿ ನಮಗೆ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿರುತ್ತವೆ. ಓದುಗರು ಎಲ್ಲಿದ್ದರೂ ಅವರಿಗೆ ಪುಸ್ತಕಗಳನ್ನು ಮುಟ್ಟಿಸುವುದು ನಮ್ಮ  ಮೊದಲ ಆದ್ಯತೆಯಾಗಿದೆ.

ಒಂದು ವರ್ಷದ ಅವಧಿಯಲ್ಲಿ ವಿಮರ್ಶೆ, ಕತೆ, ಕಾದಂಬರಿ, ಅನುವಾದ, ಸಂಪಾದನೆ... ಹೀಗೆ ಭಿನ್ನ ಬಗೆಯ ಪ್ರಕಾರಗಳಲ್ಲಿ ಕನ್ನಡದಲ್ಲಿ ಸುಮಾರು ಏಳು ಸಾವಿರ ಪುಸ್ತಕಗಳು ಮುದ್ರಣವಾಗುತ್ತವೆ ಎನ್ನುವ ಅಂದಾಜಿದೆ. ಆದರೆ ಹೀಗೆ ಪ್ರಕಟಗೊಂಡ ಬಹುಪಾಲು ಪುಸ್ತಕಗಳು ನೇರವಾಗಿ ಸರ್ಕಾರದ ಗ್ರಂಥಾಲಯ ಇಲಾಖೆಯ ಉಗ್ರಾಣ ಸೇರಿಕೊಳ್ಳುತ್ತವೆ.

ಓದುಗನಿಗೆ ಪುಸ್ತಕ ದೊರೆಯದ ಹೊರತು ಹೀಗೆ ಉಗ್ರಾಣಗಲ್ಲಿ ದೂಳು ತಿನ್ನುವ ಪುಸ್ತಕಗಳಿಂದ ಆಗುವ ಪ್ರಯೋಜವಾದರೂ ಏನು? ಮರುಮುದ್ರಣಗೊಂಡ ಪುಸ್ತಕಗಳ ಆಯ್ಕೆಯ ವಿಷಯದಲ್ಲಿ ಸದ್ಯ ಇರುವ ಗ್ರಂಥಾಲಯದ ನಿಯಮಗಳು ಬದಲಾಗಬೇಕಾಗಿದೆ. ಪುಸ್ತಕ ಪ್ರೀತಿಯ ಕಾರಣಕ್ಕಾಗಿ ಈ ಕೆಲಸದಲ್ಲಿ ತೊಡಗಿಸಿಕೊಂಡಿರುವ ಪ್ರಕಾಶಕರನ್ನು ಸರ್ಕಾರ ಉದಾರವಾಗಿ ಪ್ರೋತ್ಸಾಹಿಸಬೇಕು.

ಹರೆಯದ ಓದುಗರು,ಕ್ರೈಂ, ಹಿಂಸೆ, ಸೆಕ್ಸ್‌ನಂಥ ಪುಸ್ತಕಗಳನ್ನು ಕೇಳಿಕೊಂಡು ಮಳಿಗೆಗಳಿಗೆ ಬರುತ್ತಾರೆ. ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಪುಸ್ತಕ ಮಳಿಗೆ ತೆರೆದ ನಾನು ಅನುಭವಿಸಿದ ಸಂಕಟ ಇದು. ಮಾದಕತೆಯ ಓದಿನಿಂದ ಪಾರು ಮಾಡಿ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಪುಸ್ತಕಗಳನ್ನು ನಾವು ನೀಡಬೇಕಾಗಿದೆ. ಸಾಹಿತ್ಯದ ಓದು ಅಂಥ ಆತ್ಮವಿಶ್ವಾಸವನ್ನು ಹುಡುಗರಲ್ಲಿ ಮೂಡಿಸಬಹುದು.

ಡಾ. ನಟರಾಜ್ ಹುಳಿಯಾರ್ ಅವರ ಲಂಕೇಶ್-ಡಿ.ಆರ್. ನಾಗರಾಜ ಅವರ ಕುರಿತ `ಇಂತಿ ನಮಸ್ಕಾರಗಳು', ಎಸ್.ಎಫ್. ಯೋಗಪ್ಪನವರ್ ಅವರು ಅನುವಾದಿಸಿರುವ `ಬೋದಿಲೇರ್: ಐವತ್ತು ಗದ್ಯ ಕವಿತೆಗಳು', ಸುಜ್ಞಾನಮೂರ್ತಿ ಅವರ `ತೆಲಂಗಾಣ ಹೋರಾಟ' ಕುರಿತ ಅನುವಾದ ಹಾಗೂ ಅರುಣ್ ಜೋಳದಕೂಡ್ಲಗಿ ಅವರ ಮಂಜವ್ವ ಜೋಗತಿಯ ಬದುಕಿನ ಕುರಿತ `ನಡುವೆ ಸುಳಿವಾತ್ಮ'  ತಕ್ಷಣ ಬರುವ ಕೃತಿಗಳಾಗಿವೆ.

ಇದೇ ಬಗೆಯ ಇನ್ನೂ ಉತ್ತಮ ಪುಸ್ತಕಗಳು ನಮ್ಮ ಪ್ರಕಾಶನದಿಂದ ಇನ್ನು ಮುಂದೆಯೂ ಪ್ರಕಟವಾಗುವ ವಿಶ್ವಾಸ ನಮ್ಮದು. ಬರಹಗಾರರು ಹಾಗೂ ಓದುಗರ ನಡುವಿನ ವಿಶ್ವಾಸದ ಕೊಂಡಿಯಾಗಿರುವ ಪಲ್ಲವ, ತನ್ನ ಪುಸ್ತಕಯಾನದಲ್ಲಿ ಪ್ರಜ್ಞಾಪೂರ್ವಕವಾಗಿ ಪುಸ್ತಕ ಪ್ರೀತಿಯನ್ನೇ ಮುಖ್ಯ ಕಾಯಕವನ್ನಾಗಿಸಿಕೊಂಡು ಮುಂದಕ್ಕೆ ಸಾಗುತ್ತಿದೆ.

 

ಮಂಗಳವಾರ, ಮೇ 7, 2013

ಬರೆಯುವುದೆಂದರೆ ಧ್ಯಾನ, ಓದುವುದೆಂದರೆ ಯೋಗಾಭ್ಯಾಸ



ಕನ್ನಡ ಸಾಹಿತ್ಯದೊಂದಿಗೆ ತೆಲುಗು ಸಾಹಿತ್ಯವನ್ನೂ ನೀವು ಓದಿಕೊಂಡಿದ್ದೀರಿ. ತೆಲುಗಿನಿಂದ ಅನೇಕ ಕಥೆ, ಕವಿತೆ, ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಿರಿ. ಓದನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದು ಯಾವಾಗ? ಹೇಗೆ ಈ ಓದಿನ ಯಾನ ಶುರುವಾಯಿತು?
ತೆಲುಗು ಸಾಹಿತ್ಯ ನನ್ನ ಅರಿವಿಗೆ ನಿಲುಕಿದ್ದು ತೀರಾ ಅಕಸ್ಮಿಕ, ದಿ.ಇಂದಿರಾಗಾಂಧಿ ಈ ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿ ಆ ಕಾಲಘಟ್ಟದ ಸೃಜನಶೀಲ ತಿಳಿವಳಿಕೆಗೆ ಹೊಸ ಆಯಾಮ ನೀಡಿತು. ಆ ಅವಧಿಯ ಏಳೆಂಟು ವರ್ಷಗಳಲ್ಲಿ ಶಾಸ್ತ್ರೋಕ್ತ ರೀತಿಯಲ್ಲಿ ಸಂಭವಿಸಿದ ಸಮಾಜಮುಖಿ ಚಳವಳಿಗಳು ಆಗಿನ್ನೂ ಯುವಕರಿದ್ದ ನನ್ನಂಥವರ ಸಾಕ್ಷಿಪ್ರಜ್ಞೆಗೆ ಸಾಣೆ ಹಿಡಿದವು. ಅದಕ್ಕೆ ವಯಸ್ಸು ಮತ್ತು ಮನಸ್ಸು ಸಾಥ್ ನೀಡಿತು.
ಅರೆಸ್ಟಾಗಿ ದೇಶಭಕ್ತಿ ಮೆರೆಯಲೆಂದು ನಡೆಸಿದ ಹಸಿಹಸಿ ಹೋರಾಟ ಸಾಮಾಜಿಕರಿಗೊಂದೇ ಅಲ್ಲದೆ ನಮ್ಮ ಕುಟುಂಬ ಹಿರಿಯರಿಗೂ ತಲೆನೋವಾಗಿ ಪರಿಣಮಿಸಿತು. ನನ್ನಿಂದ ತಮ್ಮನ್ನು ರಕ್ಷಿಸಿಕೊಳ್ಳಲೆಂದೋ, ನಿರುದ್ಯೋಗಿಯ ವೇಷದಲ್ಲಿದ್ದ ಪೀಡೆ ತೊಲಗಿದರಾಯಿತೆಂದೋ ನನ್ನನ್ನು ಆಂಧ್ರಪ್ರದೇಶಕ್ಕೆ ಎತ್ತಂಗಡಿ ಮಾಡಲಾಯಿತು. ಅಲ್ಲಿ ನನಗೆ ಮೇಸ್ಟ್ರಗಿರಿ ಲಭಿಸಿದ್ದು ತೀರಾ ಆಕಸ್ಮಿಕ.
ಎಪ್ಪತ್ತೆಂಬತ್ತರ ಅವಧಿಯಲ್ಲಿ ಸಾಹಿತ್ಯಕವಾಗಿ ಎಡಪಂಥೀಯ ಚಳವಳಿಗಳು ಆಂಧ್ರಪ್ರದೇಶದಾದ್ಯಂತ ಚಾಲ್ತಿಯಲ್ಲಿದ್ದವು, ಅಲ್ಲಿನ ಬಹುಪಾಲು ಲೇಖಕರು ತಮ್ಮಂದು ಕಾಲನ್ನು ಸೆರೆಮನೆಯಲ್ಲೂ, ಇನ್ನೊಂದು ಕಾಲನ್ನು ಬೀದಿಗಳಲ್ಲೂ ಇಟ್ಟು ಬರೆಯುತ್ತಿದ್ದರು. ಚಳವಳಿ ಸಂಜಾತ ಲೇಖಕನಾದ ನಾನು ಅಂಥವರನ್ನೂ ಅಂಥವರ ಸಾಹಿತ್ಯವನ್ನೂ ಆಮೂಲಾಗ್ರವಾಗಿ ಅಧ್ಯಯನ ಮಾಡಲೆಂದೇ ತೆಲುಗು ಭಾಷೆಯನ್ನು ಕಲಿತೆ, ಓದು ಬರಹ ಮತ್ತು ಅನುವಾದವನ್ನು ರೂಢಿಸಿಕೊಂಡೆ.
ಎಪ್ಪತ್ನಾಲ್ಕರಲ್ಲಿ ಮೊದಲ ಬಾರಿಗೆ ತೆಲುಗಿನ ಪಿ. ಶ್ರೀನಿವಾಸಶಾಸ್ತ್ರಿ ಅವರ ಅಗ್ಗಿಪುಲ್ಲ (ಕಡ್ಡಿಪೊಟ್ಟಣ) ಎಂಬ ಕಥೆಯನ್ನು ಕನ್ನಡಕ್ಕೆ ಅನುವಾದಿಸಿದೆ. ಅದಕ್ಕೆ ಪೂರಕವಾಗಿ ತೆಲುಗಿನ ಎಡಪಂಥೀಯ ಸಾಹಿತ್ಯವೊಂದೇ ಅಲ್ಲದೆ ಆ ಸಾಹಿತ್ಯದ ಪ್ರಾಚೀನ ಅಭಿಜಾತ ಪರಂಪರೆಯನ್ನೂ ಅರಗಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಶ್ರೀಶ್ರೀ ಪ್ರಣೀತ ದಿಗಂಬರ ಕವಿಗಳನ್ನು ಇಷ್ಟಪಟ್ಟಂತೆ ಅಲ್ಲಸಾನಿ ಪೆದ್ದನನ ಮನುಚರಿತ್ರ, ಕೃಷ್ಣರಾಯ ವಿರಚಿತ ಆಮುಕ್ತಮಾಲ್ಯದ, ಶ್ರೀನಾಥನ ಶೃಂಗಾರ ನೈಷಧಂ, ನನ್ನಯನ ಭಾರತ ಇಂಥ ಹಳೆಕಾವ್ಯಗಳನ್ನೂ ಅಭ್ಯಸಿಸಿದೆ, ಅರಿವಿಗೆ ದಕ್ಕಿದ್ದನ್ನು, ದಕ್ಕಿ ಆನಂದ ನೀಡಿದ್ದನ್ನು ಅಕ್ಷರದ ನೆರವಿನಿಂದ ಅನ್ಯರಿಗೆ ವಿತರಿಸುವ ಸ್ವಭಾವ ನನ್ನದು.
ಅಲ್ಲದೆ ಮಾನಸಿಕ ಸ್ವಾಸ್ಥ್ಯ ರಕ್ಷಿಸಿಕೊಳ್ಳುವ ಉಮೇದಿನಿಂದ ಅಲ್ಲಿನ ಕಥೆ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದೆ. ಅಲ್ಲಿಂದ ಇಲ್ಲಿಯವರೆಗೆ ನಾನು ಏನಿಲ್ಲವೆಂದರೂ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಕಥೆಗಳನ್ನು ಕನ್ನಡ ವಾಚಕರಿಗೆ ಪರಿಚಯಿಸಿರಬಹುದು. ಅವುಗಳನ್ನು ಸಂಕಲನಗಳಿಗೆ ಅಳವಡಿಸಿ ಪ್ರಕಟಿಸುವ ಇರಾದೆ ಎಳ್ಳಷ್ಟೂ ಇರಲಿಲ್ಲ. ಆದರೆ ಆವತ್ತಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿದ್ದ ಸನ್ಮಿತ್ರ ಅಗ್ರಹಾರ ಕೃಷ್ಣಮೂರ್ತಿ ನನ್ನಿಂದ ಆ ಕೆಲಸವನ್ನು ವಿಧ್ಯುಕ್ತವಾಗಿ ಮಾಡಿಸಿ ಕಥೆಗಳ ಮೂರ‌್ನಾಲ್ಕು ಸಂಕಲನಗಳನ್ನು ಅಕಾಡೆಮಿ ದ್ವಾರಾ ಪ್ರಕಟಿಸಿದರು. ಆ ಆಂಧ್ರದ ಹಲವು ತೆಲುಗುಗಳನ್ನು ನನಗೆ ಪರಿಚಯಿಸಿದ ಆ ಪುಣ್ಯಾತ್ಮನನ್ನು ಮರೆಯುವುದು ಸಾಧ್ಯವಿಲ್ಲ. ಈಗಲೂ ಅಲ್ಲಿನ ಉತ್ತಮ ಕಥೆ ಕಾದಂಬರಿಗಳನ್ನು ಓದಿ ಅರಿವಿನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳುತ್ತ ಮುಂದುವರೆದಿದ್ದೇನೆ.
ಹ್ಹಾಂ! ಅಂದಹಾಗೆ ಓದಿನ ಗಂಭೀರತೆ ಮತ್ತದರ ಯಾನ ಕುರಿತು ಕೇಳಿರುವಿರಿ, ಅದು ಕನ್ನಡಕ್ಕೆ ಸಂಬಂಧಿಸಿದ್ದೋ! ತೆಲುಗಿಗೆ ಸಂಬಂಧಿಸಿದ್ದೋ! ಯಾವುದಾದರೊಂದು. ನನ್ನ ದೃಷ್ಟಿಯಲ್ಲಿ ಓದಿಸಿಕೊಳ್ಳುವ ಯಾವುದೇ ಭಾಷೆಯ ಕೃತಿ ಸಾಂತ್ವನ ಕೇಂದ್ರ. ವಾಚನಾಭಿರುಚಿ ಶುರುವಾದದ್ದು ಪ್ರಾಯಶಃ ತಾಯಿಯ ಗರ್ಭಾಶ್ರಯದಲ್ಲಿರಬೇಕು. ಮಹಾಭಾರತ, ರಾಮಾಯಣ ಹಾಗೂ ಭಾಗವತೀ ಸಾಹಿತ್ಯವನ್ನು ಸೃಜನಶೀಲವಾಗಿ ಅರಗಿಸಿಕೊಂಡಿದ್ದ ನನ್ನಪ್ಪ ಕಥೆಗಳನ್ನು ಕಪೋಲಕಲ್ಪಿತವಾಗಿಯೂ, ಕುತೂಹಲಕಾರಿಯಾಗಿಯೂ ಹೇಳುವ ಮೂಲಕ ಬಾಲಕರಿದ್ದ ನಮ್ಮ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ.
ಪಠ್ಯೇತರ ಕೃತಿಗಳನ್ನು ನಮ್ಮ ಎಳೆ ಕೈಗಳಿಗೆ ಎಟುಕುವಂತೆ ನಗಂದಿ ಮೇಲಿರಿಸುತ್ತಿದ್ದ, ಓದಲು ಪುಸಲಾಯಿಸುತ್ತಿದ್ದ. ವಿಚಿತ್ರವೆಂದರೆ ಗದ್ಯವನ್ನು ಗಮಕ ಶೈಲಿಯಲ್ಲಿ, ಅದು ತನ್ನ ದೃಷ್ಟಿಯಲ್ಲಿ ಭಾಷೆಗೆ ಕೊಡುವ ಕಿಮ್ಮತ್ತು, ಕುಲಕ್ಕೆ ಸಂಬಂಧಿಸಿದ ಕೀಳರಿಮೆ ನೀಗಿಸಿಕೊಳ್ಳಲೆಂದೋ, ಅಪಮಾನಗಳ ಮೂಲಕಾರಣಗಳನ್ನು ಬೆದಕಲೆಂದೋ ಕಥೆಕಾದಂಬರಿಗಳನ್ನು ಓದಲಾರಂಭಿಸಿದೆ. ಹದಿಹರೆಯದ ದುರ್ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳದಂತೆ ನನ್ನನ್ನು ರಕ್ಷಿಸಿದ್ದು, ಜೀವನೋತ್ಸಾಹ ತುಂಬಿ ಈತನಕ ಕೈಹಿಡಿದು ನಡೆಸಿದ್ದು ಅವತ್ತು ಓದಿದ ಕೃತಿಗಳೆ. ಆದ್ದರಿಂದ ಓದು ಎಂಬ ಪದಕ್ಕೆ ಬದಲಾಗಿ ಪಾರಾಯಣ ಎನ್ನುವುದು ಸೂಕ್ತವೇನೊ!
ಆಂಧ್ರ ಪ್ರದೇಶದ ಹಲವು ಊರುಗಳಲ್ಲಿದ್ದು ವಿದ್ಯಾರ್ಥಿಗಳಿಗೆ ಕೆಲದಶಕಗಳ ಕಾಲ ಕಲಿಸಿದ್ದೀರಿ. ನಿಮ್ಮ ಈ ಶಿಕ್ಷಕ ವೃತ್ತಿಯ ನಡುವೆ ಯಾವ ಬಗೆಯ ಓದು ನಿಮ್ಮನ್ನು ಹೆಚ್ಚಾಗಿ ಆಕರ್ಷಿಸಿತು? ಸ್ವಂತ ಖುಷಿಗಾಗಿ ನಡೆಯುವ ಓದನ್ನು ನೀವು ಹೇಗೆ ನೋಡುತ್ತೀರಿ?
ಕೊಟ್ಟೂರಲ್ಲಿ ಹುಟ್ಟಿದ್ದು ಮಾತ್ರ. ರೆಕ್ಕೆ ಬಲಿಯದ ಮುನ್ನ ಹಕ್ಕಿ ಹಾರಲು ಹೋಗಿ ಎಂಬ ವೀಸಿಯವರ ಪದ್ಯಕ್ಕೂ ನನ್ನ ಹದಿಹರೆಯಕ್ಕೂ ನೇರ ಸಂಬಂಧವಿದೆ, ಒಂದು ಹೊತ್ತಿನ ಊಟ ಅಸ್ತಿತ್ವ ರಕ್ಷಿಸಿಕೊಳ್ಳಲು ಹೋರಾಡುವಂತೆ ಮಾಡಿತು. ಆದ್ದರಿಂದ ಪ್ರೇಮಿಸುವ ಕಾಮಿಸುವ, ಸೌಂದರ್ಯದ ಸಹಜಸಂವೇದನೆ ಆವಾಹಿಸಿಕೊಳ್ಳುವ ವಯಸ್ಸಿನಲ್ಲಿ ಅಕ್ಷರಶಃ ಅಲೆಮಾರಿಯಾದೆ. ಇಪ್ಪತ್ತರೊಳಗೆ ನೂರಾರು ಊರುಗಳಲ್ಲಿ ತಿರುಗಾಡಿರಬಹುದು, ಆ ಸಂದರ್ಭದಲ್ಲಿಯೇ ಬದುಕಿನ ಸಾವಿರಾರು ನಮೂನೆಗಳನ್ನೂ, ಜೀವನಾನುಭವಗಳನ್ನೂ ದಕ್ಕಿಸಿಕೊಂಡೆ. ಈ ಹಿನ್ನೆಲೆಯ ನಾನು ಕಲಿತದ್ದು ಕಲಿಸಿದ್ದು ಜನ್ಮಸ್ಥಳದ ಆಜುಬಾಜಲ್ಲ್ಲಲ.
ದೂರದ ಆಂಧ್ರಪ್ರದೇಶದ ವಂದವಾಗಿಲಿ, ಗೂಳ್ಯಂಗಳಂಥ ಗ್ರಾಮ ಕು(ಸು)ಗ್ರಾಮಗಳಲ್ಲಿ. ಆ ಹಳ್ಳಿಗಳು ಇದ್ದದ್ದು, ಇರುವುದು ಸ್ವಾತಂತ್ರ್ಯೋತ್ತರ ಕ್ರೌರ್ಯದ ಪರಿಸರದಲ್ಲಿ, ಜಮೀನ್ದಾರಿ ವ್ಯವಸ್ಥೆಯ ಪ್ರಭಾವಲಯದಲ್ಲಿ. ಇಂಥ ಪರಿಸರದಲ್ಲಿ ಆರಂಭಿಸಿದ ನನ್ನ ಬದುಕಿಗೆ ಎಡಪಂಥೀಯ ವಿಚಾರಧಾರೆಯ ಆಸರೆ ಮತ್ತು ಉಸ್ತುವಾರಿ ಇತ್ತು. ಗ್ರಾಮೀಣ ಭಾರತದ ಹಿತಾಸಕ್ತಿಯನ್ನು ರಕ್ಷಿಸಲು ಜೀವನದುದ್ದಕ್ಕೂ ಹೆಣಗಿದ ಮಹಾತ್ಮನ ಪ್ರಭಾವಳಿಯಲ್ಲಿದ್ದ ಗಾಂಧೀಜಿ ಮತ್ತು ಬುಡಕಟ್ಟು ಜನಾಂಗಗಳ ಶ್ರೇಯೋಭಿವೃದ್ಧಿ ಸಲುವಾಗಿ ಹೆಣಗಿದ ಪ್ರಸಿದ್ಧ ಮಾನವಶಾಸ್ತ್ರಜ್ಞ ವೆರಿಯರ್ ಎಲ್ವಿನ್ ಅಲ್ಲದೆ ಶ್ರವಣಬೆಳ್ಗೊಳದ ಚಂದ್ರಗಿರಿಯ ತುದಿಯಲ್ಲಿ ಅಜರಾಮರ ಮುಗುಳ್ನಗೆಯನ್ನು ನಿರ್ಮಿಸಿದ ಶಿಲ್ಪಿ ಅರಿಷ್ಠನೇಮಿ ಇದ್ದರು. ಈ ಎಲ್ಲ ಕಂದೀಲುಗಳ ಬೆಳಕಲ್ಲಿ ಆ ಹಳ್ಳಿಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ನಾನಾ ಪ್ರದೇಶಗಳಲ್ಲಿ ಶಿಕ್ಷಕನ ಛದ್ಮವೇಷ ಧರಿಸಿ ಭವಿಷ್ಯೋತ್ತರ ಪ್ರಜೆಗಳನ್ನು ರೂಪಿಸಿದೆ.
ದೈನಂದಿಕ ಅನುಭವಗಳನ್ನು ಕಥೆಕಾದಂಬರಿಗಳ ರೂಪದಲ್ಲಿ ಅಭಿವ್ಯಕ್ತಿಸಿದೆ. ಆದ್ದರಿಂದ ನನ್ನ ದೃಷ್ಟಿಯಲ್ಲಿ ನವ್ಯೋತ್ತರ ಅದರಲ್ಲೂ ಗ್ರಾಮೀಣ ಪರಿಸರ ಮೂಲದ ಲೇಖಕ ಕೇವಲ ಅಕ್ಷರಾವಲಂಬಿಯಾಗಿರದೆ ವಾರಿಯರ್, ಕ್ರುಸೇಡರ್ ಆಗಿರಬೇಕು, ಅಂಥ ಬದುಕನ್ನು ಅಕ್ಷರಶಃ ಬದುಕಿದ ಆತ್ಮತೃಪ್ತಿ ನನ್ನದು. ನನ್ನ ಪರಿಸರವನ್ನು ಚೈತನ್ಯಶೀಲವಾಗಿಡಲಿಕ್ಕೆ ಪೂರಕವಾದ ಸಾಹಿತ್ಯವನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸಿದೆ. ಸಾಹಿತ್ಯಿಕ ಕೃಷಿ ಮತ್ತು ಓದು ಯಾವುದೇ ವ್ಯಕ್ತಿಯ ಒಂಟಿತನವನ್ನು ನೀಗಿಸುತ್ತದೆ, ಸಮಾಜದ ಒಳವಿನ್ಯಾಸಗಳನ್ನು ಪರಿಚಯಿಸುತ್ತದೆ, ಆತ್ಮವಿಶ್ವಾಸವನ್ನು ನೂರ‌್ಮಡಿಗೊಳಿಸುತ್ತದೆ ಮತ್ತು ತನ್ನ ಓದುಗನನ್ನು ತ್ರಿಕಾಲಜ್ಞಾನಿಯನ್ನಾಗಿಸುತ್ತದೆ. ಇದಕ್ಕೆ ನಾನೇ ನಿದರ್ಶನ, ಇದು ಅಹಂಕಾರದ ಮಾತಲ್ಲ.
ಪುಸ್ತಕಗಳ ಹೊರತಾಗಿ ಬದುಕನ್ನು, ಅದರ ಅನುಭವವನ್ನು ನಿಕಟವಾಗಿ ಓದಲು ಶುರುಮಾಡಿದ್ದು ಯಾವಾಗ?
ಇದೆಲ್ಲ ನಡೆದದ್ದು ಬಾಲ್ಯ ಮತ್ತು ಪ್ರೌಢತೆಗಳ ನಡುವೆ ಅಥವಾ ಬಳಿಕ. ನನಗೆ ಪುಸ್ತಕ, ಸಾಹಿತ್ಯ, ವೈಯಕ್ತಿಕ ಬದುಕು ಇವೆಲ್ಲ ಸೆಕೆಂಡರಿ ಮತ್ತು ಈ ಎಲ್ಲ ಪರಿಕರಗಳು ಹತಾರಗಳು, ಮಿಂಚುಳಗಳು ಮಾತ್ರ. ನನ್ನ ಪ್ರಥಮ ಆದ್ಯತೆ ಎಂದರೆ ಸಾಮಾಜಿಕ ಬದುಕು. ಕಳೆದ ಮೂರೂವರೆ ದಶಕದಲ್ಲಿ ಅಪ್ರಕಟಿತ ಗ್ರಾಮೀಣ ಬದುಕಿನ ಪ್ರತಿಯೊಂದು ಪುಟವನ್ನು ಓದುವ ಪ್ರಯತ್ನ ಮಾಡಿದ್ದೆೀನೆ. ಓದಿನಿಂದ ದಕ್ಕಿದ ಅನುಭವವನ್ನು ಅಕ್ಷರ ಸಾನ್ನಿಧ್ಯದಲ್ಲಿ ನಾಡವರೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅಂಥ ಪ್ರಯತ್ನದ ಫಲವೇ ಕಥೆಗಳು ಕಾದಂಬರಿಗಳು.
ಯಾವ ಸಾಹಿತ್ಯ ಕೃತಿಗಳು ನಿಮ್ಮ ಮೇಲೆ ತೀರಾ ಪ್ರಭಾವ ಬೀರಿವೆ? ಅವು ನಿಮ್ಮ ಬದುಕು ಮತ್ತು ಸಾಹಿತ್ಯವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿವೆ ಎಂದು ಅನ್ನಿಸಿದೆಯೇ?
ನನಗೆ ಮಾರ್ಕ್ಸೂ ಅಂಬೇಡ್ಕರೂ ಲೋಹಿಯಾ ಎಷ್ಟು ಮುಖ್ಯವೋ, ಶಂಕರಾಚಾರ್ಯರ ಸೌಂದರ್ಯಲಹರಿ, ಪಂಪ ರನ್ನ ಕುಮಾರವ್ಯಾಸರ ಭಾರತಗಳು ಸಹ ಅಷ್ಟೇ ಮುಖ್ಯ. ಅಲ್ಲದೆ ಕಸೂತಿ, ರಂಗವಲ್ಲಿ, ಪಾಕಕಲೆ, ಜ್ಯೋತಿಷ ಚರಿತ್ರೆ ವಗೈರೆಗಳೆಲ್ಲ ಇಷ್ಟ. ಕಾರಣ ಏನೆಲ್ಲ ಅರಗಿಸಿಕೊಂಡು ಹೊಸದೊಂದನ್ನು ಜಗತ್ತಿಗೆ ದಯಪಾಲಿಸುವ ಚತುಷ್ಪಾದಿ ಗಾರ್ದಭ ನನಗೆ ಮಾದರಿ. ಸೃಜನಶೀಲ ಲೇಖಕ ತನಗೆ ಆಶ್ರಯ ಕಲ್ಪಿಸಿರುವ ಕೋಣೆಯ ಎಲ್ಲಾ ಕಿಟಕಿ ಬಾಗಿಲು ಗವಾಕ್ಷಿಗಳನ್ನು ಸದಾ ತೆರೆದಿಟ್ಟಿರುವುದು ತೀರಾ ಮುಖ್ಯ. ಆದ್ದರಿಂದ ಇಂಥ ಕೃತಿ ಪ್ರಭಾವ ಬೀರಿದೆ ಎಂದು ಹೇಳಿದರದು ಆತ್ಮವಂಚನೆಯಾದೀತು. ಈ ಎಲ್ಲಾ ಓದು ವಿಭಿನ್ನ ಮಸೂರಗಳಿರುವ ದೂರದರ್ಶಕ, ಸೂಕ್ಷ್ಮದರ್ಶಕ.
ನಿಮ್ಮ ಓದನ್ನು ಆರಂಭಿಸಿದ ದಿನಗಳಲ್ಲಿ ಅತ್ಯಂತ ಖುಷಿಕೊಟ್ಟ ಅಥವಾ ಇಷ್ಟವಾದ ಪುಸ್ತಕಗಳ ಬಗ್ಗೆ ಹೇಳಿ.
ಅಕ್ಷರ ಕಲಿತ ರೋಮಾಂಚನವನ್ನು ಸಾರ್ಥಕಗೊಳಿಸಿದ್ದು ಎ.ಆರ್. ಕೃಷ್ಣಶಾಸ್ತ್ರಿಗಳ `ವಚನಭಾರತ'- ಅದರ ಕೈದೀವಿಗೆ ಬೆಳಕಲ್ಲಿ ಗ್ರಂಥಾಲಯಗಳ ಕಪಾಟುಗಳು ತಂತಾನೆ ತೆರೆದುಕೊಂಡವು. ಅಸಂಖ್ಯಾತ ಕೃತಿಗಳು ಸಂತೋಷದಾಯಕ ಓದಿನ ಸಹಾಯದಿಂದ ಅಂತರಂಗವನ್ನು ಪ್ರವೇಶಿಸಿದವು. ಆದ್ದರಿಂದ ಅವು ಇಂಥವೇ ಎಂದು ಹೇಳುವ ಧೈರ್ಯವಿಲ್ಲ.
ಈಗ ಪುಸ್ತಕಗಳ ಓದು ಕಡಿಮೆಯಾಗುತ್ತಿದೆ, ಅದನ್ನು ಓದುತ್ತಿರುವವರು ಹೊತ್ತು ಕಳೆಯಲು ಓದುತ್ತಿರುವ ಹಿರಿಯರು ಎಂಬ ಮಾತುಗಳು  ಆಗಾಗ ಕೇಳಿಬರುತ್ತಲೇ ಇರುತ್ತವೆ. ಕನ್ನಡದ ಪ್ರಮುಖ ಗದ್ಯ ಲೇಖಕರಾಗಿ ನಿಮಗೆ ಕನ್ನಡದ ಸಂದರ್ಭದಲ್ಲಿ ಈ ಕುರಿತು ಏನನ್ನಿಸುತ್ತದೆ?
ಪುಸ್ತಕ ಓದುವವರು ಕಡಿಮೆಯಾಗಿದ್ದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರಕಾಶಕರಾಗಲೀ, ಸಾಲಿಯಾನ ಸಹಸ್ರಗಟ್ಟಲೆ ಪುಸ್ತಕಗಳಾಗಲೀ ಯಾಕೆ ಪ್ರಕಟವಾಗುತ್ತಿದ್ದವು! ಪ್ರಭುಶಂಕರ್, ಶಿವರುದ್ರಪ್ಪ, ಕಣವಿ, ಸಿನ್ನಾರ್, ಎಚ್ಚೆಸ್ಸಾರ್‌ರಂಥವರೊಂದೇ ಅಲ್ಲದೆ ಐಟಿಬಿಟಿ ಕ್ಷೇತ್ರದಲ್ಲಿರುವ ಹೊಸತಲೆಮಾರಿನ ಯುವಕ ಯುವತಿಯರು ಗಂಭೀರ ವಾಚಕರಾಗಿದ್ದಾರೆ. ನನ್ನ ಹೆಚ್ಚಿನ ಕಥೆಕಾದಂಬರಿಗಳನ್ನು ಓದಿ ಪ್ರತಿಕ್ರಿಯಿಸುತ್ತಿರುವವರು ಇವರೇ. ನನ್ನ ಆತ್ಮಕತೆ `ಗಾಂಧಿಕ್ಲಾಸು', `ಅರಮನೆ'ಯನ್ನು ಓದಿ ತಮ್ಮ ಅನುಭವಗಳನ್ನು ಹಂಚಿಕೊಂಡಿರುವವರಲ್ಲಿ ಪೊಲೀಸರು, ಬಸ್ ಕಂಡಕ್ಟರುಗಳು, ಕೃಷಿಕಾರ್ಮಿಕರು, ಹಮಾಲಿಗಳೂ ಇದ್ದಾರೆ.
ಓದನ್ನು ಹೆಚ್ಚು ವ್ಯಾಪಕಗೊಳಿಸಲು ನಮ್ಮ ಪ್ರಕಾಶಕರು, ಲೇಖಕರು ಏನು ಮಾಡಬಹುದು?
ಓದನ್ನು ಜನಪ್ರಿಯಗೊಳಿಸಲು ಕನ್ನಡದ ಹಲವು ಪ್ರಕಾಶಕರು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಲೇ ಇದ್ದಾರೆ. ರಾಜಸ್ತಾನಿ ಮೂಲದ ಸಪ್ನ ಬುಕ್ ಹೌಸ್ ಅತ್ಯಾಕರ್ಷಕ ಬುಕ್ ಮಾಲ್ ವಿನ್ಯಾಸಗೊಳಿಸಿದೆ,  ಕಿರಿಯ ಪ್ರಕಾಶಕ ಐಟಿ ಪದವೀಧರ ಗುರುಪ್ರಸಾದ್ ಪ್ರತಿ ರವಿವಾರ ಲೇಖಕರನ್ನು ತಮ್ಮ ಆಕೃತಿ ಪುಸ್ತಕ ಮಳಿಗೆಗೆ ಬರಮಾಡಿಕೊಂಡು ಸಂವಾದ ಏರ್ಪಡಿಸುತ್ತಿದ್ದಾರೆ. ಓದನ್ನು ವ್ಯಾಪಕಗೊಳಿಸಲು ಮುಖ್ಯವಾಗಿ ಲೇಖಕರು `ಟಾಡಾ' (ಟಿಎ+ಡಿಎ) ಕೈದಿಗಳಾಗಬಾರದು. ಅರ್ಥವಾಗದ ಸಾಹಿತ್ಯಕ ಪರಿಭಾಷೆಯನ್ನು ತ್ಯಜಿಸಿ ಸರಳತೆಯನ್ನು ರೂಢಿಸಿಕೊಳ್ಳಬೇಕು. ಚಾರ್ಲ್ಸ್ ಡಿಕನ್ಸ್ ಸಾಮಾನ್ಯ ಜನರಿರುವಲ್ಲಿಗೆ ಹೋಗಿ ತನ್ನ ಅಪ್ರಕಟಿತ ಕಾದಂಬರಿಯ ಭಾಗಗಳನ್ನು ವಾಚಿಸುತ್ತಿದ್ದನಂತೆ. ಆದರೆ ಇದೆಲ್ಲ ಲೇಖಕ ಅಹಂ ತ್ಯಜಿಸಿದಾಗ ಮಾತ್ರ.
 ಈಗ ಏನನ್ನು ಓದುತ್ತಿದ್ದೀರಿ, ಬರೆಯುತ್ತಿದ್ದೀರಿ ?
ಕಳೆದೆರಡು ದಿವಸಗಳಿಂದ ಓದುತ್ತಿರುವ ಪುಸ್ತಕ ಪ್ರೊ. ಸಿ.ಎನ್. ರಾಮಚಂದ್ರನ್ ಅವರ ಆತ್ಮಕತೆ `ನೆರಳುಗಳ ಬೆನ್ನುಹತಿ'್ತ ಮತ್ತು ಡಾ. ಎಚ್.ಎಸ್. ರಾಘವೇಂದ್ರರಾವ್ ಕನ್ನಡಕ್ಕೆ ತಂದಿರುವ ಕಪ್ಪುಕವಿತೆಗಳ ಸಂಕಲನ. ಓದಿನ ವಿರಾಮದ ನಡುವೆ ವಾರಕ್ಕೊಂದು ಕಥೆ ಬರೆಯುತ್ತಿರುವೆ. ಕಥೆಗಳನ್ನು ಬರೆಯದೆ ತುಂಬ ದಿವಸಗಳಾಗಿದ್ದವು ಅದಕ್ಕೆ. ನಲವತ್ತು ಕಥೆಗಳನ್ನು ಪೂರೈಸಿದ ಬಳಿಕ ಒಂದೆರಡು ಕಾದಂಬರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ. ನನಗೆ ಬರೆಯುವುದೆಂದರೆ ಧ್ಯಾನ, ಓದುವುದೆಂದರೆ ಯೋಗಾಭ್ಯಾಸ.
ನೀವು ಬರೆಯಲು ಆರಂಭಿಸಿದ ದಿನಮಾನಗಳಿಗೆ ಹೋಲಿಸಿದರೆ ನಿಮ್ಮ ಬರಹಗಳಿಗೆ ಓದುಗರ ಸ್ಪಂದನ ಹೇಗಿದೆ ? ನಿಮ್ಮ ಯಾವ ಕೃತಿಗೆ ಓದುಗರ ಹೆಚ್ಚಿನ ಪ್ರತಿಕ್ರಿಯೆ ಬರುತ್ತದೆ?
ಸಮಾಜದ ಎಲ್ಲಾ ರಂಗದ ಎಲ್ಲಾ ಜಾಯಮಾನದ ಓದುಗರು ನನ್ನ ಕೃತಿಗಳಂಗಳದಲ್ಲಿದ್ದಾರೆ, ಅಥವಾ ನನ್ನ ಬಹುಪಾಲು ಕೃತಿಗಳು ವಾಚಕರ ಅಭಿಮಾನದಂಗಳದಲ್ಲಿವೆ. ವಾಚಕರ ಅಭಿಮಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಾನು ಅದೃಷ್ಟವಂತ. ಆದರೆ ನನ್ನ ಶಾಮಣ್ಣ, ಅರಮನೆಯಂಥ ಕಾದಂಬರಿಗಳು, ಆತ್ಮಕತೆ ಗಾಂಧಿಕ್ಲಾಸು ಮತ್ತು ಅಂಕಣ ಬರಹಗಳ ಸಂಕಲನ ರಾಯಲಸೀಮೆ ಹೆಚ್ಚು ಜನಪ್ರಿಯಗೊಂಡಿರುವ ಕೃತಿಗಳು.
ಮಕ್ಕಳ ಓದಿಗೆ ಯಾವ ಲೇಖಕ/ ಕೃತಿಯನ್ನು ನೀವು ಶಿಫಾರಸು ಮಾಡಲು ಬಯಸುತ್ತೀರಿ?
ಒಂದಾನೊಂದು ಕಾಲದಲ್ಲಿ ಚಿಕ್ಕವರಿದ್ದ ನಮಗೆ ಥಟ್ಟನೆ ನೆನಪಾಗುವುದು ಪಂಜೆ, ರಾಜರತ್ನಂ, ಬಿರಾದಾರ ಗುಂಡಣ್ಣರಂಥ ಲೇಖಕರ ಮಕ್ಕಳ ಪದ್ಯಗಳು, ಆಗ ಬಾಯಿಪಾಠ ಮಾಡಿದ ಹಲವು ಪದ್ಯಗಳು ಈಗಲೂ ನೆನಪಲ್ಲಿವೆ. ಕಾರಣ ಆ ಕಾಲದಲ್ಲಿ ಕನ್ನಡ ಉಪಾಧ್ಯಾಯರು ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ವಿಸ್ಮಯ ಹುಟ್ಟಿಸುವ ರೀತಿಯಲ್ಲಿ ಬೋಧಿಸುತ್ತಿದ್ದರು. ನಮ್ಮಳಗಿನ ಎಳಸು ಬರಹಗಾರನನ್ನು ಪ್ರೋತ್ಸಾಹಿಸುತ್ತಿದ್ದರು. ಆ ಕಾಲದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪಠ್ಯಕ್ರಮವೂ ಭಾಷೆ ಮತ್ತು ಸಾಹಿತ್ಯಕ್ಕೆ ಪೂರಕವಾಗಿತ್ತು. ಆದರೆ ಬದಲಾಗಿರುವ ಸನ್ನಿವೇಶದಲ್ಲಿ ಕನ್ನಡ ಪಠ್ಯ ಇರುವುದು ಕಣ್ಣೊರೆಸುವುದಕ್ಕೆ ಮಾತ್ರ. ಕಲಿಕೆ ಮತ್ತು ಕಲಿಸುವುದರ ನಡುವೆ ಆಸಕ್ತಿ ವಿಸ್ಮಯಗಳಿಲ್ಲ. ಇವೆಲ್ಲ ಗಮನದಲ್ಲಿಟ್ಟುಕೊಂಡು ನವೋದಯ ಕಾಲದ ಶಿಶುಸಾಹಿತ್ಯವನ್ನು ವರ್ತಮಾನ ಸಂದರ್ಭದಲ್ಲಿ ಅಳವಡಿಸುವುದು ಮುಖ್ಯ.

ಗುರುವಾರ, ಮೇ 2, 2013

ಬದಲಾವಣೆ ನಿರೀಕ್ಷೆಯಲ್ಲಿ ತುಯ್ದಾಡುತ್ತಿರುವ ಬಳ್ಳಾರಿ

-ದಿನೇಶ್ ಅಮಿನ್ ಮಟ್ಟು


ಸೌಜನ್ಯ: ಪ್ರಜಾವಾಣಿ


 `ನಳದಲ್ಲಿ ದಿನಾ ಉಪ್ಪು ನೀರು ಬಿಡ್ತಾರೆ, ಮೂರು ದಿವ್ಸಕ್ಕೊಮ್ಮೆ ಒಂದು ತಾಸು ಸಿಹಿನೀರು. ಸವುಳು ನೀರು ಕುಡಿದು ಮಕ್ಕಳ ಕೈಕಾಲೆಲ್ಲ ಸೊಟ್ಟಗಾಗಿವೆ' ಎಂದು ಗೋಳಾಡಿದರು ಮೋಕಾ ಗ್ರಾಮದ ಜಲಜಮ್ಮ. `ಎಂಟನೆ ತರಗತಿ ವರೆಗೆ ಮಾತ್ರ ಇಲ್ಲಿ ಸಾಲಿ ಇದೆ, ಮುಂದೆ ಕಲಿಯುವವರು ಬಳ್ಳಾರಿಗೆ (23 ಕಿ.ಮೀ. ದೂರ) ಹೋಗ್ಬೇಕು, ಮಕ್ಕಳು ನಡೆದುನಡೆದು ಸವೆದುಹೋಗ್ಯಾವೆ' ಎಂದು ದುಃಖಿಸಿದರು ಕಾರೇಕಲ್ ಗ್ರಾಮದ ಈರಮ್ಮ.

`ಮೂರು ವರ್ಷಗಳಿಂದ ಮಳೆ ಇಲ್ಲ, ಒಂದು ಹೆಕ್ಟೇರ್ ಬೆಳೆ ನಷ್ಟಕ್ಕೆ ಐದು ಸಾವಿರ ರೂಪಾಯಿ ಪರಿಹಾರ ಕೊಡ್ತೇವೆ ಎಂದು ಹೇಳಿ ಹೋದರು, ಕೈಗೆ ಬಂದದ್ದು 500 ರೂಪಾಯಿ' ಎಂದು ದೂರಿದರು ೀಳ್ಳಗುರ್ಕಿಯ ರೈತ ಶಂಕ್ರಪ್ಪ. `ಊರಲ್ಲೊಂದು ಸರ್ಕಾರಿ ದವಾಖಾನೆ ಇದೆ, ಅಲ್ಲಿ ಡಾಕ್ಟರ್ ಇಲ್ಲ, ಯಾರು ಹೋಗಿ ಕೇಳಿದರೂ ಅಲ್ಲಿರುವ ನರ್ಸಮ್ಮ ಔಷಧಿ ಇಲ್ಲ ಎಂದು ರಾಗ ತೆಗೆಯುತ್ತಾಳೆ' ಎಂದು ಸಿಟ್ಟುಮಾಡಿಕೊಂಡರು ವೀರಾಪುರದ ಸಮಾಜ ಸೇವಕ ಹೊನ್ನೂರಪ್ಪ...

ಈ ಗ್ರಾಮಗಳ ಜನರ ಕರುಣಾಜನಕ ಬದುಕಿನ ಕತೆಯನ್ನು ಹೀಗೆ ಹೇಳುತ್ತಲೇ ಹೋಗಬಹುದು. ಇವರೆಲ್ಲ ಆಂಧ್ರಪ್ರದೇಶದ ಗಡಿಯಿಂದ ಮೂರು-ನಾಲ್ಕು ಕಿ.ಮೀ. ದೂರದಲ್ಲಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚೇಳ್ಳಗುರ್ಕಿ, ವೀರಾಪುರ, ಕಾರೇಕಲ್, ಮೋಕಾ ಗ್ರಾಮಗಳಿಗೆ ಸೇರಿದವರು. ಈ ಕ್ಷೇತ್ರದ ಹಾಲಿ ಶಾಸಕ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಸಚಿವ ಶ್ರಿರಾಮುಲು.

ಈ ಗ್ರಾಮಗಳಿಗೆ ಹೋಗುವ ದಾರಿಯಲ್ಲಿಯೇ ಸಿಗುವ ಜೋಳದರಾಶಿಯಲ್ಲಿ ಅರಮನೆಯಂತೆ ಕಟ್ಟಿದ ರಾಮುಲು ಅವರ ಕುಟುಂಬದ ಮೂಲ ಮನೆ ಇದೆ. `ನಮ್ಮೂರಿಗೆ ಯಜಮಾನರೇ ಇಲ್ಲದಂಗ್ ಆಗಿದೆ' ಎಂದಷ್ಟೇ ಹೇಳಿ ತನ್ನ ಹೆಸರನ್ನೂ ತಿಳಿಸದೆ ಆ ಮನೆ ಕಡೆ ಬೆರಳು ಮಾಡಿ ಹೊರಟೇ ಹೋದ ಬಸ್ಸಿಗೆ ಕಾಯುತ್ತಾ ನಿಂತಿದ್ದ ರಾಜವೀರಪ್ಪ.

`ನೀವು ಹೋಗಿದ್ದು ನಾಲ್ಕೈದು ಹಳ್ಳಿಗಳು ಮಾತ್ರ ಸಾರ್, ಇಡೀ ಬಳ್ಳಾರಿ ಜಿಲ್ಲೆ ಹೀಗೆಯೇ ಇದೆ' ಎಂದರು ನನ್ನ ಪ್ರವಾಸದ ಅನುಭವವನ್ನು ಕೇಳಿದ ಬಳ್ಳಾರಿಯ ಪತ್ರಕರ್ತ ಮಿತ್ರರು. 
 
ಹೀಗಿದ್ದರೂ ಶ್ರಿರಾಮುಲು ಈ ಬಾರಿಯೂ ಗೆದ್ದುಬಿಟ್ಟರೆ ನನಗಂತೂ ಆಶ್ಚರ್ಯವಾಗಲಾರದು. ಇದಕ್ಕೆ ಕಾರಣ ತಮ್ಮ ಕಷ್ಟ-ಕಾರ್ಪಣ್ಯಗಳನ್ನೆಲ್ಲ ನೋವಿನಿಂದ ತೋಡಿಕೊಂಡ ಜನರ ಇನ್ನೊಂದು ಮುಖದ ದರ್ಶನ. `ಜೆಡಿಎಸ್' ಎಂದು ಸ್ನೇಹಿತರಿಂದಲೇ ಆರೋಪಕ್ಕೊಳಗಾದ ಚೇಳ್ಳಗುರ್ಕಿಯ ಶಂಕ್ರಪ್ಪ ಅವರನ್ನು ಹೊರತುಪಡಿಸಿ ಉಳಿದಂತೆ ಜಲಜಮ್ಮ, ಈರಮ್ಮ, ಹೊನ್ನೂರಪ್ಪ ಮತ್ತಿತರರು ಶ್ರಿರಾಮುಲು ವಿರುದ್ಧ ಚಕಾರ ಎತ್ತಲಿಲ್ಲ.

`ರಾಮುಲು ಒಳ್ಳೆ ಮನುಷ್ಯ, ಸುತ್ತ ಇರೋ ಜನ ಸರಿ ಇಲ್ಲ', `ಆಯಪ್ಪ ಏನ್ ಮಾಡ್ಲಿಕಾಗ್‌ತ್ತೆ, ಇಡೀ ರಾಜ್ಯ ಸುತ್ತಬೇಕು', `ನಮ್ ಹಣೇಲಿ ಇದೇ ರೀತಿ ಬರೆದುಬಿಟ್ಟಿರುವಾಗ ಬೇರೆಯವರನ್ನು ದೂರಿ ಏನ್ ಲಾಭ?' ಎಂಬಿತ್ಯಾದಿ ಹೇಳಿಕೆಗಳ ಮೂಲಕ ಅವರೆಲ್ಲ ಪರೋಕ್ಷವಾಗಿ ಶ್ರೀರಾಮುಲು ಅವರನ್ನು ಸಮರ್ಥಿಸತೊಡಗಿದ್ದರು. ಊರಿನ ಸಮಸ್ಯೆಗಳನ್ನು ಭೂತಾಕಾರವಾಗಿ ಬಣ್ಣಿಸಿದ ಚೇಳ್ಳಗುರ್ಕಿಯ ಹಿರಿಯರೊಬ್ಬರು ಕೊನೆಗೆ ಶ್ರೀರಾಮುಲು ಅವರನ್ನು ಹೊಗಳತೊಡಗಿದಾಗ ಪಕ್ಕದಲ್ಲಿದ್ದ ಹಿರಿಯನೊಬ್ಬ ಬಳಿಬಂದು ಪಿಸುದನಿಯಲ್ಲಿ `ಅವನ ಜಾತಿ ಕೇಳಿಬಿಡಿ ಸತ್ಯ ಗೊತ್ತಾಗುತ್ತದೆ' ಎಂದ. ನಾನು ಕೇಳಲಿಲ್ಲ ಸತ್ಯ ಗೊತ್ತಾಗಿತ್ತು.
ಅಂದಾಜು ಎರಡರಿಂದ ನಾಲ್ಕು ಸಾವಿರದವರೆಗೆ ಜನಸಂಖ್ಯೆ ಹೊಂದಿರುವ ಈ ಗ್ರಾಮಗಳಲ್ಲಿ ಬಹುಸಂಖ್ಯೆಯಲ್ಲಿರುವವರು ಶ್ರೀರಾಮುಲು ಅವರು ಸೇರಿರುವ ನಾಯಕ ಜಾತಿಯವರು. ಈ ಮುಗ್ಧ ಜನರ ದೂರು, ದುಮ್ಮಾನಗಳೆಲ್ಲ ಮತಯಂತ್ರದ ಬಟನ್ ಒತ್ತುವ ಗಳಿಗೆಯಲ್ಲಿ ಉಕ್ಕಿಬರುವ ಜಾತಿ ಪ್ರೀತಿ ಎದುರು ಕರಗಿಹೋಗುತ್ತದೆ. ಇದು ಶ್ರಿರಾಮುಲು ಅವರಿಗೆ ಮಾತ್ರವಲ್ಲ, ಕೇವಲ ಜಾತಿ ಮತ್ತು ದುಡ್ಡನ್ನಷ್ಟೇ ಬಳಸಿಕೊಂಡು ರಾಜಕೀಯ ಮಾಡುವ ಎಲ್ಲರಿಗೂ ಗೊತ್ತಿರುವ ಸತ್ಯ.

ಜಾತಿ ಆಗಲೇ ಶ್ರಿರಾಮುಲು ಅವರನ್ನು ಅರ್ಧ ಗೆಲ್ಲಿಸಿದೆ, ಇನ್ನರ್ಧ ಗೆಲುವು ಸಂಪಾದನೆಗಾಗಿ ಅವರು `ಕೊಡುಗೈ ದಾನಿ'ಗಳಾಗಬೇಕು. ಮೋಕಾದಲ್ಲಿ ನಮ್ಮ ಕಾರು ಕಂಡು ಆಸೆಯಿಂದ ಓಡಿಬಂದ ಮಧ್ಯವಯಸ್ಕರ ಗುಂಪೊಂದು ವಿಷಯ ತಿಳಿದು `ಹಿಂದೆಲ್ಲ ಇಷ್ಟೊತ್ತಿಗೆ ಒಂದು ರೌಂಡು ಮುಗಿದುಹೋಗುತ್ತಿತ್ತು, ಈ ಬಾರಿ ಬಹಳ ಸ್ಟ್ರಿಕ್ಟ್ ಅಂತೆ ಏನೂ ಬಂದಿಲ್ಲ' ಎಂದು ನಿರಾಶೆ ವ್ಯಕ್ತಪಡಿಸಿದರು. `ಲೀಡರ್‌ಗಳ ಕೈಗೆ ಕೊಟ್ಟು ಹೋಗಿದ್ದಾರಂತೆ, ನಮ್ಮ ಕೈಗೆ ಬಂದಿಲ್ಲ' ಎಂದರು ಇನ್ನೊಬ್ಬ ವ್ಯಕ್ತಿ ದೂರು ಹೇಳುವ ದನಿಯಲ್ಲಿ..

`ಹಿಂದಿನ ಚುನಾವಣೆಯ ಕಾಲದಷ್ಟು ದುಡ್ಡು ಈಗ ಹರಿದಾಡುತ್ತಿಲ್ಲ' ಎನ್ನುವ ಅಭಿಪ್ರಾಯ ಇಲ್ಲಿ ಸಾರ್ವತ್ರಿಕವಾಗಿದೆ. ಜನಾರ್ದನ ರೆಡ್ಡಿಯವರ ಅಣ್ಣ ಸೋಮಶೇಖರ ರೆಡ್ಡಿ ಚುನಾವಣೆಯಿಂದ ಹಿಂದೆ ಸರಿದದ್ದು, ಮತ್ತೊಬ್ಬ ಅಣ್ಣ ಕರುಣಾಕರ ರೆಡ್ಡಿ ಬಿಜೆಪಿಯಲ್ಲಿಯೇ ಉಳಿದದ್ದು,  ಶ್ರಿರಾಮುಲು ಅವರ ಬಂಟ ನಾಗೇಂದ್ರ ಕೂಡ್ಲಿಗಿಯಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು... ಈ ಬೆಳವಣಿಗೆಗಳೆಲ್ಲ ಬಳ್ಳಾರಿ ಜನರನ್ನು ಗೊಂದಲಕ್ಕೆ ತಳ್ಳಿದೆ. `ರೆಡ್ಡಿ ಕುಟುಂಬ ಮತ್ತು ಶ್ರಿರಾಮುಲು ಸಂಬಂಧ ಕೆಟ್ಟುಹೋಗಿದೆ, ಅದಕ್ಕೆ ದುಡ್ಡಿಲ್ಲ' ಎನ್ನುವವರು ಇದ್ದಹಾಗೆಯೇ `ಇವೆಲ್ಲ ಅವರೇ ಕೂಡಿ ಮಾಡುತ್ತಿರುವ ನಾಟಕ' ಎನ್ನುವವರೂ ಇದ್ದಾರೆ.
`ಈ 10-12 ವರ್ಷಗಳಲ್ಲಿ ನಮ್ಮ ಜನರ ಆತ್ಮಸಾಕ್ಷಿಯೇ ಸತ್ತುಹೋಗಿದೆ' ಎಂದು ಸಿಟ್ಟಿನಿಂದಲೇ ಹೇಳಿದರು ಲೋಹಿಯಾ ಪ್ರಕಾಶನದ  ಚೆನ್ನಬಸವಣ್ಣ ಬಳ್ಳಾರಿಯ ಕತೆಯನ್ನು ಬಣ್ಣಿಸುತ್ತಾ.  ಹೆಚ್ಚುಕಡಿಮೆ ದಶಕದ ಅವಧಿಯಲ್ಲಿ ಕಣ್ಣೆದುರೇ ಬದಲಾಗಿ ಹೋದ ಬಳ್ಳಾರಿಯ ಮುಖಗಳನ್ನು ಸಮೀಪದಿಂದ ನೋಡಿ ಸಂಕಟಪಡುತ್ತಿರುವವರು ಅವರು.

`ಕಕ್ಕ, ಮಾಮಾ, ಅಣ್ಣಾ ಈ ರೀತಿ ಸಂಬಂಧ ಹಚ್ಚಿ ಮಾತನಾಡಿಯೇ ನಮಗೆ ಅಭ್ಯಾಸ. ಹಿಂದೆಯೂ ಇಲ್ಲಿಯೂ ಒಂದಷ್ಟು ಗೂಂಡಾಗಿರಿ, ದರ್ಪ ದೌರ್ಜನ್ಯಗಳಿದ್ದವು. ಆದರೆ ಸಾಮಾನ್ಯ ಜನರು ಅವರ ಪಾಡಿಗೆ ಬದುಕಲು ತೊಂದರೆ ಆಗಿರಲಿಲ್ಲ. ಇದ್ದಕ್ಕಿದ್ದ ಹಾಗೆ ಎಲ್ಲವೂ ಬದಲಾಗಿ ಹೋಯಿತು. ಗಣಿಲೂಟಿಕೋರರು ನಡೆಸಿದ ಅಟ್ಟಹಾಸದಿಂದ ನಲುಗಿಹೋಗಿರುವ ನಮ್ಮ ಬಳ್ಳಾರಿ ಸುಧಾರಿಸಿಕೊಳ್ಳಲು ಇನ್ನು ಕೆಲವು ವರ್ಷಗಳು ಬೇಕಾಗಬಹುದು' ಎಂದು ನಿಟ್ಟುಸಿರುಬಿಟ್ಟರು ಚೆನ್ನಬಸವಣ್ಣ.
`ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಬೀದಿಬದಿಯಲ್ಲಿ ಮುತ್ತುರತ್ನ ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು...' ಎಂಬ ಕತೆಯನ್ನು ಕೇಳುತ್ತಾ ಬೆಳೆದವರು ಬಳ್ಳಾರಿಯ ಜನ. ಇದ್ದಕ್ಕಿದ್ದ ಹಾಗೆ ಅವರು ಗತವೈಭವವನ್ನೇ ಹೋಲುವ ಘಟನಾವಳಿಗಳಿಗೆ ಮೂಕ ಸಾಕ್ಷಿಯಾಗುವಂತಾಯಿತು. `ರೆಡ್ಡಿಗಳು ಬೆಳಿಗ್ಗೆ ತಿಂಡಿತಿನ್ನಲು ಬೆಂಗಳೂರಿಗೆ, ಮಧ್ಯಾಹ್ನ ಬಿರಿಯಾನಿ ತಿನ್ನಲು ಹೈದರಾಬಾದ್‌ಗೆ ಹೆಲಿಕಾಪ್ಟರ್‌ನಲ್ಲಿ ಹೋಗುತ್ತಾರಂತೆ', `ರೆಡ್ಡಿಗಳು ಚಿನ್ನದ ಕುರ್ಚಿಯಲ್ಲಿ ಕೂರ‌್ತಾರಂತೆ, ಚಿನ್ನದ ಚಮಚದಲ್ಲಿ ಊಟ ಮಾಡ್ತಾರಂತೆ' ಎಂಬಿತ್ಯಾದಿ ಸುದ್ದಿಗಳು ಬಳ್ಳಾರಿಯ ಗಾಳಿಯಲ್ಲಿ ನಿತ್ಯ ಹಾರಾಡುತ್ತಿದ್ದುದನ್ನು ಇಲ್ಲಿನ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ.

ಇಷ್ಟೆಲ್ಲ ಮೆರೆದಾಡಿದ, ಇಡೀ ಸರ್ಕಾರ ತಮ್ಮ ಅಂಗೈಮುಷ್ಟಿಯಲ್ಲಿದೆ ಎಂದು ಹೇಳಿಕೊಂಡು ಅಡ್ಡಾಡುತ್ತಿದ್ದ ರೆಡ್ಡಿಸೋದರರು ಕನಿಷ್ಠ ಬಳ್ಳಾರಿ ನಗರದ ಸುಧಾರಣೆಯನ್ನಾದರೂ ಮಾಡಬಹುದಿತ್ತು. ಒಂದೆರಡು ಮುಖ್ಯ ರಸ್ತೆಗಳನ್ನು ಹೊರತುಪಡಿಸಿದರೆ ಬಳ್ಳಾರಿ ನಗರ ದೊಡ್ಡ ಕೊಳೆಗೇರಿಯಂತಿದೆ. ಗುಂಡಿಬಿದ್ದ ರಸ್ತೆಗಳು, ಕಿತ್ತುಹೋಗಿರುವ ಕಾಲ್ದಾರಿಗಳು, ಅನಿಯಂತ್ರಿತವಾಗಿ ನಡೆಯುತ್ತಿರುವ ಒತ್ತುವರಿಗಳು, ಕೈಕೊಡುತ್ತಲೇ ಇರುವ ವಿದ್ಯುತ್, ಮರೀಚಿಕೆಯಂತೆ ಕಾಡುತ್ತಿರುವ ಕುಡಿಯುವ ನೀರು- ಒಂದು ನಗರಕ್ಕೆ ಅವಶ್ಯಕವಾದ ಮೂಲಸೌಲಭ್ಯಗಳ್ಯಾವುದೂ ಈ ನಗರದಲ್ಲಿ ಇಲ್ಲ.

`ಯಾಕೆ ಇಲ್ಲ ಎಂದರೆ ಬೇಕು ಎಂದು ಕೇಳುವವರೇ ಇಲ್ಲ ಸಾರ್ ಇಲ್ಲಿ. ಎಲ್ಲವನ್ನೂ ಸಹಿಸಿಕೊಂಡು ಇವೆಲ್ಲ ಸಾಮಾನ್ಯ ಎಂಬಂತೆ ಜನ ಬದುಕುತ್ತಿದ್ದಾರೆ. ಬೇರೆ ನಗರಗಳನ್ನು ನೋಡಿ ಬಂದ ನಮಗೆ ಇವೆಲ್ಲ ನೋಡಿ ಅಸಹ್ಯ ಅನಿಸುತ್ತಿದೆ' ಎಂದ ನಿವೃತ್ತ ಎಂಜಿನಿಯರ್ ಶಿವರಾಮಯ್ಯನವರ ಮಾತಿನಲ್ಲಿ ಅಸಹಾಯಕತೆ ಇತ್ತು.

`ಜನರಲ್ಲಿ ದುಡ್ಡಿನ ಲೋಭವನ್ನು ಹುಟ್ಟಿಸಿದ್ದು ಬಿಟ್ಟರೆ ಅವರೇನೂ ಮಾಡಲಿಲ್ಲ, ಕೆಟ್ಟುಹೋದವರಲ್ಲಿ ಹೆಚ್ಚಿನವರು ಯುವಕರು. ಒಂದು ತಲೆಮಾರು ಹಾಳಾಗಿ ಹೋಯಿತು' ಎಂದರು ವೀರಾಪುರದಲ್ಲಿರುವ ತಮ್ಮ ಮನೆಗೆ ಬಳ್ಳಾರಿಯಿಂದ ಬಂದಿದ್ದ ವಕೀಲ ಜಯರಾಮಯ್ಯ. `ಬದಲಾವಣೆ ಎಂದರೆ ಏನು?' ಒಬ್ಬ ಗಣಿಧಣಿಯನ್ನು ಸೋಲಿಸಿ ಇನ್ನೊಬ್ಬನನ್ನು ಆರಿಸುವುದೇ? ಸುಮ್ಮನೆ ರೆಡ್ಡಿ ಸೋದರರನ್ನು ದೂರಿ ಏನು ಪ್ರಯೋಜನ ಸಾರ್. ಈ ಕಾಂಗ್ರೆಸ್ ಪಕ್ಷದವರೇ ಗಣಿಲೂಟಿಯ ಮೂಲಪುರುಷರು. ಅವರು ಹೋಗಿ ಇವರು ಬರಬಹುದು. ಬಳ್ಳಾರಿಗೆ ಗಣಿಲೂಟಿಕೋರರಿಂದ ಮುಕ್ತಿ ಇಲ್ಲ' ಎಂದು ಸಣ್ಣಭಾಷಣವನ್ನೇ ಮಾಡಿಬಿಟ್ಟ ತನ್ನನ್ನು ವಿದ್ಯಾರ್ಥಿ ಮುಖಂಡ ಎಂದು ಪರಿಚಯಿಸಿಕೊಂಡ ಚೇತನ್.

`ಅಷ್ಟೊಂದು ನಿರಾಶರಾಗಬೇಕಾದ ಅಗತ್ಯವೂ ಇಲ್ಲ. ಅತಿರೇಕದ ಎರಡು ತುದಿಗಳನ್ನು ನಾವು ನೋಡಿ ಆಗಿದೆ. ದುಡ್ಡಿನ ಬಲದಿಂದ ನಿರ್ಲಜ್ಜರೀತಿಯಲ್ಲಿ ಮೆರೆದವರನ್ನೂ ನೋಡಿದ್ದೇವೆ. ಆ ರೀತಿ ಮೆರೆದವರು ಜೈಲು ಕಂಬಿ ಎಣಿಸುತ್ತಿರುವುದನ್ನೂ ನೋಡಿದ್ದೇವೆ. ಈ ಬೆಳವಣಿಗೆಗಳನ್ನು ಬಳ್ಳಾರಿಯ ಜನ ಹೇಗೆ ಸ್ವೀಕರಿಸಿದ್ದಾರೆ? ಅವರು ಕಲಿತ ಪಾಠವೇನು? ಇದು ಈ ಚುನಾವಣೆಯ ಫಲಿತಾಂಶದಲ್ಲಿ ಗೊತ್ತಾಗಲಿದೆ' ಎಂದು ಹೇಳಿದ ಚೆನ್ನಬಸವಣ್ಣ ಅವರ ಮಾತಿನಲ್ಲಿ ಬಳ್ಳಾರಿಯ ಜನರ ಬಗ್ಗೆ ಭರವಸೆ ಇತ್ತು.

ಗುರುವಾರ, ಫೆಬ್ರವರಿ 7, 2013

ಕೋ. ಚೆನ್ನಬಸಪ್ಪ ಅವರೊಂದಿಗೆ ಡಾ. ರಹಮತ್ ತರೀಕೆರೆ ಮಾತುಕಥೆ




ಕೋ. ಚೆನ್ನಬಸಪ್ಪ ಅವರೊಂದಿಗೆ ಡಾ. ರಹಮತ್ ತರೀಕೆರೆ ಮಾತುಕಥೆ

(ಕೋ. ಚೆನ್ನಬಸಪ್ಪನವರು (೧೯೨೨) ಕನ್ನಡದ ಹಿರಿಯ ಲೇಖಕರಲ್ಲಿ ಒಬ್ಬರು. ಮೂಲತಃ ಬಳ್ಳಾರಿ ಜಿಲ್ಲೆಯವರಾದ ಅವರು ಜಿಲ್ಲಾ ನ್ಯಾಯಾದಿsಶರಾಗಿ ಸೇವೆ ಸಲ್ಲಿಸಿದವರು. ಕುವೆಂಪು ಮತ್ತು ಅರವಿಂದರ ಶಿಷ್ಯರಾದ ಕೋಚೆ, ಮತೀಯವಾದ ಮತ್ತು ಸಾರ್ವಜನಿಕ ಬದುಕಿನ ಭ್ರಷ್ಟಾಚಾರಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದವರು. ಅವರು ರಚಿಸಿದ ’ದಾಸರಯ್ಯನ ಪಟ್ಟಿ’, ’ಹಿಂದಿರುಗಿ ಬರಲಿಲ್ಲ’, ’ಬೇಡಿಕಳಚಿತು ದೇಶ ಒಡೆಯಿತು’, ’ನ್ಯಾಯಾದಿsಶನ ನೆನಪುಗಳು’ ಮುಂತಾದ ಕೃತಿಗಳು ಮಹತ್ವದವಾಗಿವೆ. ಸ್ವಾತಂತ್ರ್ಯ ಮತ್ತು ಏಕೀಕರಣ ಚಳುವಳಿಗಳಲ್ಲಿ ಭಾಗವಹಿಸಿದ ಕೋಚೆಯವರು, ತಮ್ಮ ಬದುಕು, ಸಾಹಿತ್ಯ ರಚನೆ ಹಾಗೂ ಹೋರಾಟಗಳಿಗೆ ಸಂಬಂದಿsಸಿದ ಅನೇಕ ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ-ಸಂ.)

ಸಂ:ಸಾರ್, ಈಗ ಹೊಸದಾಗಿ ಏನು ಬರವಣಿಗೆ ಮಾಡ್ತಾ ಇದೀರಿ?

ಕೋಚೆ: (ತಮ್ಮ ಎದುರಿದ್ದ ಒಂದು ಪುಸ್ತಕ ತೋರಿಸುತ್ತ) ಹೊಸದಾಗಿ ಮೆಟೀರಿಯಲ್ ಸಿಕ್ಕಿದೆ ಈಗ, ಬ್ರಿಟಿಷ್ ಸ್ಟೇಷನರಿ ಪಬ್ಲಿಕೇಶನ್ ಅಂತ ಬರ್ತದೆ. ಯಾವುದೇ ಒಂದು ಘಟನೆಯಾದ ೫೦ ವರ್ಷಗಳ ತರುವಾಯ ಪಬ್ಲಿಕ್ ಮಾಡ್ತಾರೆ. ಸ್ವಾತಂತ್ರ್ಯ ೧೯೪೭ರಲ್ಲಿ ಬಂತಲ್ಲ -ಆಲ್ಲಿಂದ ೧೯೯೭ನೇ ಇಸವಿ ತನಕ, ಬ್ರಿಟಿಷ್ ಸರ್ಕಾರಕ್ಕೂ ಇಂಡಿಯಾ ಸರ್ಕಾರಕ್ಕೂ ಆಗ ಆದಂತಹ ಪತ್ರ ವ್ಯವಹಾರವನ್ನು ಪಬ್ಲಿಶ್ ಮಾಡಿದ್ದಿಲ್ಲ, ಈಗ ಮಾಡಿದ್ದಾರೆ. ಹೀಗೆ ಪಬ್ಲಿಶ್ ಮಾಡಿದ್ದರಲ್ಲಿ ಸಾವರ್ಕರರ ಹೊಸ ಚರಿತ್ರೆ ಬಯಲಿಗೆ ಬಂದಿದೆ. ಅದನ್ನು ಓದಿ ನನಿಗೆ ಭಾಳ ಬೇಸರ, ಬೇಸರದ ಜೊತೆಗೆ ಆಕ್ರೋಶ ಉಂಟಾಯ್ತು. ಈ ದೇಶದ ಸ್ವಾತಂತ್ರ್ಯಕ್ಕಾಗಿ ಯಾರು ತಮ್ಮ ಪ್ರಾಣಾರ್ಪಣೆ ಮಾಡಿದರೊ, ಹಿಂದು ಮುಸ್ಲಿಂ ಐಕ್ಯತೆಗಾಗಿಯೇ ಪ್ರಾಣಾರ್ಪಣೆ ಮಾಡಿದರೊ, ಅವರ ಭಾವಚಿತ್ರದ ಎದುರಿಗೇನೇ ಈ ಹಿಂದು ಮುಸ್ಲಿಮರನ್ನು ೞsದ್ರ ಮಾಡಿದ ಸಾವರ್ಕರರ ಭಾವಚಿತ್ರ ಹಾಕಿದ್ದು ಒಂದು ದೊಡ್ಡ ಅಪಚಾರ.

ಸಂ: ಸಾವರ್ಕರ್ ಜೀವನ ಮೊದಲ ಘಟ್ಟದಲ್ಲಿ ಹಾಗಿರಲಿಲ್ಲ. ಅವರು ೧೮೫೭ರ ಸ್ವಾತಂತ್ರ್ಯ ಸಂಗ್ರಾಮ ಕುರಿತು ಬರೆದ ಕೃತಿಯನ್ನು ಓದಿದರೆ ಹಾಗನಿಸುವುದಿಲ್ಲ. ಆದರೆ ಜೀವನದ ಎರಡನೇ ಭಾಗದಲ್ಲಿ ಅವರು ಬ್ರಿಟಿಷರಿಗೆ ಬೆಂಬಲಿಸುವ ಮತ್ತು ಮತೀಯವಾದಕ್ಕೆ ತಾತ್ವಿಕ ತಳಹದಿ ನೀಡುವ ಕೆಲಸ ಮಾಡಿದರು.

ಕೋಚೆ: ಹಾಂ, ಬ್ರಿಟಿಷರಿಗೆ ಬೆಂಬಲಿಸಿದ ಮನುಷ್ಯ ಅವರು. ಆ ದಾಖಲೆಯನ್ನೆಲ್ಲ ಅಷ್ಟೊತ್ತಿಗೆ ನಾನು ಓದಿದ್ದೆ. ಓದಿದ ಮೇಲೆ ಏನಾದರೂ ಬರೀಬೇಕು ಅಂತ ಇತ್ತು. ಆಗ ನವಕರ್ನಾಟಕದವರು ಹೇಳಿದರು, ’ಬರೀರಿ ನಾವು ಪ್ರಕಟ ಮಾಡ್ತೀವಿ’ ಅಂತ ಹೇಳಿದರು. ಈಗ ಅಧಕ್ಕರ್ಧ ಮುಗಿಸಿದೀನಿ.

ಸಂ: ನೀವು ಬರೀತಿರೊ ಪುಸ್ತಕ ಒಂದು ಚರಿತ್ರೆ ಗ್ರಂಥವಾಗಿದೆಯೊ ಅಥವಾ ’ಪಿsಕ್ಷನ್’ ತರಹ ಇದೆಯೊ?

ಕೋಚೆ: ಪಿsಕ್ಷನಲ್ಲ, ಚರಿತ್ರೆ ಅಲ್ಲ, ಅದು ನಾಟಕೀಯವಾಗಿ ಬರ‍್ತದೆ. ಗಾಂದಿsಜಿ ಕೊನೇ ದಿನ ಪ್ರಾರ್ಥನೆಗೆ ಹೊರಡ್ತಾರೆ. ಸರಿಯಾಗಿ ೫ಕ್ಕೆ ಪ್ರಾರ್ಥನಾ ವೇದಿಕೆ ಮೇಲೆ ಇದ್ದುಬಿಡಬೇಕು. ಆದರೆ ಅವತ್ತು ೬ ಗಂಟೆಯಾದರೂ ಏಳಲ್ಲ. ಯಾಕಂದ್ರೆ ಸರ್ದಾರ್ ಪಟೇಲ್ರು ಮಾತಾಡ್ತಿರ‍್ತಾರೆ. ನೆಹರೂಗೂ ಪಟೇಲರಿಗೂ ಬಿsನ್ನಾಬಿsಪ್ರಾಯ ಬಂದಿರ‍್ತದೆ ಪಾಕಿಸ್ತಾನಕ್ಕೆ ೫೫ ಕೋಟಿ ರೂಪಾಯಿ ಕೊಡ್ಬೇಕು ಅನ್ನೋ ವಿಚಾರದಲ್ಲಿ.

ಸಂ: ಈಗ ನೀವು ಅಧ್ಯಯನದಿಂದ ಕಂಡುಕೊಂಡಿರೊ ಗಾಂದಿs ಹತ್ಯೆಯ ಪ್ರಕರಣ ಮತ್ತು ಈತನಕ ಬಂದಿರೋ ಕೃತಿಗಳಿಗಿಂತ ಹೇಗೆ ಬಿsನ್ನ?
ಕೋಚೆ: ಕೆಲವೊಂದು ಪಿsಕ್ಷನ್‌ಗಳಿದಾವೆ. ಉದಾಹರಣೆಗೆ ದಂಡಿ ಮಾರ್ಚ್ ಬಗ್ಗೆ. ನನ್ನ ’ಬೇಡಿ ಕಳಚಿತು ದೇಶ ಒಡೆಯಿತು’ ಪುಸ್ತಕದಲ್ಲೂ ಬಂದಿದೆ ಅದು. ಅಮೇರಿಕನ್ ಪ್ರೆಸ್‌ಮೆನ್ ಭಾಳ ಚನ್ನಾಗಿ ಅದನ್ನು ಕವರ್ ಮಾಡಿದಾರೆ. ಅಲ್ಲಿ ಅಷ್ಟು ಜನ ದೊಡ್ಡ ದೊಡ್ಡ ಬಡಗಿಯಿಂದ ಹೊಡದ್ರೆ ಕೆಳಗೆ ಬಿಳ್ತಿದ್ರು ಆದರೆ ಕೈ ಎತ್ತುತ್ತಿದ್ದಿಲ್ಲ.

ಸಂ: ನಮ್ಮ ಚರಿತ್ರೆಯನ್ನು ಕುರಿತು ವಿಶಿಷ್ಟ ಕಥನ ಮಾದರಿಯಲ್ಲಿ ಬರೆಯುವ ಲೇಖಕರು ನೀವು. ನೀವೊಬ್ಬ ಕಾದಂಬರಿಕಾರರು ಮತ್ತು ಕಥೆಗಾರರು. ನಿಮ್ಮ ಕಥನ ಕ್ರಮದಲ್ಲಿ ಹೆಚ್ಚುಹೆಚ್ಚು ಚರಿತ್ರೆಗೆ ಹೋಗುವಿಕೆಯಿದೆ. ಸಾಂಪ್ರದಾಯಿಕ ಚರಿತ್ರೆಯವರು ಬರೆದಿರೋ ಕ್ಲಾಸಿಕಲ್ ಹಿಸ್ಟರಿಗಿಂತ ಬಿsನ್ನವಾದ ನಿಲುವನ್ನು ನೀವು ತಾಳ್ತೀರಿ. ನಮ್ಮ ಕಥೆ ಕಾದಂಬರಿಕಾರರು ಚರಿತ್ರೆಯ ಘಟನೆಗಳನ್ನು ವಸ್ತುವಾಗಿ ತಗೊಳ್ಳುವಾಗ ಐತಿಹಾಸಿಕ ದಾಖಲೆಗಳಿಗೆ ಬಹಳ ನೆಚ್ಚಿ ಕೊಳ್ಳುವುದಿಲ್ಲ. ಐತಿಹಾಸಿಕ ದಾಖಲೆಗೆ ಬಹಳ ಅಂಟಿಕೊಂಡರೆ ಕತೆಯಲ್ಲಿ ಮಾನವೀಯ ಆಯಾಮ ಇರೋಲ್ಲ. ನಿಮ್ಮ ಬರಹದಲ್ಲಿ ಏಕಕಾಲಕ್ಕೆ ಚಾರಿತ್ರಿಕ ಸಂಗತಿಗಳಿಗೂ ಮಹತ್ವ ಇರುತ್ತೆ. ಮನುಷ್ಯ ಜೀವನವನ್ನು ಆದು ಒಳಗೊಂಡಿ ರುತ್ತದೆ. ನಿಮ್ಮ ’ಹಿಂದಿರುಗಿ ಬರಲಿಲ್ಲ’ ಕಾದಂಬರಿಯಲ್ಲೂ ಇದಿದೆ. ಚರಿತ್ರೆಗೆ ಯಾಕೆ ಮತ್ತೆಮತ್ತೆ ಹೋಗಬೇಕು ಅನಿಸ್ತಿದೆ ನಿಮಗೆ?

ಕೋಚೆ: ನಾನು ಮೂಲತಃ ಚರಿತ್ರೆಯ ವಿದ್ಯಾರ್ಥಿ. ಕಾಲೇಜಿನಲ್ಲಿ ಆಪ್‌ಶನಲ್ಲಾಗಿ ಚರಿತ್ರೆ ತಗೊಂಡಿದ್ದೆ. ಆಗ ಚರಿತ್ರೆ ಹೇಳಿಕೊಡ್ತಕ್ಕಂತಹ ಪದ್ಧತಿಗೂ ಈಗ ಚರಿತ್ರೆ ಹೇಳಿಕೊಡ್ತಕ್ಕಂತಹ ಪದ್ಧತಿಗೂ ಭಾಳ ವ್ಯತ್ಯಾಸ ಇದೆ. ಆಗ ನಮ್ಮ ಪ್ರೊಫೆಸರ್ ಗಳಿಗೆ ಬ್ರಿಟಿಷ್ ಚರಿತ್ರೆ, ಬ್ರಿಟಿಷ್ ಇಂಡಿಯಾ ಚರಿತ್ರೆ, ಇವುಗಳನ್ನು ಹೇಳುವಾಗ ಆಗಿದ್ದ ಟೆಕ್ಸ್ಬುಕ್‌ಗಳನ್ನು ಬಿಟ್ಟು ಅವರು ಬೇರೆ ಹೇಳಲಿಕ್ಕೆ ಸಾಧ್ಯವಿದ್ದಿಲ್ಲ. ಈಗ ಟಿಪ್ಪು ಮೈಸೂರಿನಲ್ಲಿ ಹಿಂದುಗಳನ್ನು ವಿರೋಧ ಮಾಡಿದ ಅಂತ ಬರ್ದಿದಾರೆ. ಅದು ಚರಿತ್ರೆ ಅನ್ನುವ ವಿಚಾರದಲ್ಲಿ ನನಗೆ ಯಾವಾಗಲೂ ಸಂದೇಹ. ಯಾವುದೇ ಒಂದು ದಾಖಲೆಯನ್ನು ನೀವು ಕಣ್ಮುಚ್ಕೊಂಡು ನಂಬಬೇಡಿ. ಅದರ ಹಿಂದೆ ಇರ‍್ತಕ್ಕಂತಹ ಸತ್ಯವನ್ನು ಅನ್ವೇಷಣೆ ಮಾಡಿ ಅಂತ ನಮ್ಮ ಗುರುಗಳು ಹೇಳ್ತಿದ್ರು. ಆಗಿನ ಕಾಲದಲ್ಲಿ ಇರ‍್ತಕ್ಕಂತಹ ಸಮಕಾಲೀನ ಬರಹಗಳು, ಶಿಲಾಲಿಪಿಗಳು, ತಾಮ್ರಪಟಗಳು, ಇವುಗಳಲ್ಲಿ ಸತ್ಯ ಇರ‍್ತದೆ. ಆದರೆ ಆ ಶಿಲಾಲಿಪಿಗಳೂ ನಂಬಲಿಕ್ಕೆ ಅರ್ಹವಲ್ಲ ಅನ್ನೋದನ್ನ ತಮ್ಮ ’ಫೌಂಡೇಷನ್ ಆಫ್ ವಿಜಯನಗರ’ದಲ್ಲಿ ಸೇಂಟ್ ಂhiವಿಯರ್ ಕಾಲೇಜಿ ನಲ್ಲಿದ್ದ ಎಚ್.ಎಚ್. ಹೆರಾಸ್ ಅನ್ನೋರು ಹೇಳಿದಾರೆ. ಹೆರಾಸ್ ಅವರು ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದವರು ವಿದ್ಯಾರಣ್ಯರು ಅನ್ನೋ ಬಗ್ಗೆ, ಅವರ ಕಾಲದಲ್ಲಿ ಸೃಷ್ಟಿ ಮಾಡಿದಂಥ ಶಿಲಾಲಿಪಿಗಳನ್ನು ಶೃಂಗೇರಿ ಮಠದವರು ಸೃಷ್ಟಿಮಾಡಿ ಹಳ್ಳದ ಮರಳಲ್ಲಿ ಮುಚ್ಚಿಟ್ಟು ಆಮೇಲೆ ಬಯಲಿಗೆ ತಂದರು ಅಂತ ಅವರು ತೋರಿಸಿಕೊಟ್ಟವರು.

ಸಂ: ಫಾದರ್ ಹೆರಾಸ್ ನಿಮಗೆ ಗುರುಗಳಾಗಿದ್ದರಾ?

ಕೋಚೆ: ಇಲ್ಲ. ಅವರ ಪುಸ್ತಕ ೧೯೨೯ರಲ್ಲಿ ಬಂತು. ನಾವು ಕಾಲೇಜಲ್ಲಿ ಇದ್ದದ್ದು ೧೯೩೯ರಲ್ಲಿ. ಅದನ್ನು ನಾನು ಆಳವಾಗಿ ಅಭ್ಯಾಸ ಮಾಡಿದ್ದೆ. ಆಮೇಲೆ ನಮ್ಮ ರಾಬರ್ಟ್ ಸಿವೆಲ್‌ದು ’ಫರ್ಗಾಟನ್ ಎಂಪೇರ್’. ಆಮೇಲೆ ಅದರ ಬಗ್ಗೆ ’ನೆವರ್ ಟು ಬಿ ಫರ್ಗಾಟನ್ ಎಂಪೇರ್’. ಅದರ ಬಗ್ಗೆ ನಾನು ಹೈಸ್ಕೂಲಿಗೆ ಹೋದ ಮೇಲೆ ೧೯೩೬ನೇ ಇಸವಿಯಲ್ಲಿ ವಿಜಯನಗರ ಸ್ಥಾಪನೆಯ ೬ನೇ ಶತಮಾನೋತ್ಸವ ಮಾಡಿದರಲ್ಲ, ಆಗ ಅದರ ಬಗ್ಗೆ ನನಗೆ ಸ್ವಲ್ಪ ಆಸಕ್ತಿ ಹುಟ್ಟಿತು. ಅಲ್ಲಿತನಕ ಬಂದಿದ್ದ ಎಲ್ಲಾ ಪುಸ್ತಕಗಳನ್ನು ಓದಿದೆ. ಈಗ ನಮ್ಮ ನಾಗರಾಜರಾವ್ ಬರೆದ ’ಶಾಂತಲಾ’ದಲ್ಲಿ ಕತೆ ಬಹಳ. ಚರಿತ್ರೆ ಕಡಿಮೆ. ಆದರೆ ಕ್ಷೀರಸಾಗರ ಅಂತ್ಹೇಳಿ, ಲೇಖಕಿ ಬೆಳೆಗೆರೆ ಜಾನಕಮ್ಮನವರ ಅಣ್ಣ, ಕೆಮಿಸ್ಟ್ರಿ ಪ್ರೊಫೆಸರ್ ಆಗಿದ್ರು ಸೆಂಟ್ರಲ್ ಕಾಲೇಜಿನಲ್ಲಿ. ಅವರು ’ನೆಪೋಲಿಯನ್ ಬೋನಾಪಾರ್ಟಿ’ ಅಂತ ಒಂದು ಪುಸ್ತಕ ಬರ‍್ದಿದ್ದಾರೆ. ಅದರಲ್ಲಿ ಚರಿತ್ರೆ ಜತೆಯಲ್ಲೆ ಕಥಾಭಾಗವನ್ನ ಸರಿಯಾಗಿ ತರ‍್ತಾರೆ. ಆಮೇಲೆ ಹೊಸಬೆಟ್ಟು ರಾಮರಾಯ ಅಂತಹೇಳಿ, ಹೊಸಪೇಟೆ ಟ್ರೈನಿಂಗ್ ಸ್ಕೂಲ್‌ನಲ್ಲಿ ಪ್ರಿನ್ಸಿಪಾಲ್ ಹೆಡ್ ಮಾಸ್ಟರ್ ಆಗಿದ್ರು. ಅವರು ’ಉತ್ಕಲ ವಿಜಯ’ ಅಂತ, ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಪಟ್ಟ ಗ್ರಂಥ ಬರೆದಿದ್ರು. ವಾಸ್ತವವಾಗಿ ಅದನ್ನು ಚಂದಮಾಮ ಪತ್ರಿಕೆಯಲ್ಲಿದ್ದ ನವಗಿರಿನಂದ ಅಂತನ್ನೋರು, ಇವರ ಮನೆಯ ಅಡಿಗೆಯ ಕುಕ್ ಆಗಿದ್ದೊರು, ಬರೆದಿದ್ದು. ಅದಕ್ಕೆ ಇವರು ತಮ್ಮ ಹೆಸರು ಹಾಕಿಕೊಂಡರು. ’ಉತ್ಕಲ ವಿಜಯ’ ಆದ ಮೇಲೆ ನೆಪೋಲಿಯನ್ ಬೋನೋಪಾರ್ಟಿ ಬಗ್ಗೆ ಕ್ಷೀರಸಾಗರ ಅನ್ನೋ ಹೆಸರಲ್ಲಿ ಬರೀತಾ ಇದ್ರು. ಕ್ಷೀರಸಾಗರ ಅವರಲ್ಲಿ ಚರಿತ್ರೆಯೂ ಇದೆ. ಕಥಾ ಭಾಗವೂ ಇದೆ.

ಸಂ: ನಮ್ಮ ಪಠ್ಯಪುಸ್ತಕಗಳಲ್ಲಿರೊ ಚರಿತ್ರೆ ಇದೆಯಲ್ಲ, ಅದು ಬಹಳ ಪೂರ್ವಗ್ರಹ ಪೀಡಿತವಾಗಿದೆ. ಫಾದರ್ ಹೆರಾಸ್ ತರಹ ವಸ್ತುನಿಷ್ಠವಾಗಿ ಹೇಳೋ ಅಧ್ಯಾಪಕರು ಕಡಿಮೆ. ನಮ್ಮ ಪ್ರಧಾನಧಾರೆಯ ಚರಿತ್ರ ಲೇಖನಗಳು ಬಹುತೇಕ ಮತೀಯವಾಗಿರುತ್ತವೆ. ವಿಜಯನಗರದ ಮೇಲೆ ಬಂದಿರೋ ವೈಭವದ ಮತ್ತು ಹಿಂದೂ ಸಾಮ್ರಾಜ್ಯದ ಕಥನಗಳು ಇಂತಹುವು.

ಕೋಚೆ: ಒಂದು ಅನುಭವ ಹೇಳ್ತೇನೆ. ೧೯೫೩ರಲ್ಲಿ ಬಳ್ಳಾರಿ ಕರ್ನಾಟಕದೊಳಗೆ ಮರ್ಜ್ ಆಯ್ತಲ್ಲ, ಆಗ ಅಕ್ಟೋಬರ್‌ನಲ್ಲಿ ದಸರಾಕ್ಕೆ ಮೈಸೂರಿಗೆ ಹೋಗಿದ್ದೆ. ಹೋದಾಗ ಕುವೆಂಪು ಅವರ ಮನೆಗೆ ಹೋದೆ. ಅವರು ನನ್ನ ಕಂಡ ತಕ್ಷಣವೇನೇ ’ಮಾರಾಯ್ರ ನೀವು ಬಳ್ಳಾರಿಯನ್ನು ಕರ್ನಾಟಕಕ್ಕೆ ಉಳಿಸಿ ದೊಡ್ಡ ಸಾಹಸ ಮಾಡಿದ್ರಪ್ಪ. ಅದಕ್ಕಿಂತ ಹೆಚ್ಚಾಗಿ ನಮ್ಮ ಹಂಪಿ ಉಳಿಸಿಕೊಂಡ್ರಲ್ಲ ಅದಂತೂ ಇನ್ನೂ ಹೆಚ್ಚಿನದು. ನಮ್ಮ ಸಾಂಸ್ಕೃತಿಕ ಕೇಂದ್ರ ಅದು. ಸಂತೋಷ’ ಅಂತ್ಹೇಳಿ ಭಾಳ ಹೊತ್ತು ಮಾತನಾಡಿದರು. ಹಾಗೆ ಮಾತನಾಡ್ತಾ ’ನಮ್ಮ ಹಳೇ ಮೈಸೂರು ಜನಗಳಿಗೆ ಈ ಬಳ್ಳಾರಿ ವಿಚಾರದಲ್ಲಿ ತಿಳುವಳಿಕೆ ಆಗುವ ಹಾಗೆ ನೀವು ಏನಾದರೂ ಒಂದು ಸಣ್ಣ ಪುಸ್ತಕ ಬರೀಬೇಕು. ನೀವು ’ಬೆಂಗಳೂರು ಕೆಂಪೇಗೌಡ’ ಅಂತ್ಹೇಳಿ ಜವರೇಗೌಡ್ರು ಬರ್ದಿದಾರೆ ನೋಡಿದಿರಾ, ಆ ಮಾದರಿಯಲ್ಲಿದ್ರೆ ಸಾಕು’ ಅಂತ ಹೇಳಿದ್ರು. ಆಮೇಲಿದ್ದು ಇದನ್ನ ಯಾಕೆ ಹೇಳ್ತಾರಂತ ಯೋಚ್ನೆ ಮಾಡ್ತಾ ’ಆಯ್ತು’ ಅಂತ್ಹೇಳಿದೆ. ’ವಿಜಯನಗರ ಶ್ರೀಕೃಷ್ಣದೇವರಾಯ’ ಅಂತ ಹೆಸರಿಟ್ಟು ಒಂದು ಪುಸ್ತಕ ಬರದೆ. ನಾವು ಟ್ರೆಡಿಶನಲ್ ಹಿಸ್ಟರಿ ಓದಿದವರಲ್ಲ, ವಿಜಯನಗರ ಸಾಮ್ರಾಜ್ಯದಲ್ಲಿ ವೈಭವ ಇತ್ತು. ಇದ್ದದ್ದು ನಿಜಾನೇ. ಅಬ್ದುಲ್ ರಜಾಕ್ ಇವುಗಳ ಬಗ್ಗೆ ಮಾಡಿದ ವರ್ಣನೆಯಿಂದ ಪ್ರಭಾವಿತ ನಾವು ಆಗಿದ್ದಿವಿ. ಅದರಲ್ಲಿ ಸಂದೇಹವಿಲ್ಲ. ಈ ಆಲೂರು ವೆಂಕಟರಾಯರ ಪುಸ್ತಕ ಓದಿ ವೈಭವೀಕರಣ ಹುಚ್ಚು ಕೂಡ ನಮಿಗಿತ್ತು. ನಾನು ಬರೆದು ತಗೊಂಡು ಹೋಗಿ ಕುವೆಂಪು ಅವರಿಗೆ ಕೊಟ್ಟೆ. ಇನ್ನೊಂದ್ಸಾರಿ ಹೋದೆ. ’ಓದಿದ್ದೀನಿ. ಇದು ಸರಿ. ಆದರೆ ನಿಮ್ಮ ಮಾರ್ಕ್ಸ್, ಸೋಷಿಯಲಿಸಂ, ಇವೆಲ್ಲ ಸಿದ್ಧಾಂತಗಳು ಏನಾದವು’ ಅಂದ್ರು (ನಗು). ಐ ಕುಡ್ ನಾಟ್ ಫಾಲೊ ಹಿಂ. ವಿಜಯನಗರ ಕೃಷ್ಣದೇವರಾಯನಿಗೂ, ಈ ಮಾರ್ಕ್ಸ್, ಸೋಶಿಯಲಿಸಂಗೂ ಏನು ಸಂಬಂಧ ಅಂತ ನಾನು. ’ಅರ್ಥ ಆಗಲಿಲ್ಲ’ ಅಂದೆ. ’ಅಲ್ಲ ಮಾರಾಯ್ರೆ, ಆ ದೊರೆಗಳಿದ್ದರು, ಅವರು ಯುದ್ಧ ಮಾಡಿದರು, ಅವರದು ಇಷ್ಟೆಲ್ಲ ಸಂಪತ್ತಿತ್ತು, ಇದನ್ನೆಲ್ಲ ಹೇಳಿದ್ದೀರಿ. ಆಗಿನ ಕಾಲದಲ್ಲಿ ನಮ್ಮಂತಹ ಸಾಧಾರಣ ಜನಗಳೇ ಇರಲಿಲ್ವ? ಆ ಸಾಧಾರಣ ಜನಗಳು ಹೇಗಿದ್ರು ಅಂತ ಚಿತ್ರಣ ನೀವು ತರಬಹುದಿತ್ತಲ್ಲ’ ಅಂತ ಹೆಳಿದ್ರು.

ಸಂ: ಕುವೆಂಪು ಅವರಿಗೆ ನಮ್ಮ ಸಾಂಪ್ರದಾಯಕ ಚರಿತ್ರೆ ಆಳುವ ವರ್ಗದ ಕಥನವಾಗಿತ್ತು, ಅದು ಜನರ ಕಥನವೂ ಆಗಬೇಕು ಅನ್ನೋ ಒಂದು ಐತಿಹಾಸಿಕ ಪ್ರe ಬಹಳ ತೀಕ್ಷ್ಣವಾಗಿತ್ತು. ಇದು ಅವರ ಸಮಕಾಲೀನ ಚರಿತ್ರೆಕಾರರಲ್ಲಿ ಬಹಳ ಜನರಿಗೆ ಇರಲಿಲ್ಲ. ಈ ಪ್ರe ಅವರಿಗೆ ಒಬ್ಬ ಸೃಜನಶೀಲ ಲೇಖಕ ರಾಗಿದ್ದರಿಂದಲೇ ಬಂದಿದ್ದೊ ಏನೊ?
ಕೋಚೆ: ಇರಬಹುದು. ಮತ್ತೆಮತ್ತೆ ಅವರ ಹತ್ತರ ಹೋಗ್ತಾ ಇರ್ತಿದ್ದೆನಲ್ಲ, ಆಗಲೆ ಈ ಭೂಸುಧಾರಣೆ ಬಗ್ಗೆ ಅವರು ಯೋಚನೆ ಮಾಡಿದ್ದರು. ಒಬ್ಬ ಸಾಮಾಜಿಕ ಅಥವಾ ರಾಜಕೀಯ ಅಥವಾ ಆರ್ಥಿಕ ತಜ್ಞರಾಗಿ ಯೋಚನೆ ಮಾಡಿಲ್ಲ. ಕವಿಯಾಗಿ ಗಮನಿಸಿದ್ದಾರೆ. ’ಸರ್ವಂ ಖಲ್ವಿದಂ ಬ್ರಹ್ಮಂ’ ಸಮಾನವಾದಿ ಆಧ್ಯಾತ್ಮಿಕವಾದಿ ಕವಿದೃಷ್ಟಿ ಅವರದ್ದು. ಅವರ ಇಡೀ ಜೀವನದ ತಳಹದಿ ಅಧ್ಯಾತ್ಮ. ಈ ಮೇಲುಕೀಳುಗಳು ಯಾಕೆ ಬರ‍್ತಾವೆ, ಅದನ್ನ ಯಾವ ರೀತಿಯಾಗಿ ತೊಡೆದು ಹಾಕಬೇಕು, ಇದನ್ನ ಅವರು ವಿವರಿಸ್ತಾ ಇದ್ರು.

ಸಂ: ಅವರು ಮೈಸೂರಲ್ಲಿದ್ದರೂ ಅರಮನೆಗೆ ಹೋಗ್ತಾ ಇರಲಿಲ್ಲ. ಅದೊಂದು ತಾತ್ವಿಕವಾದ ಪ್ರತಿರೋಧವಾಗಿತ್ತು. ಅಂತಹವರಿಗೆ ಕೃಷ್ಣದೇವರಾಯ ಕೇಂದ್ರಿತ ಚರಿತ್ರೆ ಸಹಜವಾಗಿಯೇ ಇಷ್ಟವಾಗಿರಲಿಕ್ಕಿಲ್ಲ.

ಕೋಚೆ: ಹೌದು. ’ಬಂಗಾಳದಲ್ಲಿ ರವೀಂದ್ರನಾಥ ಟಾಗೂರರು ಬರೆದ ನಾಡಗೀತೆ ಇಡೀ ದೇಶಕ್ಕೆ ಅನ್ವಯಿಸುತ್ತದೆ. ನಮ್ಮ ಕರ್ನಾಟಕಕ್ಕೆ ಅನ್ವಯಿಸುವ ಹಾಗೆ ನಾನು ಜಯಭಾರತ ಜನನಿಯ ತನುಜಾತೆ ಬರೆದೆ. ಇದಕ್ಕೆ ಟಾಗೂರರು ೧೯೧೧ರಲ್ಲಿ ಬರೆದ ಗೀತೆಯೇ ಪ್ರೇರಣೆ’ ಅಂತ ಕುವೆಂಪು ಹೇಳಿದ್ದಾರೆ.

ಸಂ: ಆ ಹೊತ್ತಿಗೆ ಟಾಗೂರರ ಗೀತೆ ರಾಷ್ಟ್ರಗೀತೆಯಾಗಿ ಮಾನ್ಯ ಆಗಿತ್ತಾ?

ಕೋಚೆ: ಆಗಿರ‍್ಲಿಲ್ಲ. ನಾವೆಂದೂ ಜನಗಣಮನ ಹೇಳ್ಲೇ ಇಲ್ಲ. ವಂದೇ ಮಾತರಂ ಹೇಳ್ತಿದ್ದಿದ್ದು.

ಸಂ: ಈಗ ವಂದೇ ಮಾತರಂ ಅನ್ನು ಬಲಪಂಥೀಯರು ಬೇರೆ ಅರ್ಥದಲ್ಲಿ ಬಳಸ್ತಾ ಇದಾರೆ.

ಕೋಚೆ: ಯುಸೀ, ವಂದೇ ಮಾತರಂ ಅನ್ನೋದು ಆಗಿನ ’ಆನಂದಮಠ’ ಕಾದಂಬರಿ ಏನು ಬಂತಲ್ಲ, ಅದರಲ್ಲಿ ಮಂತ್ರ ಸಮಾನವಾಗಿತ್ತದು. ಲಾರ್ಡ್ ಕರ್ಜನ್ ಬಂಗಾಳವನ್ನ ಪಶ್ಚಿಮ ಬಂಗಾಲ ಪೂರ್ವ ಬಂಗಾಲ ಅಂತ ಏನು ವಿಭಜನೆ ಮಾಡಿದ್ನಲ್ಲ ಅದನ್ನು ವಿರೋದಿsಸಲಿಕ್ಕಾಗೇನೇ ಅನಂದಮಠದ ಕವಿತೆಗಳನ್ನ ಉಪಯೋಗ ಮಾಡಿಕೊಂಡ್ರು.

ಸಂ: ಸಾರ್, ನಿಮ್ಮ ಹೆಸರಿನಲ್ಲಿರುವ ಕೋ ಎಂಬ ಅಕ್ಷರ ಕೋಣನ ಎಂಬುದರಿಂದ ಬಂದಿದ್ದು. ಇದರ ಹಿನ್ನೆಲೆಯೇನು?

ಕೋಚೆ: ನಮ್ಮದು ವ್ಯಾಪಾರದ ವೃತ್ತಿ. ಸಾರಿಗೆ ಸಂಪರ್ಕ ಇಲ್ದೇ ಇದ್ದಂತಹ ಕಾಲದಲ್ಲಿ ನಾವು ವ್ಯಾಪಾರ ಮಾಡ್ತಿರುವಾಗ ಕೋಣನ ಮೇಲೇ ಹೇರನ್ನು ಹೊರೆಸಿಕೊಂಡು ವ್ಯಾಪಾರ ಮಾಡಬೇಕಾಗಿತ್ತು. ಹೇರೆತ್ತುಗಳ ಇದ್ದ ಹಾಗೆ ಕೋಣಗಳು ಇದ್ದವು. ಆದ್ದರಿಂದ ಇದು ಬಂತು. ಕಲ್ಯಾಣದುರ್ಗ ತಾಲೂಕು ಏನಿದೆಯಲ್ಲ, ಅದು ಹಿಂದೆ ನಮ್ಮ ಬಳ್ಳಾರಿಯಲ್ಲಿತ್ತು. ಅಲ್ಲಿ ಉಪ್ಪು ಮಾರೋರೆಲ್ಲ ಕೋಣಗಳನ್ನ ಬಳಸ್ತಾ ಇದ್ರು. ದಕ್ಷಿಣ ಕನ್ನಡದಲ್ಲಿ ಉಳೋದಿಕ್ಕೆ ಈಗ್ಲೂ ಕೋಣಗಳನ್ನು ಉಪಯೋಗಿಸ್ತಾರೆ.

ಸಂ: ನಿಮ್ಮದು ಏನು ವ್ಯಾಪಾರ ಸಾರ್?

ಕೋಚೆ: ಸಾಮಾನ್ಯ ಪ್ರಾವಿಜನ್. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊನೆಯ ಹಳ್ಳಿ ನಮ್ದು. ನಾವು ವಾಸವಾಗಿದ್ದದ್ದು ಬ್ರಿಟಿಷ್ ಆಡಳಿತದಲ್ಲಿ. ಮಡ್ರಾಸ್ ಗೌರ್ಮೆಂಟು. ನಮ್ಮ ಭೂಮಿ ಇದ್ದದ್ದೆಲ್ಲ ಮೈಸೂರು ಸೀಮೇಲಿ. ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲೂಕಲ್ಲಿ. ಈಗದು ದಾವಣಗೆರೆ ಜಿಲ್ಲೆಗೆ ಹೋಗಿದೆ. ಇವತ್ತಿಗೂ ನಮ್ಮ ಭೂಮಿ ಅಲ್ಲೇ ಇದೆ. ನಮ್ಮ ಪೂರ್ವಜರು ಯಾರೋ ವ್ಯಾಪಾರ ಮಾಡ್ತಿದ್ರು. ಅಂದ್ರೇನು, ಶಿವಮೊಗ್ಗ ಜಿಲ್ಲೆಯಿಂದ ಅಡಿಕೆ ತಗಂಡು ಬಂದು ಬಳ್ಳಾರಿಗೆ ಸಾಗಿಸೋದು. ಬಳ್ಳಾರಿ ಜಿಲ್ಲೆಯಲ್ಲಿ ಕಂಬಳಿ ಸಿಗ್ತವೆ. ನಮ್ಮ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲೆ ಕಂಬಳಿ ನೇಯ್ತಿದ್ರು. ಅವನ್ನ ಬಹಳ ಚಳಿಯಿರೊ ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಜನಗಳಿಗೆ ಸಾಗಿಸೋರು.

ಸಂ: ಶಿವಮೊಗ್ಗ ಬಳ್ಳಾರಿ ಟ್ರೇಡ್ ರೂಟಲ್ಲಿ ನಿಮ್ಮ ಊರಿತ್ತಾ?

ಕೋಚೆ: ಹೌದೌದು. ನೇರರೇಖೆ ಹಾಕಿದ್ರೆ ಮಧ್ಯಭಾಗಕ್ಕೆ ಬರ‍್ತದೆ. ನಮ್ಮೂರಿಗೆ ಹೆಚ್ಚು ಕಡಿಮೆ ಬಳ್ಳಾರಿ ೬೦ ಮೈಲಾಗುತ್ತೆ. ಶಿವಮೊಗ್ಗ ಸುಮಾರು ೮೦ ಮೈಲಾಗುತ್ತೆ. ನಮ್ಮವರೆಲ್ಲ ಕೋಣನ ಮೇಲೆ ವ್ಯಾಪಾರ ಮಾಡ್ತಿದ್ರು. ಬಹುಶಃ ಆ ಊರಲ್ಲಿ ಕೋಣಗಳನ್ನು ಸಾರಿಗೆಗೆ ಬಳಸಿದ ಮನೆ ನಮ್ಮದೆ ಅಂತ ಕಾಣುತ್ತೆ. ಕೋಣನ ಮನೆಯವ್ರು ಅಂತ ಹೆಸರು ಬಿತ್ತು. ನಮ್ಮ ತಂದೆ ಕಾಲಕ್ಕಾಗಲೇ ಎತ್ತುಗಳು ಬಂದಿದ್ವು. ನಮ್ಮ ತಂದೆ ಶಿವಮೊಗ್ಗದ ಕಡೇಲಿಂದ ಬಂದವರು ಅಂತ ಕೇಳಿದ್ದೆ ಸುದ್ದಿ. ಶಿವಮೊಗ್ಗ ಜಿಲ್ಲೆನಲ್ಲಿ ಬರಗಿರ ಬಂದಾಗ ಇಲ್ಲಿ ಬದುಕ್ಕೊಳ್ಳೋಕೆ ಬಂದರೊ ಏನೋ. ಇನ್ನೊಂದು ಕಾರಣ ಅಂತ ಹೇಳಿದ್ರೆ, ಅಲ್ಲಿ ಆಗಿರತಕ್ಕಂತ ಸಂಘರ್ಷ. ಅವರು ಅಲ್ಲಿ ಜನಗಳಿಗೆ ಆಗಿ ಬರಲಿಲ್ಲ. ಊರು ಬಿಟ್ಟು ಹೋಗ ಬಿಡೋಣ ಅಂತಲೂ ಬಂದಿರಬಹುದು ಅಥವಾ ಹಿಂಗೂ ಇರಬಹುದು. ಈ ಹಳೇ ಮೈಸೂರಿನಲ್ಲಿ ಈ ವರ್ತಕ ವರ್ಗಕ್ಕೆ ಹಾನಿಯಾಗ್ತಕ್ಕಂತ ಏನೋ ಒಂದು ಒತ್ತಡ ಬಂದಿರಬಹುದು. ನನ್ನ ತಾಯಿಯ ತಾತನೂ ಎತ್ತಿನ ಮೇಲೆ ಅಡಿಕೆ ವ್ಯಾಪಾರ ಮಾಡ್ತಿದ್ರು. ಅಂದ್ರೆ ಆವಾಗ ಮುಕ್ತದ್ವಾರ ಇತ್ತು. ಮೈಸೂರು ಸೀಮಿಂದ ಏನಾದರೂ ಬರಬಹುದು. ಅತ್ತ ಬ್ರಿಟಿಷ್‌ರಿಂದ ಏನಾದರೂ ಹೋಗಬಹುದು. ಒಂದ್ಸಾರಿ ನಮ್ಮ ತಾಯಿಯ ತಾತ ಅಡಿಕೆ ಹೇರ‍್ಕೊಂಡು ಬರುವಾಗ, ಅಲ್ಲಿ ಗಡಿಯಲ್ಲಿ ಸುಂಕ ಕೊಟ್ಟು ಹೋಗು ಅಂತ ಹೇಳಿದಾರೆ. ಎಂದೂ ಸುಂಕ ಕೇಳ್ಳಿಲ್ಲ. ಈಗ್ಯಾಕೆ ಕೇಳ್ತೀರಿ ಅಂದ್ರು ಇವ್ರು. ಇಲ್ಲ ಹೊಸದಾಗಿ ದೊರೆಗಳು ಮಾಡಿದಾರೆ ಅಂದ್ರು. ನಾನು ಕೊಡೋದಿಲ್ಲ ಅಂದ್ರು. ಹಾಗಾದ್ರೆ ಹೇರು ಇಲ್ಲಿ ಇಳಿಸು ಅಂದ್ರು. ಹೇರು ಇಳ್ಸಿದ್ರು. ನೂರಾರು ರೂಪಾಯಿಗಳ ಅಡಿಕೆ. ವ್ಯಾಜ್ಯ ಮಾಡಿದ್ರು ಅವರ‍್ಹತ್ರ. ಕಡೆಗೆ ಅವರು ತಗಂಡುಹೋಗಲಿ ಬಿಟ್‌ಬಿಡಿರಿ ಅಂದರಂತೆ. ಅಷ್ಟೊತ್ತಿಗೆ ಆಗಲೆ ಅಡಿಕೆ ಕೊಳೆತು ಹೋಗಿತ್ತು (ನಗು) ಇಂಥಾ ಹಠವಾದಿ ಆತ. ಇದನ್ನ ನಮ್ಮ ತಾಯಿ ಹೇಳ್ರಿದ್ರು.

ಸಂ: ಬಹುಶಃ ನಿಮ್ಮಲ್ಲಿರೊ ಈ ಹಠ ನಿಷ್ಠುರತೆಯ ಸ್ವಭಾವ ಅವರಿಂದ ಬಂದಿರ ಬಹುದು.

ಕೋಚೆ: (ನಗು) ಏನೋ ಗೊತ್ತಿಲ್ಲ. ಇದ್ದರೂ ಇರಬೇಕು.

ಸಂ : ನೀವು ಬಾಲ್ಯ ಕಳೆದ ಊರು ಹೇಗಿತ್ತು. ಅದರ ಸಾಮಾಜಿಕ ಜೀವನದ ಬಗ್ಗೆ ತಿಳಿಯೋಕೆ ಕೇಳ್ತಿದೇನೆ. ಈಗ ಅದು ಹೆಂಗೆ ಬದ್ಲಾಗಿದೆ?

ಕೋಚೆ: ಮೈಸೂರು ಗಡಿ ದಾಟಿದ ಕೂಡ್ಲೇನೆ ನಮ್ಮೂರು ಕಾನಾಮಡಗು. ಅದು ರೆವಿನ್ಯೂ ದಾಖಲೆನಲ್ಲಿ ಆಲೂರು ಅಂತಿತ್ತು. ಆಕ್ಚುಲಿ ಕಾನಾಮಡಗು ಅಂತ, ಇಟ್ ವಾಸ್ ಎ ಹ್ಯಾಮ್ಲೆಟ್ ಆಫ್ ಆಲೂರು. ಮೊದಲು ನಮ್ಮ ಊರ ಮಧ್ಯದಲ್ಲಿನೇ ಮೊಹರಂ ಪಂಜೆ ಇಡ್ತಕ್ಕಂಥ ಜಾಗ ಇತ್ತು. ಅದು ಈಗಿಲ್ಲ. ಅದು ಯಾವಾಗಲೂ ಖಾಲಿ ಇರ‍್ತಿತ್ತು. ಮೊಹರಂ ಮುಗುದ ಮೇಲೆ ಪೀರ‍್ಲು ದೇವರ ಪೆಟ್ಟಿಗೆಯನ್ನು ಮೇಲ್ಗಡೆ ಜಂತಿಗೆ ಕಟ್ಟಿರ‍್ತಿದ್ರು. ಮುಂದಿನ ವರ್ಷ ಬಂದಾಗ ಅದನ್ನ ಇಳಿಸ್ತಿದ್ರು. ಯಾರಾದ್ರೂ ಈ ಕಲಾಯಿ ಮಾಡೋರು ಅಥವಾ ಈ ಗೋಣಿಯವರು ಬಂದಾಗ ಅಲ್ಲಿ ಇರ‍್ತಿದ್ರು. ಅದರ ಮುಂದೇನೆ ಒಂದು ಅಲಾವಿ ಕುಣಿಯಿತ್ತು. ಆಗಿನ ಕಾಲ್ದಲ್ಲಿ ಅಲ್ಲಿ ದೊಡ್ಡ ಶ್ರೀಮಂತ್ರು ಇದ್ರು. ೫-೧೦ ಮನೆ ವ್ಯಾಪಾರ ಮಾಡೋರು. ನಮ್ದೊಂದು ನಮ್ಮ ಚಿಕ್ಕಪ್ಪನ್ದೊಂದು ಎರಡೇ ಮನೆಗಳಿದ್ವು. ನಾವು ಬಳ್ಳಾರಿತನಕ ಹೋಗಿ ಸಾಮಾನು ತರೋರು. ನಮ್ಮ ಚಿಕ್ಕಪ್ಪ ನೂಲು ತರೋರು. ನಾವು ಈ ಸಕ್ರೆ, ಅಕ್ಕಿ, ಗೋದಿs, ಬೀಡಿ ತರೋರು. ಹೋಲ್ಸೇಲ್ ವ್ಯಾಪಾರ ಮಾಡ್ತಿದ್ವಿ. ಅಲ್ಲೆಲ್ಲ ಮಳೆ ಬೆಳೆ ಎಲ್ಲ ಸುಖವಾಗಿ ಇರ‍್ತಿತ್ತು. ಬಡವರೂ ಇದ್ರು. ಆದ್ರೆ ಬಡತನದ ಬೇಗೆ ಈಗಿನಷ್ಟು ಅನುಭವಿಸ್ತಿದ್ರು ಅಂತ ಹೇಳ್ಲಾರೆ.

ಸಂ: ಅಸ್ಪೃಶ್ಯತೆ ಆಚರಣೆ?

ಕೋಚೆ: ಇದ್ದೇ ಇತ್ತು. ಈಗ್ಲೂ ಏನ್ ಕಡಿಮೆ ಆಗಿಲ್ಲ.

ಸಂ: ನಿಮ್ಮ ಮೇಲೆ ಬಾಲ್ಯದಲ್ಲಿ ಪ್ರಭಾವ ಬೀರಿದ ವ್ಯಕ್ತಿಗಳು ಯಾರು?

ಕೋಚೆ: ಈ ಪ್ರಶ್ನೆಯನ್ನ ಬಹಳ ಜನ ಕೇಳಿದಾರೆ. ಕೆಲವು ಲೇಖಕರು ’ನಮ್ಮ ತಂದೆಯ ವರು ಜೋಗುಳದಲ್ಲಿ ಇದ್ದಾಗೇನೆ ತೂಗಿ ಹೇಳಿದ್ರು. ಅದರ ಪ್ರಭಾವ ನನ್ನ ಮೇಲೆ ಆಯ್ತು’ ಅಂತೆಲ್ಲ ಬರೀತಾರೆ. ಬಹಳಷ್ಟು ಬರಹಗಾರರ ತಂದೆ ತಾಯಿಗಳು ಅಧ್ಯಾಪಕರಾಗಿದ್ದವ್ರು. ಅದ್ರಲ್ಲೂ ಈ ಜಂಗಮರು, ಈ ಎರಡೂ ಪ್ರಭಾವಗಳು ಇದ್ದಿದ್ರಿಂದ ಏನಾಗ್ಬಿಡ್ತು ಅಂದ್ರೆ, ಮೇಷ್ಟ್ರು ಮಕ್ಳು ಆದವ್ರು ಸೀದ ಅವರ ಜತೆ ಸ್ಕೂಲಿಗೆ ಹೋಗಿಬಿಡ್ತಿದ್ರು. ಮನೆಯಲ್ಲಿ ಸ್ತೋತ್ರ ಅದೂ ಇದೂ ಪ್ರಭಾವ. ಆದರೆ ನನಿಗೆ ಯಾವುದೇ ಈಥರದ ಪ್ರಭಾವ ಆಗ್ಲಿಲ್ಲ. ನಾನು ಅಜ್ಜಿ ಮನೇಲಿ ಬೆಳೆದಿದ್ದು.

ಸಂ: ಯಾವೂರು ಅದು?

ಕೋಚೆ: ಅದೇ ಕಾನಾಮಡುಗು. ಅದು ಆಲೂರಿಗೆ ಎಷ್ಟು ಹತ್ತಿರ ಅಂತ ಹೇಳಿದ್ರೆ, ಕಾನಾಮಡುಗುವಿನಲ್ಲಿ ನಾಟಕ ಮಾಡ್ತಿದ್ರೆ ಆಲೂರ ಮಾಳಿಗೆ ಮೇಲೆ ಕೂತ್ಕೊಂಡು ಯಾರು ಯಾವ ಪಾತ್ರ ಮಾಡಿದಾರೆ ಅಂತ ಹೇಳ್ತಿದ್ದೆ ನಾನು. ನಾನು ಬೆಳೆದಿದ್ದು ಕಾನಾಮಡುಗುವಿನಲ್ಲಿ. ಅಲ್ಲಿ ಒಂದು ಮಠ ಇದೆ ಶರಣ ಬಸವೇಶ್ವರ ಮಠ ಅಂತ. ಆ ಮಠದಲ್ಲಿ ಯಾವಾಗಲ್ಲೂ ತಾಯೀದು ತುಂಬಾ ಶರಣ ಜೀವನ. ಮನೆಯಲ್ಲಿ ದನಗಳಿಗೆ ಉಣ್ಣೆ ಬಿದ್ರೆ ಮನೆಯಲ್ಲಿ ತಗಣಿ ಬಿದ್ರೆ ಈ ಮಡಿಗಿಡಿ ಆಕೆ ಹಾಕ್ತಿದ್ದಿಲ್ಲ. ನಾಯಕನಹಟ್ಟಿ ತಿಪ್ಪೇಸ್ವಾಮಿಗೆ ಹರಕೆ ಹೊತ್ತು ಬಿಡೋಳು-ಏನಪ್ಪಾ ಈ ವರ್ಷ ತೇರಿಗೆ ಬರ‍್ತೀವಿ ಅಂತ. ಆಗ ಉಣ್ಣೇನು ಹೋಗೋದು. ಮನೆಗಿದ್ದ ತಗಣೀನೂ ಹೋಗವು. ಪೈರಿಗಿದ್ದ ಕೀಟಾನೂ ಹೋಗವು. ಇದು ಹೆಂಗೆ ನಮಿಗೊತ್ತಿಲ್ಲ. ಆದರೆ ಇದು ಪ್ರತ್ಯಕ್ಷ ಅನುಭವ.

ಸಂದರ್ಶಕ: ನಿಮ್ಮಲ್ಲಿರುವ ಆಧ್ಯಾತ್ಮಿಕ ಸೆಳೆತಗಳಿಗೆ ನಿಮ್ಮ ತಾಯಿ ಕಾರಣರಾದರಾ?

ಕೋಚೆ: ಹೌದು. ನಮ್ಮ ತಾಯಿ ಬಸವಾ ಅನ್ನೋ ಶಬ್ದ ಒಂದ್ಸಲಾನಾದ್ರೂ ಉಚ್ಚಾರ ಮಾಡ್ದೆ ಒಂದು ದಿನವೂ ತನ್ನ ಕೆಲ್ಸ ಪ್ರಾರಂಭ ಮಾಡ್ತಿರ್ಲಿಲ್ಲ. ಆ ಪ್ರಭಾವ ನನಗೆ ಆಗಿರ‍್ಬೇಕು. ಜತೆಗೆ ಆ ಪರಿಸರ.

ಸಂದರ್ಶಕ:ಬಳ್ಳಾರಿಯ ಅಲ್ಲೀಪುರದ ತಾತನ ಮೇಲೆ ನಿಮಗೆ ಬಹಳ ಭಕ್ತಿ ಅಂತ ಕೇಳಿದೇನೆ. ಈ ಆಧ್ಯಾತ್ಮಿಕ, ಆನುಭಾವಿಕ, ಧಾರ್ಮಿಕ ಅನ್ನುವ ಲೋಕಗಳು ಹಾಗೂ ವೈಚಾರಿಕವಾದ ಲೋಕಗಳು ಸಾಮಾನ್ಯವಾಗಿ ಬೇರೆಬೇರೆಯವು ಎಂಬಂತಹ ಗ್ರಹಿಕೆ ಕೆಲವರಲ್ಲಿದೆ. ಆದರೆ ಈ ಎರಡೂ ಲೋಕಗಳು ನಿಮ್ಮ ವ್ಯಕ್ತಿತ್ವದಲ್ಲಿ ಮಿಳಿತವಾಗಿವೆ. ಈವೊಂದು ಸಮದೃಷ್ಟಿಯನ್ನ ಹೇಗೆ ಸಾದಿsಸಿದಿರಿ?

ಕೋಚೆ: ಅಲ್ಲಿಪುರ ತಾತನ ಬಗ್ಗೆ ಕೇಳಿದಿರಿ. ಅವ್ರಿಗೆ ಸರ್ವಾಂತರ್ಯಾಮಿಯಾದ ಶಕ್ತಿಯಿತ್ತು. ಅದಕ್ಕೆ ಕಾಲದ ಮಿತಿಯಿರಲಿಲ್ಲ. ಭೂತ, ಭವಿಷ್ಯ, ವರ್ತಮಾನ ಅಂತ ಏನೇನು ಹೇಳ್ತೀವಿ ಅದರ ಗಡಿಯೂ ಇರಲಿಲ್ಲ. ಆತ್ಮ ಇದೆಯಲ್ಲ ಅದು ಆ ಸರ್ವಾಂತರ್ಯಾಮಿ ಆಗಿರತಕ್ಕಂಥ ಆತ್ಮದ ಒಂದು ಭಾಗ, ಈಗ ಈ ದೇಹದಲ್ಲಿ ಸೆರೆಯಾಗಿರತಕ್ಕಂಥ ಅಂಶ ಅನ್ನೋದಾದ್ರೆ, ಇದು ಆದಾಗ್ಲಿಕ್ಕೆ ಅರ್ಹವಾಗಿದೆ ಅಂತ ಅರ್ಥ. ಇದು ಬೇಸಿಕ್ ಕಾನ್ಸೆಪ್ಟ್ - ಅರವಿಂದ ಅವರದು. ಅದೇ ಇದರಲ್ಲಿ ಬಂದಿದೆ. ಅದಕ್ಕೇನೇ ಬಿಂದುವಿನಲ್ಲಿ ಸಿಂಧುವಿದೆ; ಸಿಂಧುವಿನಲ್ಲಿ ಬಿಂದುವಿದೆ ಅನ್ನೋದು.

ಸಂ: ಅಂದರೆ ಅದ್ವೈತದ ಬಗ್ಗೆ ಹೇಳ್ತಿದೀರಾ ಸಾರ್?

ಕೋಚೆ: ಅದ್ವೈತ ಅಲ್ಲ ಅದು. ಒಂದು ಸೈಂಟಿಪಿsಕ್ ಲಾಂಗ್ವೇಜ್‌ನಲ್ಲಿ ಹೇಳಬೇಕಂದ್ರೆ An atom is all the qualities of the universe and its structure and its motion and its power, as powerfull as the universal force. ಆದ ಕಾರಣ ಈ ಅರವಿಂದರಾಗಲಿ, ರಾಮಕೃಷ್ಣರಾಗಲಿ, ಬಸವಣ್ಣ ರಾಗಲಿ, ಅಕ್ಕಮಹಾದೇವಿ, ಕುವೆಂಪು ಆಗಲಿ ಇವ್ರಿಗೆ ಯಾವೊಂದು ಕಾಲದ ಮಿತಿಯೇನಿರಲಿಲ್ಲ. ಆದಕಾರಣ ಗೀತೆಯಲ್ಲಿ ’ಅಹಂ ಕಾಲೋಸ್ಮಿ’ ಅಂತ ಒಂದ್ಕಡೆ ಬರ‍್ತದೆ. ನಾನೇ ಕಾಲನಾಗಿದ್ದೇನೆ. ಅಂದ್ರೇನು ಕಾಲ ಯಾವಾಗ ಪ್ರಾರಂಭವಾಯಿತು? ಯಾರಿಗೂ ಗೊತ್ತಿಲ್ಲ. ಅಧ್ಯಾತ್ಮದ ಭಾಷೆಯಲ್ಲಿ ಅನಾದೀಂ ಕಣ ಅಂತ ಬರ‍್ತದೆ ಅಲ್ವ? ಹಿಂದಕ್ಕೂ ಹೋಗುವಲ್ದು, ಮುಂದಕ್ಕು ಹೋಗುವಲ್ದು ಇದು ಎಲ್ಯಾಸ್ಟಿಕ್. ರಬ್ಬರ್ ಇದ್ದಂಗೆ. ಗತದ್ದೂ ನೆನಪಿರಲ್ಲ. ಈ ಇಹಜನ್ಮದಲ್ಲಿ ಇರೋದು ಸ್ವಲ್ಪ ನೆನಪಿರುತ್ತೆ. ಅದಕ್ಕಿಂತಲೂ ಪೂರ್ವಜನ್ಮದ್ದಂತೂ ಸುತರಾಂ ನೆನಪಿರಲ್ಲ. ಆದ್ರೆ ಅದು ಎಂದೂ ಅಳಿದು ಹೋಗಿರಲ್ಲ.

ಸಂ: ಸುಪ್ತ ತಳಪ್ರeಯಲ್ಲಿ ಇರ‍್ತದೆ....

ಕೋಚೆ: ಇರ‍್ತದೆ ಅದು. ಅಳದು ಹೋಗಿರದಿಲ್ಲ. ರಿವೈವ್ ಮಾಡೋದು ಅಂತಿಟ್ಟೊಳ್ಳಿ ನಮ್ಮ ಸಾಧಾರಣ ಭಾಷೆಯಲ್ಲಿ, ಆ ರಿವೈವ್ ಮಾಡ್ಲಿಕ್ಕೆ ನಾವು ಈ ಸೆರೆಯಾಗಿ ಇರ‍್ತಕ್ಕಂತ ಆ ಚಿತ್‌ಶಕ್ತಿಯನ್ನು ಉದ್ದೀಪನಗೊಳ್ಸಿದ್ರೆ ಅದು ಈ ಬ್ರಹ್ಮಾಂಡವನ್ನೇ ಮುತ್ತಿಕೋಬಹುದು. ಆಗ ಎಲ್ಲೆಲ್ಲಿ ಏನೇನಾಗ್ತದೆ ಅನ್ನೋದು ಅದಕ್ಕೆ ಗೊತ್ತಾಗ್ತದೆ. ಹಾಗೆ ಅವರು ಸಂಪೂರ್ಣವಾಗಿ ಆ ಶಕ್ತಿ ಯನ್ನು ಪಡೆದವರು. ನಾವೀಗ ಏನು ಭೂತ ಭವಿಷ್ಯತ್ ಅಂತ ಕರೀತೀವಲ್ಲ ಅವ್ರಿಗೆ ಅದೆಲ್ಲ ಇರೋದಿಲ್ಲ. ಮೇಲೆ ಕೆಳಗೆ ಇರೋದಿಲ್ಲ. ಹಿಂದು ಮುಂದು ಇರೋದಿಲ್ಲ. ಅಲ್ಲಿಪುರದ ತಾತಯ್ಯ ಬಹುಶಃ ಆ ಸ್ಥಿತಿಯನ್ನು ಪಡೆದಿರಬೇಕು.

ಸಂ: ಅಲ್ಲೀಪುರದ ತಾತಯ್ಯನವರನ್ನ ನೋಡಿದ್ದಿರಾ ನೀವು? ನೂರಾರು ವರ್ಷ ಬದುಕಿದ್ರು ಅಂತ ಮಿತ್ ಇದೆ.

ಕೋಚೆ: ನೋಡಿದ್ದೆ. ಮತ್ತು ನಾನು ಬಳ್ಳಾರೀಲಿ ಇರೋ ತನಕಾನೂ ಅಥವಾ ತಾತ ಅಲ್ಲೀಪುರದಲ್ಲಿ ಇರೋತನಕಾನು ಅನೇಕ ಬಾರಿ ನೋಡಿದ್ದೆ. ಜನ ಹೇಳ್ತಾರೆ ಬಹಳ ಕಾಲ ಬದುಕಿದ್ರು ಅಂತ. ಅದರಲ್ಲಿ ಅಸಂಭವವೇನೂ ಇಲ್ಲ. ಅರವಿಂದರ ಜೀವನದಲ್ಲಿ ಬರ‍್ತದೆ. ಅರವಿಂದರು ಕಂಡ ಯೋಗಿ ಅವರು. ಹಲ್ಲು ನೋವಾಗಿದ್ದ ಸಂದರ್ಭದಲ್ಲಿ ಆತ ಹೇಳಿದರಂತೆ ಇದು ಔರಂಗಜೇಬ್ ಇದ್ದಾಗಿಲಿಂದಲೂ ಹಿಂಗೆ ಕಾಡಿಸ್ತಿತ್ತು ಅಂತ (ನಗು). ಈ ದೇಹವನ್ನು ಆ ರೀತಿಯಾಗಿ ಬಹು ದೀರ್ಘಕಾಲ ಇಟ್ಟುಕೊಳ್ಳುವ ಕಲೆ ನಮ್ಮ ಯೋಗಿಗಳಿಗಿತ್ತು. ಅಲ್ಲಮ ಪ್ರಭುವಿನ ಕಥೆಗಳಲ್ಲಿ ಗೋರಕ್ಷ ಬರ‍್ತಾನಲ್ಲ, ಅವನು ಹಠಯೋಗ ಮಾಡ್ತಾನೆ. ಅಂದರೆ ರೀಜಿನುಯೇಶನ್ ಆಫ್ ಅವರ್ ಎನರ್ಜಿ. ಈ ನಮ್ಮ ದೇಹದಲ್ಲಿ ಇರತಕ್ಕಂಥ ಬ್ಲಡ್ ಸೆಲ್ಸ್‌ನಲ್ಲಿ ಎಲ್ಲಿತನಕ ಪವರ್ ಇರ‍್ತದೆ, ಅಲ್ಲೀತನಕ ಇರ‍್ತದೆ ಅದು. ಆ ಪವರ್ ಎಗ್ಸಾಸ್ಟ್ ಆದ ತಕ್ಷಣ ನಿಂತುಬಿಡ್ತದೆ. ಎನರ್ಜಿ ಜನರೇಟಿಂಗ್ ಚಾರ್ಜ್ ಆಗತಕ್ಕಂಥ ಪ್ರಕ್ರಿಯೆ ದಿನವೂ ನಡೀತದೆ ನಮ್ಮ ದೇಹದಲ್ಲಿ. ಈಗ ಎನರ್ಜಿ ರಿಚಾರ್ಜಿಂಗ್ ಮಿಷನ್ಸ್ ಅದಾವಲ್ಲ ಹಾಗೆ.

ಸಂ: ನೀವು ಆಧ್ಯಾತ್ಮಿಕತೆ ಜತೆಗೆ ವೈeನಿಕ ಮನೋಭಾವ ವೈಚಾರಿಕತೆಯನ್ನೂ ಇಟ್ಟುಕೊಂಡಿದೀರಿ. ನಮ್ಮ ಸಮಾಜವನ್ನು ರಾಜಕೀಯ ಪ್ರeಯಿಂದ ಆರ್ಥಿಕ ತಳಹದಿಯಲ್ಲಿ ವಿಶ್ಲೇಷಣೆ ಮಾಡುವಂತಹ ಪ್ರeಯನ್ನೂ ಇಟ್ಟುಂಡಿದೀರಿ. ಅರವಿಂದರು, ಅಲ್ಲೀಪುರದ ತಾತಯ್ಯ, ಕುವೆಂಪು ಇವರ ಜತೆಗೆ ಒಟ್ಟಿಗೆ ಅನುಸಂಧಾನ ಮಾಡುವಾಗ ಯಾವುದೂ ಸಮಸ್ಯೆ ಬರಲಿಲ್ಲವಾ?

ಕೋಚೆ: ಹೆಂಗೆ ಬರುತ್ತೆ? ಈಗ ಕುವೆಂಪು ಅವರನ್ನು ನಾವಿನ್ನೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅವರನ್ನ ಕವಿಯಾಗಿ ಕಾಣ್ತಿದೇವೇ ಹೊರತು ಅನುಭಾವಿ ಯಾಗಿ ಕಾಣ್ತಿಲ್ಲ. ಅವರ ರಾಮಾಯಣ ದರ್ಶನದ ಪ್ರತಿಯೊಂದು ಸಾಲಿನಲ್ಲೂ ಪ್ರತಿಯೊಂದು ಶಬ್ದದಲ್ಲೂ ಅಧ್ಯಾತ್ಮ ಅನುರಣಿತವಾಗ್ತಿದೆ.

ಸಂ: ಅನುಭಾವ ಅಧ್ಯಾತ್ಮ ಎರಡನ್ನೂ ಒಂದೇ ಕರೀತಿದೀರಾ ಸಾರ್?

ಕೋಚೆ: ಅನುಭವಕ್ಕೂ ಅನುಭಾವಕ್ಕೂ ವ್ಯತ್ಯಾಸವಿದೆ. ಸಾಧಾರಣ ಐಹಿಕ ಅನುಭವ ಏನಿದೆ ಅದು ಅನುಭವ. ಈ ಐಹಿಕ ಅನುಭವಗಳಿಗಿಂತಲೂ ಹಿಂದಿರ ತಕ್ಕಂಥದ್ದು ಅನುಭಾವ. ಈ ಸರ್ವದರಲ್ಲೂ ಯಾವುದಿದೆ ಅಂತ ಹೇಳ ಬೇಕಂದರೆ, ಈ ಹೂಗಳನ್ನು ನೋಡ್ತೀರಿ ಅಂತಿಟ್ಕೊಳ್ಳಿ, ಒಂದೇ ತೋಟ ದಲ್ಲಿರುವ ವಿವಿಧ ಬಣ್ಣದ ಹೂಗಳಲ್ಲಿ ನಾವು ಕಾಣ್ತಕ್ಕಂತಹದ್ದು ವಿವಿಧ ವರ್ಣಗಳು. ಆದರೆ ಆ ವರ್ಣ ಸಂಯೋಜನೆಯ ಹಿಂದೆ ನೀವು ನೋಡಿದಾಗ ಅದು ನಮಿಗೆ ಬರೀ ಹೂವಾಗಿ ಕಾಣಲ್ಲ. ಒಂದು ಸೌಂದರ್ಯದ ಗುರುತಾಗಿ ಕಾಣ್ತದೆ. ಅದರ ಮೂಲ ಕಾಣ್ತದೆ. ಇಂಗ್ಲಿಷ್ ಕವಿ ಕೀಟ್ಸ್ ಟ್ರೂತ್ ಈಸ್ ಬ್ಯೂಟಿ ಬ್ಯೂಟಿ ಈಸ್ ಟ್ರೂv ಅಂದ್ನಲ್ಲ, ಆ ಮಾತಿನ ಅರ್ಥ ಪೂರ್ತಿ ಆಗಿದ್ದಿಲ್ಲ. ಆದರೆ ಅವನು ಸತ್ಯವನ್ನೇ ಹೇಳಿದ್ದಾನೆ. ಈ ಸೌಂದರ್ಯದಲ್ಲಿ ನೀನು ದೈವವನ್ನು ಕಾಣದೇ ಹೋದ್ರೆ, ’ಪಕ್ಷಿ, ಅಲ್ತಲ್ತಾ, ತರು ಚೈತ್ಯಾಕ್ಷಿ’. ತರುವಿನ ಚೈತ್ಯ ಅಕ್ಷಿಯೇ ಆ ಪಕ್ಷಿ. ಈ ಮಾತ್ನಲ್ಲಿ ಎಷ್ಟು ಅರ್ಥ ಇದೆ ನೋಡಿ.

ಸಂ: ನೀವು ರಾಮಾಯಣದರ್ಶನದ ಪ್ರತಿ ಲೈನಿನಲ್ಲೂ ಅಧ್ಯಾತ್ಮ ಅನುಭಾವ ಇದೆ ಅಂದಿರಿ. ನೀವು ಅದರ ಮೇಲೆ ಒಂದು ವಿಶ್ಲೇಷಣ ಗ್ರಂಥವನ್ನೂ ಬರೆದು ಪ್ರಕಟಿಸಿದೀರಿ. ಈ ಹಿನ್ನೆಲೆಯಲ್ಲಿ ಈ ಪ್ರಶ್ನೆ ಕೇಳ್ತೀದಿನಿ. ಅವರ ಬೇರೆ ಬರಹಗಳಿಗೆ ಅದರಲ್ಲೂ ಕಾದಂಬರಿಗೆ ಸಿಕ್ಕಷ್ಟು ಓದುಗರು ಯಾಕೆ ರಾಮಾಯಣ ದರ್ಶನಕ್ಕೆ ಸಿಗಲಿಲ್ಲ.

ಕೋಚೆ: ನೋಡಿ, ಅದರ ದರ್ಶನಾಂಶ ಸಾಧಾರಣ ಜನಗಳಿಗೆ ಸುಲಭವಾಗಿ ವೇದ್ಯ ವಾಗಲಿಲ್ಲ. ಘನಪಂಡಿತರು ವೇದ ಉಪನಿಷತ್ತು ಗೀತೆ ಹೇಳ್ತಾರೆ. ಆದರೆ ಅದರ ಆಂತರ್ಯ, ಅನುಭಾವ ದೃಷ್ಟಿ ಏನು ಅಂತಕ್ಕಂಥದ್ದು ಅವರಿಗೆ ಅನುಭವವಿಲ್ಲ. ಅವ್ರಿಗದು ಆಗೋದಿಲ್ಲ.

ಸಂ: ಹೀಗಂದರೆ ಓದುಗರ ಆಯ್ಕೆಗಳನ್ನೇ ನಾವು ಅಲ್ಲಗಳೆದಂತೆ ಆಗಲ್ವಾ?

ಕೋಚೆ: ಅದನ್ನು ನಾವು ಅಲ್ಲಗಳೆಯೋ ಪ್ರಶ್ನೆಯಿಲ್ಲ. ಯಾರ‍್ಯಾರ ಚೇತನ ಯಾವ ಮಟ್ಟಕ್ಕೆ ಮುಟ್ಟಿರ್ತದೋ ಆಯಾ ಮಟ್ಟಕ್ಕೆ ಅದು ಅರ್ಥವಾಗುತ್ತೆ.

ಸಂ: ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪಿsಕ್ಷನ್ನಿಗೆ ನಮ್ಮ ೨೦ನೇ ಶತಮಾನದ ಬದುಕನ್ನು ಹಿಡಿಯುವ ಒಂದು ಧಾರಣಾ ಶಕ್ತಿಯಿದೆ. ನೀವೂ ಒಬ್ಬ ಪಿsಕ್ಷನ್ ರೈಟರ್. ಇದಕ್ಕೆ ಹೋಲಿಸಿದರೆ ಈ ಮಹಾಕಾವ್ಯದ ನುಡಿಗಟ್ಟಿಗೇನೇ ನಮ್ಮ ಹೊಸಕಾಲದ ಓದುಗರ ಅನುಭವದ ಜತೆ ಬೆರೆಯೋದರಲ್ಲಿ ಏನೋ ಒಂದು ಸಮಸ್ಯೆಯಿದೆ ಅನಿಸುತ್ತದೆ.

ಕೋಚೆ: ಅಲ್ಲ, ಅದಕ್ಕಾಗೇ ನಾನು ಹೇಳೋದು ನಮಗೆ ಮೈಸೂರ ಮಲ್ಲಿಗೇನೂ ಬೇಕು, ರಾಮಾಯಣ ದರ್ಶನವೂ ಬೇಕು. ಅಧ್ಯಾತ್ಮದ ದೃಷ್ಟಿಯಲ್ಲಿ ಮೈಸೂರ ಮಲ್ಲಿಗೆ ಕಳಪೆ ಅಂತ ನಾನು ಹೇಳೋದಿಲ್ಲ. ಅದರ ಸ್ಥಾನ ಅದಕ್ಕುಂಟು. ನಮ್ಮ ನಮ್ಮ ಅರಿವಿನ ಮಟ್ಟಕ್ಕನುಗುಣವಾಗಿ ಯಾವುದೇ ಒಂದು ಆಪ್ಯಾಯಮಾನ ಅಥವಾ ತಿರಸ್ಕಾರ ಉಂಟಾಗುತ್ತದೆ. ಅದು ಜನರಿಗೆ ಗೊತ್ತಿರೋದರಿಂದ ತಿರಸ್ಕಾರ ಮಾಡ್ತಾರೆ ಅಂತ ನಾನು ಭಾವಿಸೋದಿಲ್ಲ. ಅವರಿಗೆ ಗೊತ್ತಿಲ್ಲ ಪಾಪ. ಏನ್ಮಾಡ್ತಾರೆ ಅವ್ರು? ಈಗ ಕುವೆಂಪು ಅವರ ಕವಿತೆಗಳನ್ನೆ ತಗೊಳ್ಳಿ ನೀವು ಅಥವಾ ’ಜಲಗಾರ’ನಂಥ ಸಣ್ಣ ಏಕಾಂಕ ನಾಟಕ ತಗೊಳ್ಳಿ ನೀವು. ಉದ್ದೇಶಪೂರ್ವಕವಾಗಿ ಬ್ರಾಹ್ಮಣರನ್ನು ಹೀಯಾಳಿಸಲಿಕ್ಕೇನೆ ಬರೆದರು ಅಂತ ಕೆಲವರು ತಪ್ಪು ತಿಳ್ಕಂಡು ದೊಡ್ಡ ಚರ್ಚೆ ಮಾಡಿದರು. ಇದ್ಯಾಕೆ ಹಿಂಗಾಗುತ್ತೆ ಅಂದರೆ ಅದರ ಮಟ್ಟಕ್ಕೆ ಹೋಗಿ ಅರಿಯೋಕೆ ಆಗಲಿಲ್ಲ ಅವರಿಗೆ.

ಸಂ: ಶ್ರೀರಾಮಾಯಣದರ್ಶನಂ ಅನ್ನು ನಿಮ್ಮಂತಹ ಕೆಲವು ವಿದ್ವಾಂಸರು ಅದು ಶ್ರೇಷ್ಠ ಕೃತಿ ಅಂತ ಹೇಳಿದಿರಿ ಮತ್ತು ಚರ್ಚೆ ಮಾಡಿದಿರಿ. ಆದರೂ ಬಹು ಸಂಖ್ಯಾತ ಓದುಗರು ಕುವೆಂಪು ಅವರ ಕಾದಂಬರಿಗಳನ್ನ ಇಷ್ಟಪಟ್ಟರು. ವೈಚಾರಿಕ ಬರೆಹಗಳನ್ನು ಇಷ್ಟಪಟ್ಟರು. ಇದರ ಹಿಂದೆ ಓದುಗರ ಬೌದ್ಧಿಕ ಅಥವಾ ಆಧ್ಯಾತ್ಮಿಕ ಮಟ್ಟದ ಪ್ರಶ್ನೆಗಿಂತ, ಈ ಆಧ್ಯಾತ್ಮಿಕ ಲೋಕ ಅನ್ನೋ ದೇನೇ ಒಂದು ಸೀಮಿತವಾದ ಸಾಧ್ಯತೆಯನ್ನು ಉಳ್ಳದ್ದು ಅನ್ನೋದು ಒಂದು ಕಾರಣವಾಗಿರಬಹುದಾ ಅಂತ.

ಕೋಚೆ: ಯಾವಾಗಲೂ ಈ ಆಧ್ಯಾತ್ಮಿಕ ಕ್ಷೇತ್ರ ಕೆಲವರಿಗೇ ಅದು. ಕಥೆ ಕಾದಂಬರಿ ಗಳಿಗಿರೋ ಜನಪ್ರಿಯತೆ ಈ ಗ್ರಂಥಗಳಿಗಿರೋಲ್ಲ. ಅರವಿಂದರ ಮಹಾಕಾವ್ಯ ’ಸಾವಿತ್ರಿ’ಯನ್ನೆ ತಗೊಳ್ಳಿ. ಎಷ್ಟು ಜನಗಳಿಗೆ ಅದು ಹಿಡಿಸ್ತದೆ? ಇಂಗ್ಲಿಷ್‌ನಲ್ಲಿ ಆಕ್ಸ್‌ಫರ್ಡ್ ಕೇಂಬ್ರಿಡ್ಜ್‌ಗಳಲ್ಲಿ ಡಾಕ್ಟರೇಟ್ ಡಿಗ್ರಿ ತಂಗೊಂಡಿರೋರಿಗೇ ಇದು ದಕ್ಕಿಲ್ಲ. ನಮ್ಮ ಗೋಕಾಕರಿಗೆ ಕೂಡ ಇದು ಸಂಪೂರ್ಣವಾಗಿ ಗ್ರಹಿಕೆ ಆಗಿತ್ತು ಅಂತ್ಹೇಳಿ ಅವರ ಬರಹಗಳಲ್ಲಿ ಕಂಡು ಬರೋದಿಲ್ಲ. ಆದರೆ ಬೇಂದ್ರೆ ಮಾಸ್ತರಿಗೆ ಡಾಕ್ಟರೇಟ್ ಡಿಗ್ರಿ ಇಂಗ್ಲಿಷ್‌ನಲ್ಲಿ ಇಲ್ಲದಿದ್ರೂ ಕೂಡ, ಅವರ ಬರಹದಲ್ಲಿ ಇದರ ಒಂದು bsಯೆ ನಮಗೆ ಕಂಡು ಬರ‍್ತದೆ. ಅರವಿಂದರ ’ಸಾವಿತ್ರಿ’ಯನ್ನು ಅನುವಾದ ಮಾಡ್ಲಿಕ್ಕೆ ಧಾರವಾಡದಲ್ಲಿ ಒಬ್ಬ ದೊಡ್ಡ ಶ್ರೀಮಂತರು ದೇಸಾಯಿ ಬಾಡಿಗೆ ಮನೆ ಕೊಟ್ಟು, ಎಲ್ಲ ಸವಲತ್ತುಗಳನ್ನು ಮಾಡಿಕೊಟ್ಟಿದ್ದರಂತೆ. ರಂಶ್ರೀ ಮುಗುಳಿಯವರು ನಾನು ಮಾಡಿದ ಸಾವಿತ್ರಿಯ ಅನುವಾದದ ಎರಡನೇ ಸಂಪುಟವನ್ನ ಬಿಡುಗಡೆ ಮಾಡುವಾಗ ಇದನ್ನ ಬಹಿರಂಗ ಸಭೆಯಲ್ಲಿ ಹೇಳಿದ್ರು. eನಪೀಠ ಪ್ರಶಸ್ತಿ ವಿಜೇತರಾದ ಬೇಂದ್ರೆಯವರಿಗೆ ಅರವಿಂದರ ಸಾವಿತ್ರಿಯನ್ನು ಅನುವಾದ ಮಾಡ್ಲಿಕ್ಕೆ ಪ್ರಯತ್ನ ಮಾಡಿ ಆಗಲಿಲ್ಲ. ಸಾವಿತ್ರಿಯಲ್ಲಿ ಯಾವುದು ಪದ್ಯದಲ್ಲಿದೆಯೊ ಅದು ಗದ್ಯರೂಪದಲ್ಲಿ ಅರವಿಂದರ ’ದಿವ್ಯಜೀವನ’ದಲ್ಲಿದೆ. ಆ ದಿವ್ಯಜೀವನವನ್ನು ಇವರು ಅರ್ಥ ಮಾಡ್ಕೊಂಡು ಸರಿಯಾಗಿ ಅನುವಾದ ಮಾಡಿದ್ರೆ ದೊಡ್ಡ ಸಾಧನೆ ಅಂತ ಮುಗಳಿಯವರು ಹೇಳಿದ್ರು. ಈ ಮಾತನ್ನ ಹೇಳಬೇಕಾದ್ರೆ ನನಿಗೇ ಆಶ್ಚರ್ಯ ಆಯ್ತು. ನೀವು ನನಿಗೆ ವಿದ್ವಾಂಸರೆಂದಿರಿ. ನಿಜವಾಗಿ ಹೇಳ್ತೀನಿ. ನನಿಗೆ ವಿದ್ವತ್ತು ಇಲ್ಲೇ ಇಲ್ಲ. (ನಗು) ವಿದ್ವತ್ತಿನಿಂದ ಬರೋ ಮಾತಲ್ಲ ಇದು.

ಸಂ: ’ರಾಮಾಯಣದರ್ಶನಂ’ ನಿಮಗೆ ಯಾಕೆ ಮಹತ್ವದ ಕೃತಿ ಅನಿಸ್ತಿದೆ?

ಕೋಚೆ: ಅಂದರೆ, ಈ ಒಟ್ಟು ಮನುಷ್ಯನ ಅನ್ವೇಷಣೆ ಅವನಿಗೆ ಬುದ್ಧಿ ವಿಕಸಿತವಾದಾಗಿ ನಿಂದಲೂ ಒಂದು ದೊಡ್ಡ ಸಮಸ್ಯೆಯಿದೆ. ಈ ವಿಶ್ವದ ವಿಶಿಷ್ಟ ವೈಚಿತ್ರ್ಯ ಇದರ ಕ್ಲಿಷ್ಟತೆ ಏನು? ಈಗ ಒಬ್ಬ ಸುಂದರಿಯ ಕಣ್ಣಲ್ಲಿ ನೀವು ಆ ಬೆಳಕನ್ನು ಕಾಣ್ತೀರಿ. ಅದು ಹೇಗೆ ಸಾಧ್ಯ? ಹ್ಯಾಗೆ ಬಂತಿದು? ಈ ಸೃಷ್ಟಿಯ ರಹಸ್ಯ ಏನಿದೆಯಲ್ಲ ಇದನ್ನು ಭೇದಿಸಬೇಕು ಅನ್ನತಕ್ಕಂಥ ಆಸಕ್ತಿ, ಮನುಷ್ಯನಿಗೆ ಬುದ್ಧಿ ವಿಕಸಿತವಾದಾಗಿನಿಂದಲೂ ನಡಿತಾನೇ ಇದೆ. ಅದಿಕ್ಕೆ ಸರಿಯಾದಂತಹ ಮನಸ್ಸಿಗೆ ತೃಪ್ತಿಯಾಗತಕ್ಕಂಥ, ಬುದ್ಧಿಗೆ ಮೆಚ್ಚುಗೆಯಾಗತಕ್ಕಂಥ ಒಂದು ಮಾಸ್ಟರಿಕೆ ಏನಿದೆಯಲ್ಲ ಅದನ್ನ ಪಡೀತಕ್ಕಂಥ ಪ್ರಯತ್ನ ಏನಿದೆಯಲ್ಲ. ಯಾಕಂತ ಹೇಳಿದ್ರೆ ಮನುಷ್ಯ ಜೀವನದಲ್ಲಿ ಸುಖವನ್ನು ಕಾಣದೆ ಇರತಕ್ಕಂಥsದ್ದು ಒಂದು ಸಾಮಾನ್ಯ ಸ್ಥಿತಿ. ಆದರೆ ಜೀವದ್ದು ಲೋಕದಲ್ಲಿ ಸಂತೋಷವಾಗಿಯೇ ಬದುಕಬೇಕು ಅನ್ನತಕ್ಕಂಥದ್ದು ಅದರಿಚ್ಫೆ. ಯಾರಾದ್ರು ನನಿಗೆ ದುಃಖ ಬರಲಿ ಅಂತ ಬೇಡ್ತಾರ? ಯಾರೂ ಬೇಡಲ್ಲ. ಆದರೂ ನಿಜದಿಂದ ವಂಚಿತರಾಗಿದೀವಲ್ಲ ಯಾಕೆ? ನೋಡಿ, ದೈವವು ಆನಂದ ಸ್ವರೂಪಿ, ಸರ್ವಶಕ್ತ, ಸರ್ವಾಂತರ್ಯಾಮಿ, ಸರ್ವಜ್ಞ, ಅಂತೆಲ್ಲ ಹೇಳ್ತಾರೆ. ಇವೆಲ್ಲವೂ ಆಟ್ರಿಬೂಟ್ಸ್ ಅಲ್ವಾ? ಮತ್ತೆ ದೇವರು ಆನಂದಮಯಿ ಆದ್ರೆ ಈ ದುಃಖ ನಮಗೆ ಯಾಕೆ ಬಂತು? ಆನಂದ ಮತ್ತು ದುಃಖ ಒಂದಕ್ಕೊಂದು ವಿರುದ್ಧ ಹೌದಲ್ಲ. ಇದು ಯಾಕೆ ಅನ್ನತಕ್ಕಂಥ ಜಿeಸೆ ಮನುಷ್ಯನ ಜೀವನದಲ್ಲಿ ಯಾವಾಗಲೂ ನಡೀತಾನೆ ಇದೆ. ಇದು ನಮಿಗೆ ಈ ಒಂದು ಡಿಸ್ ಹಾರ‍್ಮನಿಯಿಂದ ಆದದ್ದು ರಾಮ ವಾಲಿಯನ್ನ ಕೊಂದ ಪ್ರಸಂಗದಲ್ಲಿ ಬರ್ತದೆ. ರಾಮ ಹೇಳ್ತಾನೆ. ನಾನು ಕೊಂದೆ ಅನ್ನೋದು ವ್ಯವಹಾರಿಕ ಮಾತಷ್ಟೇನೇ. ಆದ್ರೆ ಅದು ಪೂರ್ವನಿಯಾಮಕ. ನಾನು ಮಾಡಿದೆ ಅನ್ನುವಂಥಾದ್ದಲ್ಲ. ನೀವು ’ಶ್ಮಶಾನ ಕುರುಕ್ಷೇತ್ರ’ದ ಕೊನೇ ಅಂಕದ, ಕೊನೇ ದೃಶ್ಯದಲ್ಲಿ ಬರ‍್ತಕ್ಕಂಥದ್ದನ್ನು ಗಮನಿಸಿ. ನಾನು ಅನ್ನೋದು ನಿಮಿತ್ತ ಒಂದು ಮಾತ್ರ. ಈ ಒಂದು ದೃಷ್ಟಿ ಬಂದ್ರೆ ಮನುಷ್ಯ ಬಹುಮಟ್ಟಿಗೆ ನೆಮ್ಮದಿಯಾಗಿ ಇರಲಿಕ್ಕೆ ಸಾಧ್ಯ ಅಂತ ಹೇಳ್ತೀನಿ ನಾನು.

ಸಂ: ಜಗತ್ತಿನ ವಿದ್ಯಮಾನಗಳನ್ನೆಲ್ಲ ಯಾವುದೊ ಒಂದು ಮಾನವಾತೀತವಾದ ಪೂರ್ವನಿಯಾಮಕ ಶಕ್ತಿ ನಿಯಂತ್ರಿಸ್ತದೆ ಅಂತ ಹೇಳ್ತಿದೀರಾ?

ಕೋಚೆ: ಫೇಟಲಿಸಂ ಅಲ್ಲ ಅದು. ಯಾವುದು ಈ ರೀತಿ ಆಗ್ತದೆ ಅನ್ನೋದು ಪೂರ್ವ ನಿರ್ಧಾರಿತ ಹೇಳ್ತಿರಿ, ಅದನ್ನ ನಿವಾರಣೆ ಮಾಡ್ತಕ್ಕಂಥ ಶಕ್ತಿ ಕೂಡ ನಮಗೆ ಕೊಡಲಾಗಿದೆ ಅಲ್ಲವಾ?

ಸಂ: ನಿಮ್ಮ ಬಹುತೇಕ ಬರವಣಿಗೆಯಲ್ಲಿ ಒಂದು ಬಗೆಯ ಚರಿತ್ರೆ ಕಟ್ಟಿಕೊಡುವ ಕೆಲಸ ನಡೆಯುತ್ತೆ. ನಿಮ್ಮ ’ಹಿಂದಿರುಗಿ ಬರಲಿಲ್ಲ’, ’ಬೇಡಿಕಳಚಿತು’, ಮುಂತಾದ ಕಾದಂಬರಿಗಳಲ್ಲಿ. ನಿಮ್ಮ ನ್ಯಾಯಾದಿsಶನ ನೆನಪುಗಳು ಇತ್ಯಾದಿ ಕೃತಿಗಳಲ್ಲಿ ಇದಿದೆ. ಮನುಷ್ಯ ಬದುಕಿನಲ್ಲಿ ಪ್ರಭುತ್ವ, ಅದಿsಕಾರ, ಸ್ವಾರ್ಥಪರ ಶಕ್ತಿಗಳಿಂದ ಉಂಟಾಗುವ ಪಲ್ಲಟಗಳನ್ನು ವಿಶ್ಲೇಷಣೆ ಮಾಡುವ ಜಾಗೃತ ಪ್ರe ಕಾಣತ್ತೆ. ಆದರೆ ’ರಾಮಾಯಣದರ್ಶನಂ’ ಮತ್ತು ಅರವಿಂದರ ’ದಿವ್ಯಜೀವನ’ ಬಂದಾಗ ಇನ್ನೊಂದು ಬಗೆಯ ಪರಿಭಾಷೆಯನ್ನು ಬಳಸ್ತೀರಿ. ಬೇರೆ ಅಲೌಕಿಕವೆನ್ನಬಹುದಾದ ಚಿಂತನಾ ಕ್ರಮ ಬಳಸ್ತಿರಿ. ಇವೆರಡರ ನಡುವೆ ನಿಮಗೆ ಎಲ್ಲೋ ಬಿರುಕಿರಬಹುದು ಅಂತ ಅನಿಸಿದೆಯಾ?

ಕೋಚೆ: ಎಲ್ಲರೂ ಸರಿಸಮಾನರು ಅನ್ನೋ ಮಾತನ್ನ ನಾವು ಹೇಳ್ತೀವಿ. ಅದನ್ನೇ ಸಾಮಾಜಿಕ ಜೀವನದಲ್ಲಿಯೂ ಅನುಸರಿಸ್ತೀವಿ. ಅಧ್ಯಾತ್ಮದಲ್ಲಿ ಕೂಡ ನಾವೆಲ್ಲರೂ ಒಂದೇ ಅಂತೀವಿ. ನೀವು ಅರವಿಂದಾಶ್ರಮಕ್ಕೆ ಹೋದರೆ, ಅಲ್ಲಿ ನೀವು ಯಾವ ಭಾಷೆಯವರು ಅಂತ ಕೇಳಲ್ಲ. ಯಾವ ಪ್ರದೇಶದವರು ಅಂತ ಕೇಳಲ್ಲ. ಯಾವ ಜಾತಿಯವರು ಅಂತ ಕೇಳಲ್ಲ. ಅಲ್ಲಿ ಯಾರೂ ಇಲ್ಲ. ಯಾವುದೂ ಇಲ್ಲ. ಅಲ್ಲಿ ನಾವೆಲ್ಲ ಹೋದಾಗ ಒಂದೇ ತಾಯಿ ಮಕ್ಕಳು ಅಂತ ಭಾವಿಸ್ತೀವಿ. ಇದನ್ನು ಸರಿಸಮಾನತೆ ಅಂತೀರೊ ಏನಂತೀರೊ ನನಗೆ ಗೊತ್ತಿಲ್ಲ. ಅಲ್ಲಿರೋದು ಸಾಮಾಜಿಕ ಸಮಾನತೆಗಿಂತಲೂ ಆಚಿನದು.

ಸಂ: ಸಮಾನತೆಯ ಆಯಾಮ ಇರೋ ಕಾರಣದಿಂದಲೇ ಅಧ್ಯಾತ್ಮ ಕೂಡ ಸಾಮಾಜಿಕವಾಗುತ್ತೆ.

ಕೋಚೆ: ಹೌದು. ಅರವಿಂದರ ಆಧ್ಯಾತ್ಮಕ್ಕೂ ನಮ್ಮ ಸಾಮಾಜಿಕ ಸರಿಸಮಾನತೆಯ ಸಿದ್ಧಾಂತಗಳಿಗೂ ನನಗೆ ಏನೂ ವ್ಯತ್ಯಾಸ ಕಾಣೋದಿಲ್ಲ. ಅಲ್ಲಿ ಫರಫೆಕ್ಟ್ ಕಮ್ಯೂನಿಜಮ್, ಫರಫೆಕ್ಟ್ ಸೋಶಿಯಲಿಜಂ ಇನ್ ಪ್ರಾಕ್ಟೀಸ್ ಇದೆ. ಆಧ್ಯಾತ್ಮ ಕ್ಷೇತ್ರಕ್ಕೆ ಪೈಗಂಬರರ ಕೊಡುಗೆ ಬಹಳ ಕಡಿಮೆ. ಹಿ ಡಿಡ್ ಸ್ವೀಕ್ ಇನ್ ರಿಲಿಜಿಯಸ್ ಲಾಂಗ್ವೇಜ್, ಹಿ ಸ್ಪೋಕ್ ಮಚ್ ಇನ್ ಆರ‍್ಡಿನರಿ, ಟೆಂಪರರಿ ಲಾಂಗ್ವೇಜ್. ನಾವು ಹೇಳ್ತೀವಲ್ಲ ಅಧ್ಯಾತ್ಮದಲ್ಲಿ ಮಮಾತ್ಮ ಸರ್ವಭೂತಾತ್ಮ, ತನ್ನಂತೆ ಪರರನ್ನು ಕಾಣಬಹುದು ಅಂತ. ಈವಾಗ ಪ್ರಾಕ್ಟಿಕಲ್ಲಾಗಿ ಈ ಭ್ರಾತೃತ್ವ ಅಂತ ಹೇಳ್ತೀವಲ್ಲ, ಇಸ್ಲಾಂನಲ್ಲಿರುವಷ್ಟು ಭ್ರಾತೃತ್ವದ ಆಚರಣೆ ಮತ್ತೆಲ್ಲೂ ಇಲ್ಲ. ಅಲ್ಲ, ಒಂದು ಹೆಣ ಹೋಗ್ತದೆ ಅಂದರೆ, ಎಷ್ಟೇ ಶ್ರೀಮಂತನಾಗಿರಬಹುದು ಅವನು ಅಂಗಡಿಯಿಂದ ಎದ್ಹೋಗಿ ಹೆಗಲ್ಕೊಟ್ಟು ಬರ್ತಾನೆ. ಶವದ ಮೆರವಣಿಗೆಯೊಳಗೆ ಒಂದು ಎರಡ್ಹೆಜ್ಜೆನಾದ್ರೂ ಹೋಗ್ತಾರೆ. ಬಳ್ಳಾರೀಲಿ ನಾನು ನೋಡಿದೀನಿ. ನಾನು ಮುಸ್ಲಿಮರ ಮನೇಲಿ ಊಟ ಮಾಡಿದೀನಿ ರಾಯಚೂರಿನಲ್ಲಿ. ಎಲ್ಲ ಒಟ್ಟಿಗೆ ಕೂತ್ಕೊಂತಾರೆ. ಅಂದ್ರೇನು ಈ ಭ್ರಾತೃತ್ವ ಒಂದು ಜಾತಿಗೆ ಸೀಮಿತವಾದಾಗ ದೋಷ ಬರ‍್ತದೆ. ನಮ್ಮ ಕರಣಸಿಂಗ್ ಅರವಿಂದರ ಮಹಾಭಕ್ತ. ’ಪ್ರಾಫೆಟ್ ಆಫ್ ಇಂಡಿಯನ್ ನ್ಯಾಶಲಿಜಮ್’ ಅಂತ ಅರವಿಂದರ ಕುರಿತು ಪುಸ್ತಕ ಬರೆದರು. ನೆಹರೂ ಅದಕ್ಕೆ ಮುನ್ನುಡಿ ಬರೆದಿದಾರೆ. ಅವರಿಗೆ ಕಾಶ್ಮೀರಿ ಯುನಿವರ್ಸಿಟಿಯವರು ಡಾಕ್ಟರೇಟ್ ಕೊಟ್ಟಿದ್ದೂ ಈ ವಿಷಯಕ್ಕಾಗೀನೆ. ಅವರು ಅರವಿಂದಾಶ್ರಮಕ್ಕೆ ಬಂದ್ರೆ ಸಮಾದಿsಗೆ ಹೋಗಬೇಕಾದ್ರೆ ಎಲ್ಲರೊಡನೆ ಸಾಲಿನಲ್ಲಿ ನಿಲ್ತಿದ್ರು.

ಸಂ: ನಿಮ್ಮ ಬರಹ ಓದಿದವರಿಗೆ ನಿಮ್ಮ ಮೇಲೆ ತಾತ್ವಿಕ ಪ್ರಭಾವ ಬೀರಿದವರು ಕುವೆಂಪು, ಅರವಿಂದರು, ಬಸವಣ್ಣ ಮತ್ತು ರಾಮಕೃಷ್ಣ ಪರಮಹಂಸರು ಅಂತ ಗೊತ್ತಾಗುತ್ತೆ. ಇವರನ್ನು ಬಿಟ್ರೆ ಮತ್ಯಾರಿದಾರೆ?

ಕೋಚೆ : ನನಗೆ ಯೌವ್ವನದಲ್ಲಿ ಪ್ರಭಾವ ಬೀರಿದವರಂದ್ರೆ ವಿವೇಕಾನಂದರು. ಅದಕ್ಕೆ ಕಾರಣ ಕುವೆಂಪು ಅವರೇ. ನಾನು ಕುವೆಂಪು ಅವರ ಮೊಟ್ಟ ಮೊದಲನೇ ಪುಸ್ತಕ ಓದಿದ್ದು ವಿವೇಕಾನಂದರ ಚರಿತ್ರೆ. ಅದಾದ ಮೇಲೆ ರಾಮಕೃಷ್ಣರನ್ನು ಓದಿದೆ. ಇವೆರಡೂ ಓದಿದ ಮೇಲೆ ವಿವೇಕಾನಂದರ ಇತರ ಕೃತಿಗಳನ್ನು ಓದಿದೆ. ಆಗ ವಿವೇಕಾನಂದರು ನನ್ನನ್ನು ಗ್ರಹದಂತೆ ಹಿಡಿದಬಿಟ್ಟರು. ಆಗ ನಾನು ನಾನಾಗಿರ‍್ಲಿಲ್ಲ. ಆವಾಗ ಅವರ ಬಗ್ಗೆ ಬಂದಿರೊ ಪ್ರತಿಯೊಂದು ಅಕ್ಷರಾನೂ ಓದಿರಬಹುದು.

ಸಂ : ಆಮೇಲೆ?

ಕೋಚೆ: ವಿವೇಕಾನಂದರೇ ಹಿಂಗಿರಬೇಕಾದ್ರೆ ಅವರ ಗುರುಗಳು ಹೆಂಗಿರಬೇಕು ಅಂತ್ಹೇಳಿ ರಾಮಕೃಷ್ಣರ ಹತ್ರ ಹೋದೆ. ಅವರ ಹತ್ರ ಹೋಗುವಾಗ ನನಿಗೆ ಹುಟ್ಟಿನಿಂದಲೇ ಬಂದಂತಹ ಪ್ರಭಾವ ಬಸವಣ್ಣನದು. ಅಂದ್ರೆ ಅದು ಅಷ್ಟು ರ‍್ಯಾಶನಲಿಸ್ಟಿಕ್ ಇರಲಿಲ್ಲ ಆಗ. ಅದಾದ ಮೇಲೆ ಬರ‍್ತಾಬರ‍್ತಾ ನೋಡಿದ್ರೆ ಅವರ ವೈಚಾರಿಕತೆ ಹಿಮಾಲಯ ಪರ್ವತದಷ್ಟು ಎತ್ತರ ಇದೆಯಲ್ಲ, ಅದರಲ್ಲಿನ ಒಂದು ಅಣುವಿನಷ್ಟು ಈಗಿನ ಲೋಕ ಮುಂದುವರಿದಿಲ್ಲ ಅಂತ ಅನ್ನಿಸ್ತಾ ಇದೆ.

ಸಂ: ಅಂದರೆ ಬೇರೆಬೇರೆ ಕಾಲಘಟ್ಟದ ಚಿಂತಕರು ಬೇರೆಬೇರೆ ಹಿನ್ನೆಲೆಯವರನ್ನ ನೀವು ಯಾವ ಬಗೆಯಲ್ಲಿ ಸಿಂಥಸೈಜ್ ಮಾಡಿಕೊಂಡ್ರಿ ಅಂತನ್ನೋ ಕುತೂಹಲ ನನಗಿದೆ. ಬಸವಣ್ಣ ಭವಿಗಳನ್ನು ಕುರಿತು, ಜನಪದ ಧರ್ಮಗಳನ್ನ ಕುರಿತು ತುಂಬ ಕಹಿಯಾಗಿ ಪ್ರತಿಕ್ರಿಯೆ ಮಾಡ್ತಾನೆ. ಹಾಗೆ ಅರವಿಂದರು ಮಾಡಲ್ಲ. ಸಾಮಾಜಿಕ ಅಸಮಾನತೆ ಬಗ್ಗೆ ವಿವೇಕಾನಂದರು ಆಕ್ರೋಶಗೊಂಡು ಮಾತಾ ಡುವ ಹಾಗೆ ಅರವಿಂದರು ಮಾತಾಡಲ್ಲ. ಅಂದರೆ ಪ್ರತಿ ವ್ಯಕ್ತಿತ್ವದ ಮಧ್ಯೆ ವಿಶೇಷತೆ ಮತ್ತು ಮಿತಿಗಳನ್ನು ಕಾಣ್ತೀವಿ. ಬಸವಣ್ಣ ವೇದಗಳ ಬಗ್ಗೆ ತಳೆದ ನಿಲುವು ಅರವಿಂದರ ನಿಲುವಿಗಿಂತ ತೀರ ಬಿsನ್ನವಾದದು. ಇವರೆಲ್ಲ ಚಿಂತನೆಗಳು ನಿಮಗೆ ಸಂಘರ್ಷ ಹುಟ್ಟಿಸಲಿಲ್ಲವಾ?

ಕೋಚೆ: ’ವೇದಕ್ಕೆ ಒರೆಯ ಕಟ್ಟುವೆ ಶಾಸ್ತ್ರಕ್ಕೆ ನಿಗಳವನಿಕ್ಕುವೆ? ಅನ್ನುವ ಮಾತನ್ನಾಡು ವಾಗ ಬಸವಣ್ಣನವರ ದೃಷ್ಟಿಯೇನಿತ್ತು, ಆ ದೃಷ್ಟಿ ಈ ವೇದಗಳಿಂದ ಆಗಿರತ್ತಕ್ಕಂಥ ಪುರೋಹಿತಶಾಹಿ, ಅದರಿಂದ ಈ ಶೋಷಿತ ವರ್ಗಕ್ಕೆ ಆಗಿರತಕ್ಕಂಥ ಅನ್ಯಾಯ, ಇವುಗಳನ್ನು ದೃಷ್ಟಿಯಲ್ಲಿ ಇಟ್ಕೊಂಡು ಆ ಮಾತನ್ನು ಹೇಳಿದಾರೆ. ಅವರು ಹಾಗೇನೇ ಹೇಳಬೇಕಿತ್ತು. ನೋ ಕಾಂಪ್ರಮೈಜ್. ಆದರೆ ಎನ್ನ ತಂದೆ ಮಾದಾರ ಚನ್ನಯ್ಯ ಅಂತ ಹೇಳುವಾಗ, ಯಾರಪ್ಪ ಇವನು ಹಿಂಗೆ ಮಾತಾಡ್ತಾನಲ್ಲ, ಹೊಲೆಯನಿಗೇ ಹುಟ್ಟಿರಬೇಕು ಅಂತ ಯಾರೋ ಅಂದಿರ ಬೇಕು. ’ಹೌದೊ ನಾನು ಹೊಲೆಯರಿಗೇ ಹುಟ್ಟಿರೋನು’ ಅಂತ ಅಂದಿರಬೇಕು ಬಸವಣ್ಣ. ಆ ಮಾತನ್ನ ನಾವು ಹೆಂಗೆ ಅರ್ಥ ಮಾಡ್ಕೋಬೇಕು? ಹಾದರಕ್ಕೆ ಹುಟ್ಟಿದವನು ಅಂತ ಅರ್ಥ ಮಾಡ್ತೀವಾ? ಇಲ್ಲ. ಹಾಗೆ ಆಯಾ ಸಂದರ್ಭ ಬಂದಾಗ ಆಯಾ ಮಾತನ್ನು ಆಡಬೇಕಾಗಿದೆ. ಈಗ ಮಾತಾಡುವಾಗಲೂ ಪುರೋಹಿತಶಾಹಿಯನಾಗಲಿ, ಚಾತುರ್ವಣ್ಯದಲ್ಲಿ ಬ್ರಾಹ್ಮಣರು ಮಾಡಿರೋ ಅನ್ಯಾಯವನ್ನಾಗಲಿ ನಾವು ಖಂಡನೆ ಮಾಡ್ಬೇಕು. ಆದ್ರೆ ರಾಮಕೃಷ್ಣ ಮತ್ತು ಅರವಿಂದರು ಕೂಡ ಬ್ರಾಹ್ಮಣರೇ ಆದರೂ ನಾವು ಅವರ ಆರಾಧಕರು ಆಗ್ತೀವಿ. ಇದರಲ್ಲಿ ವೈರುಧ್ಯ ಏನು ಬಂತು?

ಸಂ: ಕುವೆಂಪು ಅವರ ಹತ್ತಿರ ನೀವು ಇದ್ದವರು. ನೀವು ಬಹಳ ಇಷ್ಟಪಡುವ ಬಸವಣ್ಣನನ್ನು ಕುವೆಂಪು ಹೇಗೆ ಗ್ರಹಿಸಿದರು? ತಮ್ಮ ಕಾವ್ಯದ ಪ್ರೇರಣೆಗಳಿಗೆ ಡಾಂಟೆ ಮಿಲ್ಟನನಿಗೆ ಹೋಗುವ ಕುವೆಂಪು, ಕನ್ನಡದ ವಚನಕಾರರನ್ನ ಅನುಸಂಧಾನ ಮಾಡಿದ ಹಾಗೆ ಕಾಣೋಲ್ಲ. ಈ ಬಗೆಗೆ ನಿಮ್ಮ ಅಬಿsಪ್ರಾಯ ತಿಳಿಯಬೇಕು ಅನಿಸಿದೆ.

ಕೋಚೆ: ಕುವೆಂಪು ಬಸವಣ್ಣನ ಕುರಿತು ೨ ಲೇಖನಗಳನ್ನ ಬರದ್ರು. ಪುಟ್ಟ ಲೇಖನಗಳು. ಬಹುಶಃ ಬಸವಣ್ಣನ ಕುರಿತು ಅಷ್ಟು ನಿಶಿತಮತಿಯಿಂದ ವಿಶ್ಲೇಷಣೆ ಮಾಡಿ ಅವರ ಔನ್ನತ್ಯವನ್ನು ಗುರ್ತಿಸಿದ್ದು ಇನ್ಯಾವ ಬರಹಗಳಲ್ಲೂ ನನಗೆ ಕಾಣಿ ಸೋಲ್ಲ. ನನ್ನನ್ನ ಕೆಲವರು ಕೇಳಿದಾರೆ. ರಾಮಕೃಷ್ಣರನ್ನು ಕುರತು ಬರೆದಿರಿ. ವಿವೇಕಾನಂದರ ಕೃತಿಸಾರ ಸಂಗ್ರಹ ಮಾಡಿದ್ರಿ. ಅರವಿಂದರ ಸಾವಿತ್ರಿ ಅನುವಾದ ಮಾಡಿದಿರಿ. ಆದರೆ ಬಸವಣ್ಣನವರ ಕುರತು ಏನೂ ಬರೀಲಿಲ್ಲವಲ್ಲ ಅಂತ. ನಾನು ’ದೀನಬಂಧ’ ಅಂತ ಬಸವಣ್ಣನ ಕುರತು ಬರೆದ ಪುಸ್ತಕ ಇದೆ. ಆದ್ರೂ ಅವರ ವ್ಯಾಪಕ ಪ್ರತಿಮೆಯನ್ನು ವ್ಯಾಪಿಸಲಿಕ್ಕೆ ಸಾಕಷ್ಟು ಭಾಷಾ ಶಕ್ತಿಯಾಗಲಿ, ಅನುಭವದ ಆಳವಾಗಲಿ ಇಲ್ಲ ಅಂತ ನಾನು ಇವತ್ತಿಗೂ ತಿಳ್ಕಂಡಿದೀನಿ. ನಾನು ಕಡಿಮೆ ಬರ್ದಿದೀನಿ ಅಂತ್ಹೇಳಿ ಬಸವಣ್ಣನ ಬಗ್ಗೆ ನನಗೆ ಆಸಕ್ತಿಯಿಲ್ಲ ಅಂತ ಖಂಡಿತಾ ಭಾವಿಸಕೂಡದು.

ಸಂ: ಪ್ರದೇಶ, ಜಾತಿ, ಮತ, ಧರ್ಮಗಳ ಎಲ್ಲೆಯನ್ನ ಮೀರಿ ಹೋಗುವ ದಾರ್ಶನಿಕ ರಾದ ಅರವಿಂದ ಕುವೆಂಪು ಪರಮಹಂಸ ತರಹದವರಿಂದ ನೀವು ಪ್ರೇರಣೆ ಪಡೆದೋರು. ಬಸವಣ್ಣನ ಬಗ್ಗೆ ಬರೆಯುವುದು ಜಾತಿಯ ಪರಿಮಿತಿಯಲ್ಲಿ ಸಿಕ್ಕಿಸಬಹುದು ಅಂತ ಏನಾದ್ರೂ ಹಿಂಜರಿಕೆಯಾಯಿತಾ?

ಕೋಚೆ: ಹೌದು, ಕೆಲವು ದಿನ ನಾನು ಲಿಂಗಧಾರಣೇನೂ ಬಿಟ್ಟಿದ್ದೆ. ಚಿಕ್ಕಂದಿನಿಂದನೂ ನಾನು ಲಿಂಗಪೂಜೆ ಮಾಡ್ದೆ ನಾನು ಒಂದು ಹನಿ ನೀರೂ ಕುಡದವನಲ್ಲ. ೧೯೫೬ರ ತನಕವೂ ನಾನು ಲಿಂಗಧಾರಣೆ ಮಾಡಿರಲಿಲ್ಲ. ಕಾರಣ ಅಂದ್ರೆ ಲಿಂಗದ ಮಹತ್ವ ನನಿಗೆ ಗೊತ್ತಿರಲಿಲ್ಲ. ಅದು ಜಾತಿ ಸೂಚಕ ಆಗ್ತದೇನೋ ಅನ್ನೋ ತಪ್ಪು ಅಬಿsಪ್ರಾಯ ನನ್ನ ಮನಸನಲ್ಲಿತ್ತು. ಈ ಯeಪವೀತ ಹ್ಯಾಗೆ ಈ ಬ್ರಾಹ್ಮಣ್ಯದ ಗುರುತೊ, ಹಾಗೆ ಶಿವದಾರವೂ ಕೂಡ ಲಿಂಗಾಯಿತ ಜಾತಿಯ ಸೂಚಕ ಅನ್ನೋ ಅಬಿsಪ್ರಾಯ ನನ್ನಲ್ಲಿತ್ತು. ಆದರೆ ಕ್ರಮೇಣ ನಾನು ಅರ್ಥ ಮಾಂಡ್ಕೊಂಡಾಗ, ಅದು ಜಾತಿ ಯಾವ ಸೂಚಕವಲ್ಲ. ಯಾವುದು ಮಾತು ಮನಸಿಗೆ ಅತೀತವಾಗಿರುತ್ತೊ, ಯಾವುದನ್ನ ಮಾತಿನಿಂದ ಪ್ರತಿಮಿಸಲಾರೆವೊ ಅಂಥದರ ಪ್ರತಿಮೆಯಿದು. ಲಿಂಗ ಅಂದರೆ ಗುರುತು. ಸಂಸ್ಕೃತದ ಡಿಕ್ಷನರಿ ತಗದು ನೋಡ್ರಿ, ಲಿಂಗ ಅಂದ್ರೆ ’ಸಿಂಬಲ್’ ಅಂತ ಬರ‍್ತದೆ. ಈಗ ನಾವು ಪುಲ್ಲಿಂಗ ಸ್ತ್ರೀಲಿಂಗ ಅಂತ ಹೇಳ್ತಿರೋದು. ’ಕುರುಹು’ ಅನ್ನೊ ಅರ್ಥದಲ್ಲಿ. ಈ ಲಿಂಗ ಅನ್ನೋದು ಜನನೇಂದ್ರಿಯದ ಗುರ್ತು ಇರಬೇಕು ಅಂತ ಶಂಬಾ ಹೇಳ್ತಾರೆ. ಇದರ ಬಗ್ಗೆ ಇವತ್ತಿಗೂ ಚರ್ಚೆಗಳು ನಡೀತಿವೆ. ಈಗ ಬಹುಜನರಿಗೆ ಗೊತ್ತಿಲ್ದೆ ಇರೋ ವಿಚಾರ. ರಾಮಕೃಷ್ಣ ಪರಮಹಂಸರು ತುತ್ತತುದಿಗೆ ಬಂದಾಗ ಒಂದು ದಿನ ತಮ್ಮ ಜನನೇಂದ್ರಿಯವನ್ನೇ ಪೂಜೆ ಮಾಡ್ತಾರೆ. ಏನಿದರ ಅರ್ಥ? ಲಿಂಗದ ಅರ್ಥ ಯಾವುದು ಮಾತಿಗೂ ಮನಸಿಗೂ ನಿಲುಕದೆ ಇರತಕ್ಕಂಥದ್ದು, ಏನು ಅಂತ್ಹೇಳಿ ನಾಲಿಗೆಯಿಂದ ಉಚ್ಚರಿಸಲಿಕ್ಕೆ ಬಾರದೆ ಇರತಕ್ಕಂಥದ್ದು ಅದು ಲಿಂಗ. ಅದರ ಗುರುತು ಕಪು. ಕಪ್ಪಿಗೆ ಯಾವ ಬಣ್ಣವೂ ಇಲ್ಲ. ಅದಕ್ಕೆ ಅದು ನಿವರ್ಣ. ವರ್ಣರಹಿತ ಅಂತ. ಅಧ್ಯಾತ್ಮ ಪರಿಭಾಷೆಯಲ್ಲಿ ಹೇಳ್ತಾರೆ. ಇದನ್ನ ಹೇಗೆ ಸಂಕೇತಿಕರಿಸ್ತೀರಿ. ಈ ಗುರ್ತು ಇಟ್ಕೊಂಡು ಬಸವಣ್ಣ ಸರಳವಾದ ಧರ್ಮ ಕಟ್ಟಿದ.

ಸಂ: ಲಿಂಗವನ್ನ ಸಂಕೇತ ಮಾಡಿದ ಬಸವಣ್ಣ, ಬೇರೆ ಬಗೆಯ ಸಂಕೇತಗಳಿದ್ದ ಜನಪದ ಧರ್ಮಗಳ ಬಗ್ಗೆ ಅನಾದರಣೆ ಮಾಡಿದ ಅನಿಸೋಲ್ಲವಾ?

ಕೋಚೆ: ಹಾಂ! ಎಲ್ಲಿ? ಹೆಂಗೆ? ಅವನ್ನ ಜನಪದ ಧರ್ಮ ಅಂತ ತಿಳ್ಕೊಂಡಿರೋದು ತಪ್ಪು. ಮರ ಸುತ್ತೋದೆ ಧರ್ಮ ಅಂತ ನಾವು ತಿಳ್ಕೊಂಡಿರೋದು ತಪ್ಪು.

ಸಂ: ವೈದಿಕರ ಯಾಗಗಳ ಟೀಕೆ ಮಾಡಿದ್ದು ಸರಿ. ಯಾಕೆಂದರೆ ಅದೊಂದು ಪವರ್ ಫುಲ್ ವ್ಯವಸ್ಥೆ ಆಗಿತ್ತು. ಆದರೆ ದುಡಿಯುವ ಕೆಳಜಾತಿಗಳು ತಮ್ಮ ಪಾಡಿಗೆ ತಾವು ಈ ಧರ್ಮಗಳನ್ನು ಅನುಸರಿಸಿಕೊಂಡು ಇದ್ದವು. ಅವುಗಳ ಮೇಲೆ ಶರಣರು ಮಾಡಿದ್ದು ದಾಳಿಯಲ್ಲವಾ?

ಕೋಚೆ: ಹಾಂ, ಹಾಂ, ಹಾಗಲ್ಲ ಅದು. ’ಪ್ರಬುದ್ಧ ಕರ್ನಾಟಕ’ದ ಸುವರ್ಣ ಸಂಚಿಕೆ ಯಲ್ಲಿ ನನ್ನ ಒಂದು ಕವಿತೆ ಪ್ರಕಟವಾಯಿತು. ಐನ್‌ಸ್ಟೈನ್‌ನ ದರ್ಶನ ಅಂತ ಅದರ ಹೆಸರು. ನೀನು ಹುಟ್ಟೋದಕ್ಕಿಂತ ಮೊದಲ ನಾನಿದ್ದೆ ಅಂತ ಅಲ್ಲಮಪ್ರಭು ಹೇಳ್ತಾರೆ. ಈ ಮಾತನ್ನ ಹೇಳುವಾಗ ಅವರು ಅದನ್ನೇ ಕುರಿತು ಮಾತ್ನಾಡ್ತಾ ಇದಾರೆ. ಇಂಥದೊಂದನ್ನು ಸಿಂಬಲೈಜ್ ಮಾಡಬೇಕಾಗಿತ್ತು. ಅದನ್ನ ಸಾಧಾರಣ ಜನಗಳಿಗೆ ಹೇಳಬೇಕಾಗಿತ್ತು.

ಸಂ: ನೀವು ಕನ್ನಡದ ಲೇಖಕರಾಗಿ ಇರುವ ಹಾಗೇನೇ ಅನುವಾದಕರಾಗಿ ಕೂಡ ಕೆಲಸ ಮಾಡಿದೀರಿ. ಸಾಮಾನ್ಯ ಅನುವಾದಕರು ಎತ್ತಿಕೊಳ್ಳದ ಕೃತಿಗಳಾದ ’ಡಿವೈನ್ ಲೈಫ್’ ಮತ್ತು ’ಸಾವಿತ್ರಿ’ಯನ್ನ ಅನುವಾದಕ್ಕೆ ಆರಿಸಿಕೊಂಡಿರಿ. ಅನುವಾದಕರಾಗಿ ನಿಮ್ಮ ಅನುಭವ ಏನು?

ಕೋಚೆ: ನಿಜವಾಗಿ ಹೇಳಬೇಕಂದರೆ, ಡಿವೈನ್ ಲೈಪಿsನ ಅನುವಾದ ನನ್ನಿಂದಾಗಿ ಆಯ್ತು ಅಂತ ಹೇಳಿದ್ರೆ ದುರಂಹಂಕಾರದ ಮಾತಾಗುತ್ತೆ. ನಾನೇ ಈಗ ಓದಿದ್ರೆ ಆ ಶಬ್ದ ಭಂಡಾರ ಹ್ಯಾಗೆ ಬಂತು, ಎಲ್ಲಿಂದ ಬಂತು ಅಂತ ಆಶ್ಚರ್ಯವಾಗ್ತದೆ. ಹಾ.ಮಾ.ನಾಯಕ, ಶಿವರುದ್ರಪ್ಪ ಅವರು ಇದರ ಬಗ್ಗೆ ಮಾತ್ನಾಡುವಾಗ ’ಇವರು ತುಂಬ ಸಂಸ್ಕೃತ ಕಲಿತಿರಬಹುದು’ ಅಂತ ಸಂದೇಹ ವ್ಯಕ್ತಪಡಿಸಿದ್ರು. ಮಾರಾಯ್ರ ನನಿಗೆ ಸಂಸ್ಕೃತದ ಪ್ರಾಥಮಿಕ eನವೂ ಅಲ್ಲ. ನಾನೇನು ೧೦ ವರ್ಷ ಅನುವಾದ ಮಾಡಿದೆನಲ್ಲಾ, ೧೯೭೨ ಅರವಿಂದರ ಶತಮಾನಕ್ಕೆ ಸರಿಯಾಗಿ ಮುಗಿಸಬೇಕು ಅಂದುಕೊಂಡಿದ್ದೆ. ಮುಗೀಲಿಲ್ಲ ಅದು. ಮತ್ತೆ ತಾಯಿ ಹೇಳಿಕಳ್ಸಿದ್ರು. ೧೯೭೨ಕ್ಕೆ ಪ್ರಥಮ ಸಂಪುಟ ಆಗಿತ್ತು. ೧೯೮೨ನೇ ಇಸವಿಗೆ ಪ್ರಕಟವಾಯ್ತು. ಕುವೆಂಪು ಬಹಳ ಮೆಚ್ಚಿಕೊಂಡು ಮುನ್ನುಡಿ ಬರೆದರು. ಇಲ್ಲ ಈ ದೊಡ್ಡ ಮಾತುಗಳಿಗೆ ನಾನು ಅರ್ಹನಲ್ಲ. ನನ್ನ ಯೋಗ್ಯತೆಗೆ ಮಿಕ್ಕ ಮಾತುಗಳಿವು. ನಾನು ಎಷ್ಟು ಅರ್ಹನೋ ಕಾಣೆ. ಅಂತ್ಹೇಳಿ ಬರದೆ ಪತ್ರ. ಇನ್ನೊಂದ್ಸಾರಿ ಅವ್ರಿಗೆ ನೋಡ್ಲಿಕ್ಕೆ ಹೋಗಿದ್ದೆ. ಆವಾಗ ಈ ಪ್ರಸ್ತಾಪ ಮಾಡಿದ್ರು. ಬಾಳ ದೊಡ್ಮಾತು. ಬರ‍್ದಿದ್ದೀರಿ. ನೀವೇನ್ಮಾಡಿದೀರಿ ಅನ್ನೋದು ನಿಮಿಗೇ ಗೊತ್ತಿಲ್ಲ. ’ಮಹಿಮೆ ಮಹಿಮೆಯನರಿಯದೆಂಬರಮ್ಮ...’ ನೀವು ಮಾಡಿದ ಕೆಲ್ಸ ಗೊತ್ತಿದ್ದವರಿಗೆ ಗೊತ್ತಾಗ್ತದೆ ಅಂದ್ರು.

ಸಂ: ನೀವು ಅನೇಕ ಚಳುವಳಿಗಳಲ್ಲಿ ಪರೋಕ್ಷವಾಗಿ ಪ್ರತ್ಯಕ್ಷವಾಗಿ ಭಾಗವಹಿಸಿ ದೋರು. ಮುಖ್ಯವಾಗಿ ಏಕೀಕರಣ ಚಳುವಳಿಯಲ್ಲಿ ನಿಮಗೆ ನೆನಪಿರೋ ಗಾಢವಾದ ಚಿತ್ರ ಯಾವುದು?

ಕೋಚೆ: ಏಕೀಕರಣ ಯಾಕೆ ಆಗ್ಬೇಕು ಅನ್ನೋದೇ ಒಂದು ಪ್ರಚೋದನೆಯ ಕಾರಣ. ೧೯೨೫-೩೦ರವರೆಗೂ ಬಳ್ಳಾರಿ ಜಿಲ್ಲೆಯಲ್ಲಿ ತೆಲುಗು ಶಾಲೆಗಳು ಇದ್ದವು. ಕನ್ನಡ ಶಾಲೆಗಳು ಇರಲಿಲ್ಲ. ಹರಪನಹಳ್ಳಿಯಲ್ಲಿ ತೆಲುಗು ಸ್ಕೂಲುಗಳು ಇದ್ದವು. ಭಾಷಾವಾರು ಪ್ರಾಂತ ರಚನೆ ಮಾಡಿದ್ರಲ್ಲ, ಆಗ ಬಳ್ಳಾರಿ ಆಂಧ್ರಕ್ಕೆ ಹೋಗಬೇಕೊ ಕರ್ನಾಟಕಕ್ಕೆ ಹೋಗಬೇಕೋ ಅನ್ನೋ ಚಳುವಳಿ ಪ್ರಾರಂಭ ವಾಯಿತು. ಆಮೇಲೆ ಈ ಇಂಗ್ಲಿಷ್ ಕಲೆಕ್ಟರ್‌ಗಳು ಬಂದು ನೋಡಿದಾಗ ಜಿಲ್ಲೆಯಲ್ಲಿ ಕನ್ನಡಿಗರು ಜಾಸ್ತಿ ಇದಾರೆ. ಶಾಲೆಗಳಲ್ಲಿ, ನ್ಯಾಯಾಲಯಗಳಲ್ಲಿ ಮತ್ತು ಸರ್ಕಾರಿ ಕbsರಿಗಳಲ್ಲಿ ತೆಲುಗು ಇದೆ. ಇದು ಏನಬಂತಪ್ಪ ಅಂತ ಅವರಿಗೆ ಅನ್ಸಿ, ಅವರು ಜಿಲ್ಲೆಯ ಪಶ್ಚಿಮ ತಾಲೂಕುಗಳಲ್ಲಿ ಕನ್ನಡವೇ ಪ್ರಧಾನವಾಗಿ ಇರೋದರಿಂದ ಕನ್ನಡವೇ ಆಡಳಿತ ಭಾಷೆ ಮಾಡಬೇಕು ಅಂತ್ಹೇಳಿ ಗವರ್ನಮೆಂಟ್ ಆರ್ಡರ್ ಮಾಡಿದರು. ಅಲ್ಲಿಂದ ಪ್ರಾರಂಭವಾಗಿ ೧೯೨೦-೨೨ನೇ ಇಸವಿಗೆ ನಮ್ಮ ಜನಗಳು ಕಣ್ಣು ತೆರೆದರು. ಆಗ್ಲೇನೆ ಯುವಕರಿದ್ದವರು ಸ್ವತಃ ತೆಲುಗು ಕಲ್ತಿದ್ರು. ಕನ್ನಡ ಶಾಲೆ ತೆರೆಯೊ ಪ್ರವೃತ್ತಿ ಮೆಲ್ಲಕ ಬೆಳೆದಿತ್ತು. ಆಗ್ಗೆ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘ ಸ್ಥಾಪನೆ ಮಾಡೋಕೆ ಒಂದೇ ಒಂದು ಕಾರಣ ಅಂತ ಹೇಳಿದ್ರೆ, ಕನ್ನಡವನ್ನು ಭದ್ರಪಡಿಸ್ಬೇಕು ಅನ್ನೋದು. ಮೊಟ್ಟ ಮೊದಲನೇ ಕನ್ನಡ ಸ್ಕೂಲ್ ಬಳ್ಳಾರಿಯಲ್ಲಿ ಪ್ರೈವೇಟ್ ಆಗಿತ್ತು. ಈರದ ಸೋಗಮ್ಮ ಹೈಯರ್ ಎಲಿಮೆಂಟರಿ ಸ್ಕೂಲ್ ಅಂತ ಗಣೇಶ್‌ಗುಡಿ ಬೀದಿಯಲ್ಲಿ ಪ್ರಾರಂಭ ಮಾಡಿದ್ರು. ಕನ್ನಡ ಪತ್ರಿಕೆ ಪ್ರಾರಂಭ ಮಾಡಿದ್ರು. ಅವರ ಕನ್ನಡ ಉತ್ಕಟೇಚ್ಫೆ ಎಷ್ಟರಮಟ್ಟಿಗೆ ಇತ್ತು ಅಂತ ಹೇಳಿದ್ರೆ, ಕನ್ನಡವನ್ನು ತೆಲುಗು ಲಿಪಿಯಲ್ಲಿ ಮುದ್ರಣ ಮಾಡ್ತಿದ್ರು.. (ನಗು) ಇದನ್ನು ನಾಗೇಶ್ ಶಾಸ್ತ್ರಿಗಳು ಪ್ರಾರಂಭ ಮಾಡಿದ್ರು.

ಸಂ: ಚಾರಿತ್ರಿಕವಾಗಿ ಇಂಥ ವಿಚಿತ್ರ ಸನ್ನಿವೇಶ ನಿರ್ಮಾಣ ಆದದ್ದು ಹೇಗೆ?

ಕೋಚೆ: ಮಡ್ರಾಸ್‌ನಲ್ಲಿ ಕೂತು ಆಳುವವರಿಗೆ ಈ ತುದಿಯಲ್ಲಿ ಇರತಕ್ಕಂಥ ಬಳ್ಳಾರಿಯ ಸಮಸ್ಯೆ ಯಾರು ಕೇಳ್ತಾರೆ? ಆದರೆ ದಕ್ಷಿಣ ಕನ್ನಡದಲ್ಲಿ ಜನ ಬಹಳ ಪ್ರಬಲರಾಗಿದ್ರು. ಕನ್ನಡ ಇರೋದಾದ್ರೆ ದಕ್ಷಿಣ ಕನ್ನಡದಲ್ಲಿ ಅಂತ ಅವರ ಕಲ್ಪನೆ. ಆದರೆ ಬಳ್ಳಾರಿಗೆ ಅದಿsಕಾರಿಗಳನ್ನು ಕಳಿಸುವಾಗ ತೆಲುಗರನ್ನ ಕಳಿಸಿಬಿಡೋರು. ಆ ತೆಲುಗರು ಅದಿsಕಾರ ಹೇಗೆ ನಡೆಸ್ತಿದ್ರು ಅಂದರೆ ನಿಮಿಗೆ ಆಶ್ಚರ್ಯ ಆಗಬಹುದು. ನಮ್ಮ ತಂದೆ ’ಆಂಧ್ರಪತ್ರಿಕಾ’ ತರಿಸ್ತಾ ಇದ್ರು. ಅದರ ರ‍್ಯಾಪರ್ ಸೈತ ತೆಗೀತಿದ್ದಿಲ್ಲ.

ಸಂ: ಯಾಕೆ?

ಕೋಚೆ: ಓದಾಕ ಬರ‍್ತಿದ್ದಿಲ್ಲ ತೆಲುಗು. (ನಗು) ಆದರೂ ತರ‍್ಸೋರು. ಅಲ್ಲಿರೋ ಸಬ್‌ಇನ್ಸ್‌ಪೆಕ್ಟರೊ ಅಥವಾ ಪೋಸ್ಟ್ ಮಾಸ್ಟರೊ ಹೇಳಿರ‍್ತಾರೆ ’ಆಂಧ್ರಪತ್ರಿಕೆ’ ತರಿಸಿ ಅಂತ. ಹೋಗ್ಲಿ ಒಂದು ತಿಂಗಳಿಗೆ ೨ ರೂಪಾಯಿ ಏನು ದೊಡ್ಡ ಸುದ್ದಿ ಅಂತ ತರಿಸ್ತಿರಬೇಕು.

ಸಂ: ನಿತ್ಯದ ಬದುಕಿನಲ್ಲಿ ತೆಲುಗರು ಕನ್ನಡಿಗರ ನಡುವೆ ಈ ಭಾಷೆ ವಿಷಯದಲ್ಲಿ ವೈಷಮ್ಯ ಅಂತ ಇತ್ತಾ?

ಕೋಚೆ: ಇರಲ್ಲಿಲ್ಲ. ಬರ‍್ತಾಬರ‍್ತಾ ಏನಾಯ್ತು ಅಂದರೆ, ಯಾವಾಗ ಕನ್ನಡಿಗರು ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ೬೦೦ನೇ ವರ್ಷ ದಿನಾಚರಣೆ ಮಾಡಿದರೋ (೧೯೩೬) ಆವಾಗ ಆಂಧ್ರ ಮಹಾಸಭೆಯವರು ತಾವೂ ಮಾಡಬೇಕು ಅಂತ ಪ್ರಯತ್ನ ಪಟ್ಟರು. ಯಾಕಂತ ಹೇಳಿದ್ರೆ ಅದು ಒಂದು ಹಕ್ಕನ್ನು ಸ್ಥಾಪನೆ ಮಾಡ್ದಂಗೆ. ತೆಲುಗರಿಗೆ ವಿಜಯನಗರದ ಅರಸರ ಬಗ್ಗೆ ಮತ್ತು ವಿಜಯನಗರ ಸಾಮ್ರಾಜ್ಯದ ಬಗ್ಗೆ ಇರೋ ಅಬಿsಮಾನ ಕನ್ನಡಿಗರಿಗೆ ಇಲ್ಲ. ಕಾರಣ ಏನಂತ ಹೇಳಿದ್ರೆ, ಒಂದು - ನಮ್ಮ ಕನ್ನಡ ಕವಿಗಳು ಹರಿಹರ, ರಾಘವಾಂಕರು ರಾಜಾಶ್ರಯವನ್ನು ಸಂಪೂರ್ಣವಾಗಿ ತಿರಸ್ಕರಿಸಿದವರು. ರಾಜಾಶ್ರಯಕ್ಕೆ ಹೋಗೋದೇ ನಾಚಿಕೆಗೇಡು ಅಂತ ತಿಳ್ಕೊಂಡವರು. ಎರಡು- ಈ ವಿಜಯನಗರದ ಅರಸರು ಹೆಚ್ಚಾಗಿ ಆಂಧ್ರ ಕವಿಗಳಿಗೆ ಮನ್ನಣೆ ಕೊಟ್ರು. ಅವ್ರಿಗೆ ಈಗಲೂ ಕೂಡ ಅಷ್ಟದಿಗ್ಗಜರ ಕಾವ್ಯ ಉತ್ಕೃಷ್ಟ ಕಾವ್ಯ. ಆವಾಗ ನಮ್ಮವರು ಎಚ್ಚೆತ್ತರು. ಅಲ್ಲಿಂದ ಸಂಘರ್ಷ ಶುರುವಾಯ್ತು. ಈ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ಅವರು ಕಾಲೂರಬೇಕು ಅಂತ ಪ್ರಯತ್ನ ಮಾಡೋದು, ಅಲ್ಲಿ ಕಾಲು ಇಡಗೊಡಸಬಾರು ಅಂತ ನಾವು ಪ್ರಯತ್ನ ಮಾಡೋದು.

ಸಂ: ಬಳ್ಳಾರಿ ಜಿಲ್ಲೆಯವರಿಗೆ ಕರ್ನಾಟಕ ಏಕೀಕರಣ ಮತ್ತು ಸ್ವಾತಂತ್ರ್ಯ ಹೋರಾಟ ಎರಡೂ ಏಕಕಾಲಕ್ಕೆ ನಡೆಸಬೇಕಾಯಿತು.

ಕೋಚೆ: ಹೌದು. ಮೊನ್ನೆ ಸ್ವಾತಂತ್ರ್ಯ ಸುವರ್ಣ ಕರ್ನಾಟಕ ಚಳುವಳಿಯಲ್ಲಿ ಭಾಗವಹಿಸಿ ದೋರಿಗೆ ಪ್ರಶಸ್ತಿ ಕೊಟ್ರಲ್ಲ, ಅದು ಯಾರ ತಲೀಲೆ ಬಂತೋ ಗೊತ್ತಿಲ್ಲ, ಆದರೆ ಲೇಟಾಗಿ ಬಂತು. ಕರ್ನಾಟಕಕ್ಕೆ ಬಂದ ಏಕೀಕರಣ ಭಾರತಕ್ಕೆ ಸ್ವಾತಂತ್ರ್ಯ ಬಂದದ್ದಷ್ಟೇ ಮಹತ್ವದ್ದು ನಮಿಗೆ. ಸಾಂಸ್ಕೃತಿಕ ದೃಷ್ಟಿಯಿಂದ ನಾವು ಗುಲಾಮ ರಾಗಿದ್ವಿ. ಆ ಕಡೆ ಮಹಾರಾಷ್ಟ್ರದವ್ರು ಮುಂಬೈ ಕರ್ನಾಟಕದಲ್ಲಿ ಆದಿsಪತ್ಯ ನಡೆಸಿದ್ರು. ಈ ಕಡೆಯಿಂದ ಹೈದರಾಬಾದ್ ಕರ್ನಾಟಕದಲ್ಲಿ ನಿಜಾಮನ ಸಂತತಿಯವರು ಆದಿsಪತ್ಯ ನಡೆಸಿದ್ರು. ಮಡ್ರಾಸ್‌ನಲ್ಲಿ ಇರ‍್ತಕ್ಕಂಥವರು ನಾವು ತೆಲುಗು ರಾಜಪತ್ಯದಲ್ಲಿ ಅವರ ಸಾಂಸ್ಕೃತಿಕ ರಾಜಕಾರಣಕ್ಕೆ ದಾಸರಾಗಿದ್ವಿ.

ಸಂದರ್ಶಕ: ಮಡ್ರಾಸು, ತಮಿಳುನಾಡಿನ ಕೇಂದ್ರ. ಅಲ್ಲಿಂದ ತೆಲುಗು ಹೇಗೆ ಹೇರಿಕೆ ಆಗ್ತಿತ್ತು?

ಕೋಚೆ: ಮದ್ರಾಸಿನಲ್ಲಿ ತೆಲುಗಿನವ್ರಿಗೆ ಸಮಾನ ಅದಿsಕಾರ ಇತ್ತು. ನೋಡಿ ಅನಂತಪುರ ಬಾರ್ಡರಿಗೆ ೧೪ ಮೈಲು ಚೆಳ್ಳಗುರ್ಕಿ ಲಾಸ್ಟ್ ಪೋಸ್ಟ್. ಚಳ್ಳಗುರ್ಕಿ ದಾಟಿದ ಕೂಡ್ಲೆ ಬಳ್ಳಾರಿ. ಈ ರಾಯಲಸೀಮಾ ಅಂತ ಏನು ಕರೀತಾರಲ್ಲ, ಬಳ್ಳಾರಿ, ಅನಂತಪುರ, ಕಡಪ, ಕರ್ನೂಲು, ಚಿತ್ತೂರು, ಈ ೫ ಜಿಲ್ಲೆಗಳಿಗೆ ಬಳ್ಳಾರಿ ಡಿವಿಜನಲ್ ಹೆಡ್‌ಕ್ವಾರ್ಟರ್ಸ್. ಬಳ್ಳಾರಿ ಸರ್ಕ್ಯೂಟ್ ಹೌಸ್ ಇದೆಯಲ್ಲ ಅದು ಡಿವಿಜನ್ ಹೆಡ್‌ಕ್ವಾರ್ಟರ್ಸ್ ಆಗಿತ್ತು.

ಸಂದರ್ಶಕ: ನೀವು ಕಂಡಂತೆ ಏಕೀಕರಣ ಚಳುವಳಿಯ ದೊಡ್ಡ ಹೀರೊಗಳು ಯಾರು ಈ ಭಾಗದಲ್ಲಿ?

ಕೋಚೆ: ನಮ್ಮದು ಎರಡನೇ ತಲೆಮಾರು ಅಂತ ಇಟ್ಕೊಳ್ಳಿ. ಅದಕ್ಕಿಂತ ಮೊದಲೇ ಚಳುವಳಿಗೆ ಒಂದು ಸರಿಯಾದ ತಾತ್ವಿಕ ಹಿನ್ನೆಲೆಯನ್ನು ಕೊಟ್ಟಿದ್ದು ಅಂತ ಹೇಳಿದ್ರೆ, ಬಳ್ಳಾರಿಯಲ್ಲಿ ’ನವ ಸಂದೇಶ’ ಅಂತ ಪತ್ರಿಕೆ. ಆಮೇಲೆ ಟಿ.ಎಚ್.ಎಂ. ಸದಾಶಿವಯ್ಯನವರು, ಟಿ.ಎಚ್.ಎಂ. ಚಂದ್ರಶೇಖರ ಶಾಸ್ತ್ರಿಗಳು ಅಂತ, ಇವರು ಅದಕ್ಕೆ ಒಂದು ಬುದ್ಧಿಪೂರ್ವಕ ಬುನಾದಿಯನ್ನು ಹಾಕಿದರು. ಅದರ ಜೊತೆಗೆ ಬಳ್ಳಾರಿ ವರ್ತಕರಿಗೆ ಏನಾಗಿತ್ತು ಅಂತ ಹೇಳಿದ್ರೆ ಅನೇಕ ಕಾರಣಗಳಿಂದ ಸಂಪರ್ಕ ಇದ್ದದ್ದು ಆ ಕಡೆಗೆ. ಉರವಕೊಂಡ ಮಠ ಅಲ್ಲಿತ್ತು. ಬಳ್ಳಾರಿ ಮತ್ತು ಸಿರುಗುಪ್ಪ ಅಲ್ಲೆಲ್ಲಾ ಉರುವಕೊಂಡ ಸ್ವಾಮಿಗಳಿಗೆ ಭಕ್ತರು. ಅವರಿಗೆ ಎಲ್ಲ ವ್ಯವಹಾರಗಳು ಕನ್ನಡದಲ್ಲಿ ನಡೀಬೇಕು. ಅವರಿಗೆ ಬಸವ ಪುರಾಣವಾಗಲಿ ಅಥವಾ ಪ್ರಭುಲಿಂಗ ಲೀಲೆಯಾಗಲಿ ಅಥವಾ ನಾರಣಪ್ಪನ ಮಹಾಭಾರತವಾಗಲಿ ಕನ್ನಡದಲ್ಲೇ ಆಗಬೇಕು.

ಸಂ: ಕರ್ನಾಟಕ ಏಕೀಕರಣಕ್ಕೆ ಅಥವಾ ಕನ್ನಡದ ಭಾಷೆಯನ್ನು ಸಾಂಸ್ಕೃತಿಕ ಸ್ಥಾನದಲ್ಲಿ ಸ್ಥಾಪನೆ ಮಾಡೋದಕ್ಕೆ, ಈ ಭಾಗದ ವರ್ತಕರು ಭಾಗವಹಿಸಿದರು. ಇದಕ್ಕೆ ಆರ್ಥಿಕವಾದ ಕಾರಣ ಏನಾದರೂ ಇತ್ತಾ?

ಕೋಚೆ: ಇಲ್ಲಿಲ್ಲ. ತಮ್ಮ ವ್ಯಾಪಾರಕ್ಕೆ ನಷ್ಟವಾಗ್ತದೆ ಅಂತಲ್ಲ. ಲಾಭ ನಷ್ಟಗಳ ಪ್ರಶ್ನೆಯೇ ಇಲ್ಲ. ಆರ್ಥಿಕ ಹಿನ್ನೆಲೆಯೇ ಇಲ್ಲ. ಆಂಧ್ರಕ್ಕೇನೇ ನಮ್ದು ಹೆಚ್ಚಿನ ವ್ಯಾಪಾರ. ಕನ್ನಡ ಸಾಂಸ್ಕೃತಿಕ, ಧಾರ್ಮಿಕ ಭಾಷೆಯಾದ ಕಾರಣ ಬಿಟ್ರೆ ಬೇರೆ ಇನ್ನೇನಿಲ್ಲ.

ಸಂ: ಚಳುವಳಿಯಲ್ಲಿ ಇನ್ಯಾರ‍್ಯಾರು ಇದ್ದರು?

ಕೋಚೆ: ವರ್ತಕ ವರ್ಗದವರು ಇದ್ರು. ಮಹಾಬಲೇಶ್ವರಪ್ಪನವರು ದೊಡ್ಡ ಕೆಲಸ ಮಾಡಿದ್ರು. ಅವರು ೨೫ ವರ್ಷ ತುಂಬಿದ ಕೂಡ್ಲೇನೆ ಡಿಸ್ಟ್ರಿಕ್ಟ್ ಬೋರ್ಡ್ ಪ್ರೆಸಿಡೆಂಟ್ ಆದ್ರು. ಈ ಮಧ್ಯದ ಕಾಲದಲ್ಲಿ ಕನ್ನಡ ಅಧ್ಯಾಪಕ ವರ್ಗದವರು ತುಂಬ ಕೆಲ್ಸ ಮಾಡಿದ್ರು. ವಕೀಲರು ಕೆಲ್ಸ ಮಾಡಿದ್ರು.

ಸಂ: ನಿಮ್ಮ ಚಳುವಳಿಯ ಅನುಭವ ಶೇರ್ ಮಾಡಿ.

ಕೋಚೆ: ನಮಿಗೆಲ್ಲ ಕನ್ನಡ ಅಬಿsಮಾನ ಹುಟ್ಟುತಕ್ಕಂಥ ಕೆಲಸವನ್ನ ಈ ಕನ್ನಡ ನಾಡಹಬ್ಬದವರು ಮಾಡಿದ್ರು. ಅ.ನ. ಕೃಷ್ಣರಾಯರು, ರಂ.ಶ್ರೀ ಮುಗುಳಿ ಯವರು, ಬೇಂದ್ರೆಯವರು, ಗೋಕಾಕರು, ಇಂಥ ಅಗ್ರಗಣ್ಯ ಸಾಹಿತಿಗಳು ಬರೋರು. ೭ ದಿನದ ನಾಡಹಬ್ಬ. ನಾವು ಮಾಡಲಿಲ್ಲ ಅಂದ್ರೆ ಜನ ಕೇಳ್ತಿದ್ದಿಲ್ಲ. ಏನಪ್ಪ ಯಾಕ ಮಾಡದಿಲ್ಲ ಈ ಸಾರಿ ಅಂತ ಕೇಳೋರು. ಯಾರನ್ನ ಕರಸ್ತೀರಿ ಅಂತ ಕೇಳೋರು.

ಸಂ: ಏಕೀಕರಣ ಚಳುವಳಿಯಲ್ಲಿ ಹುತಾತ್ಮರಾದ ಏಕೈಕ ವ್ಯಕ್ತಿ ಬಳ್ಳಾರಿಯ ರಂಜಾನ್ ಸಾಬ್. ಅವರನ್ನ ನೀವು ನೋಡಿದ್ದಿರಾ?.

ಕೋಚೆ: ದಿನಾ ಬರ‍್ತಿದ್ನಲ್ಲ ನಮ್ಮ ಆಪಿsಸಿಗೆ. ಆತ ಪಿಂಜಾರೋನು. ಪಿಂಜಾರ ಓಣಿ ಅಂತಲೇ ಇದೆ ಬಳ್ಳಾರೀಲಿ. ಗಡಿಗಿ ಪ್ಯಾಲೆಸ್ ಅಂತ ಅಲ್ಲಂ ವೀರಭದ್ರಪ್ಪನವರ ಮನೆಯ ಉತ್ತರಕ್ಕೆ. ಪಿಂಜಾರರು ಹೈದರಾಲಿ ಕಾಲದಲ್ಲಿ ಲಿಂಗಾಯತರು ಕನ್ವರ್ಟ್ ಆದ ಜನ. ಅವರ ವೃತ್ತಿ ಹತ್ತಿ ಹಿಂಜೋದು. ಆದರೆ ನೋಡ್ರಿ, ಮತಾಂತರ ಹೊಂದಿದ್ರೂ ಕೂಡ ಅವರು ಭಾಷಾಂತರ ಆಗಿಲ್ಲ. ಈಗಲೂ ಮನೇಲಿ ಕನ್ನಡ ಮಾತಾಡ್ತಾರೆ. ರಂಜಾನ್ ಮನೇಲಿ ಕನ್ನಡ ಮಾತೇನೇ.

ಸಂ: ರಂಜಾನ್ ಸಾಬರು ಹುತಾತ್ಮರಾಗಿದ್ದು ಹೇಗೆ?

ಕೋಚೆ: ಆತ ಕನ್ನಡ ಚಳುವಳಿಯ ನಿಷಾವಿವಂತ ಕಾರ್ಯಕರ್ತನಿದ್ದ. ಪಾರ್ಲಿಮೆಂಟಿಗೆ ಒಂದು ಲಕ್ಷ ಸಹಿ ಮಾಡಿ ಮನವಿ ಅರ್ಪಿಸಬೇಕು ಅಂತ ಆಯ್ತು. ನೋಡಪ್ಪ ನಿಮ್ಮ ಪಿಂಜಾರ ಓಣಿ ಸಹಿ ಬೇಕಂದ್ರೆ ೨ ದಿನದಲ್ಲಿ ಸಾವಿರ ಸಹಿ ಮಾಡಿ ಸ್ಕೊಂಡು ಬರ‍್ತಾ ಇದ್ದ. ಎಲ್ಲಾದ್ರೂ ಒಂದು ಕೆಲ್ಸ ಆಗ್ಬೇಕು ಅಂತ ಹೇಳಿದ್ರೆ ಅಲ್ಲೆಲ್ಲ ಹೋಗಿ ಬರ‍್ತಿದ್ದ. ಆತ ಗರಡಿ ಆಳು. ಗರಡಿ ಮನೆ ನಡಿಸ್ತಿದ್ದ. ನಮ್ಮ ಅಳವಂಡಿ ಶಿವಮೂರ್ತಿ ಸ್ವಾಮಿಗಳು ಕೊಪ್ಪಳದ ಎಂಪಿ. ಆಗಿದ್ರು. ಕೊಪ್ಪಳ ಪಾರ್ಲಿಮೆಂಟರಿ ಕ್ಷೇತ್ರದಲ್ಲಿ ನಮ್ಮ ಹಡಗಲಿ, ಹೊಸಪೇಟೆ ಕೆಲವು ಭಾಗ ಸೇರಿತ್ತು. ಕಾಂಗ್ರೆಸ್ ಎಂಪಿ. ಸರ್ಕಾರದ ವಿರುದ್ಧ ಏನೂ ಮಾಡುವಂತಿರ‍್ಲಿಲ್ಲ. ಶಿಸ್ತುಭಂಗವಾಗ್ತದೆ ಅಂತ ಹೆದರ‍್ತಿದ್ರು. ನಮಿಗೆ ಸ್ವತಂತ್ರವಾಗಿರೋರು ಒಬ್ಬರು ಬೇಕಿತ್ತು. ಯಾರಾದ್ರೂ ಒಬ್ರು ಬೇಕಲ್ಲ ಕಾಂಗ್ರೆಸ್ ಮುಖಂಡರು. ಯಾರೂ ಬರಂಗಿಲ್ಲ. ಬೇರೆ ಪಕ್ಷಗಳು ಪ್ರಬಲವಾಗಿ ಇರಲಿಲ್ಲ. ಮುಂಬೈ ಅಸೆಂಬ್ಲಿಗೆ ಒಬ್ಬರು ಹೋಗಿದ್ರು ಕಾಂಗ್ರೆಸ್ ಪಕ್ಷದಿಂದಾನೆ. ಅವರು ಮುಂದಾಳತ್ವ ವಹಿಸಿದ್ರು. ೧೯೪೪ರಲ್ಲಿ ನಾನು ಲಾ ಕಾಲೇಜಿನಲ್ಲಿ ಓದುವಾಗ ಏಕೀಕರಣ ಮಹಾಸಮಿತಿಯಲ್ಲಿ ನನ್ನನ್ನು ನಾಮಕರಣ ಮಾಡಿದರು. ಬಳ್ಳಾರಿ ಜಿಲ್ಲಾ ಪ್ರತಿನಿದಿsಯಾಗಿ ಬಳ್ಳಾರಿ ಸಮಸ್ಯೆ ಬಂದಾಗ ನಾನಲ್ಲಿ ಸಭೆಗಳಿಗೆ ಹೋಗ್ತಾ ಇದ್ದೆ. ಆಗ ಈ ಜಿಲ್ಲಾ ಮಟ್ಟದಲ್ಲಿ ಈ ಮುಖಂಡರಿದ್ದರೆ ರಾಜ್ಯದ ಮುಖಂಡತ್ವ ದಲ್ಲಿ ದೊಡ್ಡಮೇಟಿ ಅಂದಾನಪ್ಪ, ಹಳ್ಳಿಕೇರಿ ಗುದ್ಲೆಪ್ಪ ಅವರು ಮೊದಲಿದ್ದರು. ತರುವಾಯ ನಿಜಲಿಂಗಪ್ಪನವರು ಬಂದರು. ಆಂಧ್ರದವರು ಬಳ್ಳಾರಿ ಮೈಸೂರು ರಾಜ್ಯದಲ್ಲಿ ವಿಲೀನ ಆಗಬಾರದು ಅಂತ ವಿರೋಧ ಮಾಡ್ತಿದ್ದರು. ಮಿಶ್ರಾ ಕಮಿಶನ್‌ನವರು ಸರಿಯಾದ ತೀರ್ಮಾನ ಕೊಟ್ಟಿದ್ದರು.- ಬಳ್ಳಾರಿ ಜಿಲ್ಲೆಯ ೭ ತಾಲೂಕುಗಳು ಮೈಸೂರಿಗೆ ಹೋಗ್ಬೇಕು. ೩ ತಾಲೂಕುಗಳು ಆಂಧ್ರಕ್ಕೆ ಹೋಗಬೇಕು ಅಂತ. ಇದು ಆಗಬಾರದು ಅಂತ್ಹೇಳಿ ತೆಲುಗರಿಗೆ ಬಾಳ ಸಂಕಟ ಇತ್ತು. ಅಷ್ಟೊತ್ತಿಗೆ ತೆಲುಗು ಕನ್ನಡದ ಘರ್ಷಣೆ ತುಂಬಾ ಉದ್ವಿಗ್ನತೆಯಿಂದ ನಡೀತಾ ಇತ್ತು. ಇದು ಎಷ್ಟು ವಿಕೋಪಕ್ಕೆ ಹೋಗಿತ್ತು ಅಂತ್ಹೇಳಿದ್ರೆ, ದಶಮಿ ದಿನ ಬನ್ನಿ ಮುಡಿಯೋಕೆ ಅಂತ ಹೋಗ್ತೀವಲ್ಲ, ಬಳ್ಳಾರಿ ಜನರೆಲ್ಲ ಬನ್ನಿ ಮುಡೀಲಿಕ್ಕೆ ಹೋಗ್ತಾ ಇದ್ದದ್ದು ಪೂರ್ವದ ಕಡಿಗೆ. ಈ ಘರ್ಷಣೆ ಆದಮೇಲೆ ತೆಲುಗರು ಅಲ್ಲಿಗೆ ಬರೋದೆ ಬಿಟ್ಬಿಟ್ರು. ತಮ್ಮದೇ ಒಂದು ಬನ್ನಿಮರ ಮಾಡ್ಕೊಂಡ್ರು.

ಸಂ: ತೆಲುಗರು ಅಂದರೆ ಯಾವ ಸಮುದಾಯ?

ಕೋಚೆ: ಕಮ್ಯುನಿಟಿ ವೈಜ್ ಹೇಳಬೇಕಂದರೆ ಕಮ್ಮಾಗಳು.

ಸಂ: ಬಳ್ಳಾರಿಯಲ್ಲಿ ಮುಸ್ಲಿಮರು ಕನ್ನಡಿಗರ ಪರವಾಗಿದ್ರಾ?

ಕೋಚೆ: ಅವರು ನಮ್ಮ ಪರವಾಗಿ ಇಲ್ಲದೆ ಹೋಗಿದ್ರೆ ನಮಿಗೆ ಎಲ್ಲಿ ಬರ‍್ತಿತ್ತು ಬಳ್ಳಾರಿ? ಬಳ್ಳಾರಿಯಲ್ಲಿ. ೩೦% ಕನ್ನಡಿಗರಿದ್ವಿ. ೩೦% ತೆಲುಗರು ಇನ್ನು ೩೦% ಉರ್ದು ಇತ್ತು. ಈ ಕೊನೇ ೩೦ರಲ್ಲಿ ೫ ಪರ್ಸೆಂಟು ಪಿಂಜಾರರಿದ್ದರು.

ಸಂ: ರಂಜಾನ್ ಸಾಬರು ಹುತಾತ್ಮರಾಗಿದ್ದು ಹೇಗೆ?

ಕೋಚೆ: ಅಕ್ಟೋಬರ್ ೧ನೇ ತಾರೀಕು ಇನ್ಯಾಗುರೇಶನ್. ೨ನೇ ತಾರೀಕು ಉತ್ಸವ. ಉತ್ಸವದಲ್ಲಿ ಕೆಂಗಲ್ ಹನುಮಂತಯ್ಯನವರನ್ನ ಸಾರೋಟಿನಲ್ಲಿ ಮೆರವಣಿಗೆ ತರಬೇಕು ಅಂತಾಗಿತ್ತು. ವಿಜಯ ಮಹಲ್ ಅಂತಿತ್ತು ಆಗ. ಈಗ ಡೆಮಾಲಿಶ್ ಮಾಡಿದಾರೆ ಅದನ್ನ. ಆ ವಿಜಯ ಮಹಲ್‌ನಿಂದ ತೇರುಬೀದಿಗೆ ಹೋಗಿ ಬರಬೇಕು. ಮುಖಂಡರೆಲ್ಲ ಆಸಕ್ತಿ ವಹಿಸಿದ್ರು. ದೊಡ್ಡ ಪೆಂಡಾಲ್ ಹಾಕಿದ್ವಿ ಬಿಡಿಎಎ ಮೈದಾನದಲ್ಲಿ. ಅದನ್ನ ಸುಟ್ಟುಹಾಕಿ ಉತ್ಸವಕ್ಕೆ ಭಂಗ ತರಬೇಕು ಅಂತ್ಹೇಳಿ ತೆಲುಗರು ಪಿsತೂರಿ ಮಾಡಿದಾರೆ ಅಂತ ನಮ್ಮ ಗಮನಕ್ಕೆ ಬಂತು. ಅದನ್ನು ರಕ್ಷಣೆ ಮಾಡಬೇಕಾದ್ರೆ ನಮ್ಮ ರಂಜಾನ್‌ಗೇ ಹೇಳಬೇಕಾಯ್ತು. ಆತ ಪೈಲ್ವಾನಿದ್ನಲ್ಲ. ’ಅದರ‍್ಸುದ್ದಿ ಬಿಡ್ರಿ ನಾನೆಲ್ಲ ನೋಡ್ಕೊಂತೀನಿ’ ಅಂದ. ೫ ಜನ ಪೈಲ್ವಾನ್ರಿಗೆ ಕರ‍್ಕಂಡ್ಹೋಗಿ ರಾತ್ರಿ ಹೊತ್ತು ಬರೀಮೈಲಿ ಮಲಗಿದ್ದ. ಬೆಳಗಿನ ಜಾವದಾಗ ಒಂದು ಎತ್ತರದ ಗೋಡೆ ಮೇಲಿಂದ ಬಂದು ಆತನ ಮೇಲೆ ಆಸಿಡ್ ಹಾಕಿದ್ರು. ದೊಡ್ಡಾಸ್ಪತ್ರೆಗೆ ತಗಂಡು ಹೋದಿವಿ. ಆದರೂ ರಂಜಾನ್ ಉಳೀಲಿಲ್ಲ. ಹೋಗಿಬಿಟ್ಟ.

ಸಂ: ಏಕೀಕರಣದ ವಿಷಯ ಬಂದಾಗ ತೆಲುಗರಾದ ಬಳ್ಳಾರಿ ರಾಘವ ಅವರ ಪ್ರತಿಕ್ರಿಯೆ ಹೇಗಿತ್ತು? ಜನ ಅವರನ್ನ ಹೇಗೆ ನಡೆಸ್ಕೊಂಡರು?

ಕೋಚೆ: ರಾಘವರಿಗೆ ಭಾಷೆ ಇರಲಿಲ್ಲ. ಜಾತೀ ಇರ‍್ಲಿಲ್ಲ. ಹೇಳ್ಬೇಕಂದ್ರೆ ಅವರು ತೆಲುಗು, ಬ್ರಾಹ್ಮಣ, ಶ್ರೀವೈಷ್ಣವರು. ನಾನು ಹೈಸ್ಕೂಲಾಗಿದ್ದಾಗ ಅವರು ಕೋರ್ಟಿಗೆ ಹೋಗದನ್ನ ನೋಡಿದ್ದೆ. ಕೋರ್ಟಿನಲ್ಲಿ ವಾದ ಮಾಡದನ್ನ ನೋಡಿದ್ದೆ. ಹಿ ವಾಸ್ ಆನ್ ಎಮಿನೆಂಟ್ ಲಾಯರ್ ಆಫ್ ಹೋಲ್ ರಾಯಲಸೀಮಾ. ಅವರು ತಾಡಪತ್ರಿಯಿಂದ ಬಂದವರು. ನಮಿಗೆ ಟಿ. ರಾಘವ ಅಂದ್ರೆ ತಾಡಪತ್ರಿ ರಾಘವ. ಹೊರಗಿನವರಿಗೆ ಬಳ್ಳಾರಿ ರಾಘವ. ನಮ್ಮ ದೊಡ್ಡನಗೌಡ್ರಿಗೆ ಮಹಾಬಲೇಶ್ವರಪ್ಪನವರಿಗೆ ಭಾಳ ಬೇಕಾದವರು ಅವರು. ಅವರು ಬಂದು ನಮ್ಮಲ್ಲಿ ವಾದ ಮಾಡಿದ್ರು. ೧೯೪೨ನೇ ಇಸವಿ ಸೆಪ್ಟೆಂಬರ್ ತಿಂಗಳಲ್ಲಿ ನಮ್ಮನ್ನು ಹಿಡಿದ್ಹಾಕಿದ್ರು ಅನಂತರಪುರದಲ್ಲಿ. ನಮ್ಮ ಮೇಲೆ ರಾಜದ್ರೋಹದ ಕೇಸು ಹಾಕಿದ್ದರು. ಅವರೇ ಬಂದು ನಮ್ಮನ್ನ ಡಿಫೆಂಡ್ ಮಾಡಿದರು. ಅವರ ಮೇಲೆ ನಾನು ’ನಿಶ್ಯಬ್ದ ಸಂಗೀತ’ ಅಂತ ಕಥೆ ಬರ‍್ದಿದೀನಿ. ಆ ಕಥೆಯಲ್ಲಿ ಅವರದೇ ಕ್ಯಾರೆಕ್ಟರ್. ಅವರು ಯಾವಾಗ್ಲೂ ಬಂದು ತಂಬೂರಿ ಹಿಡ್ಕೊಂಡು ಇರ‍್ತಿದ್ರು. ಪ್ರತಿದಿನ ಬೆಳಿಗ್ಗೆ ಶಿವಧ್ಯಾನ ಮಾಡ್ತಿದ್ರು. ತಂಬೂರಿಯಿಂದಾನೇ ತತ್ವಪದಗಳನ್ನ ಹೇಳ್ಕೊಂಡು ಇರೋರು. ಅಲ್ರಿ ಆಚಾರ್ಯೆ, ನೀವು ನೋಡಿದ್ರೆ ಶ್ರೀವೈಷ್ಣವರು. ಶಿವಧ್ಯಾನ ಮಾಡ್ತೀರಿ ಅಂತಿದ್ದೆ. ಯಾರೋ ಒಬ್ಬ ದಾಸಯ್ಯ ಬಂದಿದ್ನಂತೆ ತಂಬೂರಿ ಹೊತ್ಕೊಂಡು. ಇವರದೂ ತಂಬೂರಿ ಇತ್ತಲ್ಲ. ಇವರು ಮನ್ಯಾಗೆ ಜಾಗ ಕೊಟ್ಟು ಉಳಿಸಿಕೊಂಡಿದ್ರು ಸ್ವಲ್ಪ ದಿನ.

ಸಂದರ್ಶಕ: ಕಲೆ ಮನುಷ್ಯರನ್ನ ಸೆಕ್ಯುಲರ್ ಮಾಡುವ ಸಂಗತಿಗಳಲ್ಲಿ ಮುಖ್ಯವಾದುದು ಅನಿಸುತ್ತೆ.

ಕೋಚೆ: ಕಲೆ ಒಂದೇ ಅಲ್ಲ. ಅವರು ಜಾತಿಯನ್ನು ದ್ವೇಷ ಮಾಡುವವನು ವೈಷ್ಣವನಲ್ಲ ಅಂತ ಹೇಳ್ತಾ ಇದ್ರು.

ಸಂ: ಜೋಳದ ರಾಶಿಯವರ ಬಗ್ಗೆ ಹೇಳಿ ಸಾರ್. ಅಷ್ಟು ದೊಡ್ಡ ಭೂಮಾಲೀಕ ರಾದರೂ, ಕಲೆಯನ್ನು ಇಟ್ಕೊಂಡು ಅವರು ಊರೂರು ತಿರುಗಿದರು ಅನ್ನೋದು ವಿಸ್ಮಯ ತರಿಸುತ್ತೆ.

ಕೋಚೆ: ಗಮಕದಲ್ಲಿ ಅವರಂಥವರು ಇನ್ಯಾರಿಲ್ಲ. ಅದ್ಭುತವಾದ ಗಮಕಿ ಅವರು. ಸ್ವತಃ ಕಾವ್ಯಾಭ್ಯಾಸ ಮಾಡಿದ್ರು. ಕಾವ್ಯರಚನೆ ಮಾಡಿದ್ರು. ನಟರಾಗಿದ್ರು. ಅಬಿsನಯ ಗೊತ್ತಿತ್ತು. ಮತ್ತೆ ’ಹರಿಶ್ಚಂದ್ರ ಕಾವ್ಯ’ ಆಗ್ಲಿ ’ರಾಮಾಯಣ ದರ್ಶನಂ’ ಆಗ್ಲಿ ಓದಬೇಕಾದ್ರೆ ಅವರಿವರಿಗೆ ಆಗೋ ಮಾತಲ್ಲ ಅದು. ಕುವೆಂಪು ಅವರು ಇವರ ಗಮಕವನ್ನ ಇಷ್ಟಪಟ್ಟಿದ್ರು. ಮೈಸೂರು ಸಾಹಿತ್ಯ ಸಮ್ಮೇಳನಕ್ಕೆ ದೊಡ್ಡನ ಗೌಡರಿಗೆ ವಾಚನಕ್ಕೆ ಕರ‍್ಕೊಂಡು ಹೋಗಿದ್ದೆ. ಕುವೆಂಪು ಸ್ವಾಗತ ಸಮಿತಿ ಅಧ್ಯಕ್ಷರು. ಕಾರಂತರು ಸಮ್ಮೇಳನಾಧ್ಯಕ್ಷರು. ಗೌಡರ ವಾಚನ ಮುಗದಮ್ಯಾಲೆ ಕೆಲ ಹುಡುಗ್ರು ಆಡಿದ ನಾಟಕ ಬರೋದಿತ್ತು. ಆದ್ದರಿಂದಲೊ ಗಮಕ ಅರ್ಥ ಆಗ್ಲಿಲ್ಲ ಅಂತಲೋ ಗಲಾಟೆ ಮಾಡಿದ್ರು. ಗೌಡರಿಗೆ ಸಿಟ್ಟು ಬಂತು. ಪುಸ್ತಕ ಮುಚ್ಚಿದ್ರು. ’ಥೂ ಈ ಅರಸಿಕರ ಮುಂದೆ ನಾನು ಹಾಡಲ್ಲ’ ಅಂತ ಎದ್ದು ಬಂದ್ಬಿಟ್ರು. ನಾನು ಕರ‍್ಕಂಬಂದಿದೀನಿ. ಪುಟ್ಟಪ್ಪನವರು ಅಷ್ಟೊಂದು ಉಪಚಾರ ಮಾಡಿದಾರೆ. ಸಂಕೋಚದಿಂದ ’ಗೌಡ್ರೆ ಅನ್ಯಾಯ ಆಯ್ತು’ ಅಂದೆ. ’ಏ ಬಿಡಪ್ಪ ನೀನೇನ್ಮಾಡ್ತಿ ಆ ಮುಠ್ಠಾಳ್ರಿಗೆ’ ಅಂದ್ರು. ’ಪುಟ್ಟಪ್ಪನವರು ಕೇಳ್ಬೇಕು ಅಂತ ಆಸೆ ಪಟ್ಟಿದಾರೆ’ ಅಂದೆ. ’ಹಾಡೋನಂತೆ ಬಿಡು ಅದಕ್ಯಾಕಿಷ್ಟು ಹಿಂಜರಿಕೆ. ನೋಡು, ಏನಾರ ಮಾಡು, ಆ ಗುಂಪು ಬ್ಯಾಡಪ್ಪ’ ಅಂದ್ರು. ಕುವೆಂಪು ಮುಂದೆ ಹೇಳ್ದೆ. ’ನಮ್ಮ ಮನೆಯಲ್ಲಿ ಏರ್ಪಾಡು ಮಾಡೋಣ’ ಅಂದ್ರು. ಅವರ ಮನೆಯಲ್ಲಿ ೭-೮ ಜನ ಇದ್ವಿ. ಒಂದು ಗಂಟೆ ಹೊತ್ತು ಹಾಡಿದರು. ಓಹ್ ಮಾಸ್ಟರ್ ಪೀಸ್.! ಇದು ಕೇಳಿದ ಮೇಲೆ ಕುವೆಂಪು, ’ರಾಮಾಯಣ ದರ್ಶನಂನ ಗಮಕಕ್ಕೆ ಅಳವಡಿಸಬಹುದ ಅಂತ ದಿಟ ಆಯ್ತು, ಬಹಳ ದೊಡ್ಡ ಕೆಲಸ ಮಾಡಿದ್ರಿ ನೀವು’ ಅಂದ್ರು. ಆಮೇಲೆ ಬಳ್ಳಾರಿಗೆ ಬಂದ್ರು ಕುವೆಂಪು. ಅಲ್ಲಿ ಅವ್ರಿಗೆ ಸನ್ಮಾನ ಸಮಾರಂಭ ಏರ್ಪಡಿಸಿ ಬಿನ್ನವತ್ತಳೆ ಕೊಟ್ಟೆವು. ಅವತ್ತೂ ದೊಡ್ಡನಗೌಡ್ರು ಹಾಡಿದ್ರು.
ಸಂ: ಬಳ್ಳಾರಿ ಜಿಲ್ಲೆಯ ಮತ್ತೊಂದು ಮುಖ್ಯ ಹೋರಾಟ ಅಂದರೆ, ಸಂಡೂರು ಭೂ ಹೋರಾಟ. ಅದರಲ್ಲಿ ನಿಮ್ಮ ಪಾತ್ರವೇನು?

ಕೋಚೆ: ಇಲ್ಲ ಇಲ್ಲ ಅದ್ರಲ್ಲಿ ನನ್ನ ಪಾತ್ರ ಏನೂ ಇಲ್ಲ, ಎಲಿಗಾರ ತಿಮ್ಮಪ್ಪ ಅಂತ ಇದ್ದರು. ಅವರು ಅಲ್ಲಿ ಭಾಳ ಕೆಲಸ ಮಾಡಿದರು. ಬಳ್ಳಾರಿಯ ಯಜಮಾನ್ ಶಾಂತರುದ್ರಪ್ಪನವರು ಕೆಲಸ ಮಾಡಿದರು.

ಸಂ: ಸ್ವಾತಂತ್ರ್ಯ ಚಳುವಳಿಯಲ್ಲಿ?

ಕೋಚೆ: ಸ್ವಾತಂತ್ರ್ಯ ಚಳುವಳಿಯಲ್ಲಿ ನಮ್ಮ ಕಾರ್ಯ ಕ್ಷೇತ್ರ ಎಲ್ಲಾ ಅನಂತಪುರ. ನಾನು ಸ್ಟೂಡೆಂಟ್ ಫೆಡರೇಷನ್‌ನಲ್ಲಿ ಇದ್ದೆ. ನಾಲ್ಕು ಜಿಲ್ಲೆಗಳಿಗೆ ಅದು ಒಂದೇ ಕಾಲೇಜು ಇದ್ದದ್ದು. ನಮ್ಮ ಫೆಡರೇಷನ್ ಇದ್ದದ್ದು ಹೆಡ್‌ಕ್ವಾರ್ಟ್‌ಸ್ಸ್ ನಲ್ಲಿ. ಅದರಲ್ಲಿ ಬಳ್ಳಾರಿ ಜಿಲ್ಲೆಯವರೇ ಮೊದಲಿಗರು. ಯಾಕಂತ ಹೇಳಿದ್ರೆ ನಾವೆಲ್ಲ ಸ್ವಲ್ಪ ಈ ಎಕ್ಸ್‌ಟ್ರಾ ಕರಿಕುಲರ್ ಆಕ್ಟಿವಿಟೀಸ್ ಏನಿದ್ವಲ್ಲ ಡ್ರಾಮಾ, ಡಿಬೇಟು, ಇದರಲ್ಲೆಲ್ಲ ಮುಂದಿದ್ವಿ.

ಸಂ : ಬಳ್ಳಾರಿ ಜಿಲ್ಲೆಗೆ ಲಗತ್ತಾಗಿ ಇದ್ದದ್ದು ರಾಯಚೂರು ಜಿಲ್ಲೆ. ಇಲ್ಲಿ ರಜಾಕಾರ ದಂಗೆ ನಡಿತಾ ಇತ್ತು. ರಜಾಕಾರರ ಹಾವಳಿ ಯಾವ ಥರ ಇತ್ತು?

ಕೋಚೆ: ಅದನ್ನ ನೀವು ಊಹೆ ಮಾಡಲಾರ್ರಿ. ರಜಾಕಾರ್ ಮೂವ್‌ಮೆಂಟ್ ಇದ್ದಾಗ ತುಂಗಭದ್ರಾ ನದಿಯ ದಕ್ಷಿಣಕ್ಕೆ ಬಂದು, ಅಲ್ಲಿ ಜನಗಳನ್ನು ಎಷ್ಟರಮಟ್ಟಿಗೆ ಹಿಂಸೆ ಮಾಡಿದ್ರು ಅಂತ್ಹೇಳಿದ್ರೆ, ಅವರವರ ಎತ್ತುಗಳನ್ನು ಜೀವಂತ ಸುಡೋ ಪರಿಸ್ಥಿತಿ ಬಂತು. ಅಷ್ಟು ಪುಂಡಾಟಿಕೆ. ಅವರು ಹೈದರಾಬಾದ್ ರಾಜ್ಯವನ್ನೇ ಸ್ವತಂತ್ರ ದೇಶವನ್ನಾಗಿ ಮಾಡಬೇಕು ಅಂತ ಇದ್ದವರು. ನಿಜಾಮನಿಗೆ ಇದು ಇಷ್ಟ ಇರಲಿಲ್ಲ. ಆದರೆ ಎಲ್ಲಾ ಆಳುವವರು ಸುತ್ತಮುತ್ತಲ ಇರುವವರ ಬಂದಿsಗಳು. ರಜಾಕಾರರ ಮೂವ್‌ಮೆಂಟಿಗೆ ಮೊದಲು ಸ್ವಲ್ಪ ದಿನ ಹೈದರಾಬಾದಿಗೆ ಮಿರ್ಜಾ ಇಸ್ಮಾಯಿಲ್ ದಿವಾನರಾಗಿದ್ರು. ಅವರು ಇದು ಸರಿಯಲ್ಲ ಅಂತ ಹೇಳಿದರು. He was not a small man. Great visionary. He was highly cultured man. International outlook ಇತ್ತು ಆತನಿಗೆ. ಸರ್.ಎಂ. ವಿಶ್ವೇಶ್ವರಯ್ಯನವರ ವಾರಸುದಾರರಾಗಿ ಬರ‍್ಲಿಕ್ಕೆ ಬೇಕಾದ ಎಲ್ಲ ಅರ್ಹತೆಯಿತ್ತು. ಬೆಂಗಳೂರಿನಲ್ಲಿ ಇರ‍್ತಕ್ಕಂಥ ಕಬ್ಬನ್ ಪಾರ್ಕ್‌ನ ಹೂವಿನ ಮರಗಳೆಲ್ಲ ಅವರ ದೂರಾಲೋಚನೆಯಿಂದ ಬಂದವು. ತಿಂಗಳಿಗೊಂದು ಬಣ್ಣದ ಹೂ ಬಿಡ್ತಾವ ಅವು. ಅವುಗಳನ್ನ ಜಪಾನ್‌ದಿಂದ ತರ‍್ಸಿ ಹಾಕಿಸಿದರು ಆಗಿನ ಕಾಲ್ದಲ್ಲಿ.

ಸಂ: ನಿಮ್ಮ ಮೇಲೆ ಗಾಂದಿsಜಿ ಪ್ರಭಾವ ಭಾಳ ಇದೆ.

ಕೋಚೆ: ನನ್ನ ಮನಸ್ಸೆಲ್ಲವು ಗಾಂದಿsಯೊಡನೇ ಇತ್ತು. ಅವರ ಜೀವನ ಏನಿದೆಯಲ್ಲ ಅದು ಪರಿಶುದ್ಧವಾದುದು. ಸತ್ಯ, ಅಹಿಂಸೆ, ಈ ವಿಚಾರದಲ್ಲಿ ಆತನಿಗಿದ್ದದ್ದು ಪರಮೋಚ್ಚ ನಂಬಿಕೆ ಮತ್ತು ನಮ್ಮ ಜನಗಳ ಬಾಳು ಹಸನವಾಗಬೇಕು. ಅದರಲ್ಲಿಯೂ ಈ ಅಸ್ಪ್ನೃಶ್ಯತಾ ನಿವಾರಣೆ, ಅದಕ್ಕೆ ಅನುಗುಣವಾದಂತಹ ಪಾನ ನಿರೋಧ ಇವುಗಳಿಂದ ನಮಿಗೆ ವಾಸ್ತವವಾಗಿಯೂ ಅವರ ಬಗ್ಗೆ ತುಂಬಾ ಗೌರವಕ್ಕೆ ಕಾರಣವಾಯ್ತು. ಅವರ ನೈತಿಕ ಜೀವನವೇ ನಮಿಗೆ ದೊಡ್ಡ ಸ್ಫೂರ್ತಿ. ಆಗಿನ ಕಾಲ್ದಲ್ಲಿ ಗಾಂದಿs ಅನ್ನೋ ಹೆಸರು ಈ ಉಪು ರಾಗಿ ಹ್ಯಾಗೆ ನಿತ್ಯ ಜೀವನದಲ್ಲಿ ಉಪಯೋಗ ಆಗ್ತದೊ ಹಂಗಾಗಿತ್ತದು.

ಸಂ: ನೆಹರು?

ಕೋಚೆ: ಆತನ ದೂರದೃಷ್ಟಿ, ಚಿಂತನೆ, ಆಧುನಿಕ ಲಕ್ಷಣ ಮತ್ತು ಸುಭಾಷ್ ಚಂದ್ರಬೋಸರ ಮಿಲಿಟಿನ್ಸಿ ನಮ್ಮಮನಸ್ಸೆಲ್ಲ ಸುಭಾಸರ ಕಡೆಗಿತ್ತು. ಗಾಂದಿs ಹೇಳೋದು ’ಏನಪ್ಪ ಇದು ಅಹಿಂಸೆ’ ಅಂತ. ಒಂಥರಾ ಅಸಮಾಧಾನ. ಆದರೆ ಆತನ ಬಿಟ್ರೆ ಬೇರೆಗತಿಯಿಲ್ಲ. ಇನ್ನೊಂದು ಅವರಿಗಿದ್ದ ಮಾಸ್ ಫಾಲೋ ಯಿಂಗ್. ನೆಹರೂ ಅವರನ್ನ ಬಿಡದೇ ಇರಲು ಇದೇ ಕಾರಣ. ಗಾಂದಿsಜಿಯವರ ಸಾಮಾಜಿಕ ಕಳಕಳಿಯೇನಿತ್ತಲ್ಲ ಅದರ ಬಗ್ಗೆ ನಮಿಗೆ ಅಪಿsಲಾಗ್ತಿತ್ತು.

ಸಂ: ಆದರೆ ನಿಮ್ಮ ಚಿಂತನೆಯಲ್ಲಿ ಒಂದು ಬಗೆಯ ಕಾಂಗ್ರೆಸ್ ವಿರೋದಿs ಎಳೆ ಸೇರಿಕೊಂಡಿತು.

ಕೋಚೆ: ಹೌದು. ಮೊಟ್ಟ ಮೊದಲನೇ ಕಾಂಗ್ರೆಸ್ ವಿರೋದಿs ಎಳೆ ಯಾವಾಗಾಯ್ತು ಅಂದರೆ, ಸ್ವಾತಂತ್ರ್ಯಾನಂತರದ ಕ್ಷಿಪ್ರ ಅವದಿsಯಲ್ಲಿಯೆ ಕಾಂಗ್ರೆಸ್ ರಾಜಕಾರಣಿ ಗಳಾದವರು ಭ್ರಷ್ಟಾಚಾರಕ್ಕಿಳಿದರಲ್ಲ, ಆಗ ನಮಿಗೆ ನಾವು ಯಾತಕ್ಕಾಗಿ ತ್ಯಾಗ ಮಾಡಿದೆವೊ ಅದೆಲ್ಲ ನಷ್ಟ ಆಯ್ತು. ಇವತ್ತಿಗೂ ನಾನು ಆ ವಿಚಾರದಲ್ಲಿ ಸಂಕಟಪಡ್ತೀನಿ-ಇಂಥ ಭ್ರಷ್ಟರ ಕೈಲಿ ರಾಜ್ಯ ಕೊಡ್ಲಿಕ್ಕಾಗಿ ನಾವೆಲ್ಲ ಕಷ್ಟಪಡ ಬೇಕಾಯ್ತಾ ಅಂತ. ನಮ್ಮದು ಬಿಡಿ ಹೋಗಲಿ, ಹಳ್ಳೀಲಿ ಇರ‍್ತಕ್ಕಂಥ ಹೆಂಗಸರು, ದರಿದ್ರರು, ಅಕ್ಷರ ಬಾರದೆ ಇರುವವರು, ಗಾಂದಿs ಹೇಳಿದ ಅಂತ್ಹೇಳಿ ಜೈಲಿಗೆ ಹೋದ್ರು. ನನ್ನ ಕಥೆಯಲ್ಲಿ ನಾರಾಯಣಪ್ಪ ಅಂತ ಬರ‍್ತಾನಲ್ಲ, ಆ ಮುದುಕ ನಿಜವಾಗಿ ಜೈಲಿಗೆ ಹೋದೋನು.

ಸಂ: ನಿಮ್ಮ ಕತೆ ಕಾದಂಬರಿಗಳ ಬಹುತೇಕ ಕಥಾ ನಾಯಕರು, ಒಂದು ಬಗೆಯಲ್ಲಿ ಮಿಲಿಟಂಟ್ಸ್. ಆದರೆ ನಿಮ್ಮ ಪ್ರೇರಣೆ ಅರವಿಂದರ ಆಧ್ಯಾತ್ಮಿಕ ಲೋಕ.

ಕೋಚೆ: ಯುಸೀ ಚಿಂತನೆ ಆದರ್ಶ ಬೇರೆ. ಅದನ್ನ ಟ್ರಾನ್ಸ್‌ಲೆಟ್ ಮಾಡಿ ಕಾರ್ಯಗತ ಮಾಡ್ತಕ್ಕಂಥದ್ದು ಬೇರೆ. ಈ ಗಾಂದಿs ಮತ್ತು ನೆಹರೂ, ಇವರು ಹೇಳ್ತಕ್ಕಂಥ ತಾತ್ವಿಕ ಸಿದ್ಧಾಂತ ಏನಿದೆಯಲ್ಲ, ಅದರ ಬಗ್ಗೆ ನಮಿಗೆ ಮೆಚ್ಚುಗೆ. ಅದು ಕಾರ್ಯಗತ ಆಗಬೇಕಾದ್ರೆ ಬೇರೆ ಶಕ್ತಿಬೇಕು. ಹಕ್ಕಬುಕ್ಕರು ಇರಲಿಲ್ಲಾಂದ್ರೆ ಕ್ರಿಯಾಶಕ್ತಿ ವಿದ್ಯಾರಣ್ಯರ ಯೋಜನೆ ಕಾರ್ಯರೂಪಕ್ಕೆ ಬರ‍್ತಿರ‍್ಲಿಲ್ಲ. ಈ ಬ್ರಿಟಿಶರು ಇಲ್ಲಿಂದ ಹೋಗಬೇಕು ನಿಜ. ನಾವು ಎಷ್ಟು ದಿನ ಅಪ್ಪ ಅಣ್ಣ ಅಂತ್ಹೇಳಿ ಅವರ ಪಾದಪೂಜೆ ಮಾಡ್ಕೊಂಡಿರಬೇಕು ಅಂತ್ಹೇಳಿ. ಆಗದಿಲ್ಲ ಅದು. ಅರವಿಂದರು ೧೯೦೫-೦೬ರಲ್ಲಿ ಪ್ರತಿಪಾದನೆ ಮಾಡಿದಾರೆ ಇದೇ ಮಾತನ್ನು.

ಸಂ: ಅದಕ್ಕೆ ಮಿಲಿಟಂಟ್ ಹೋರಾಟಗಳು ಬೇಕಾ?

ಕೋಚೆ: ಮಿಲಿಟನ್ಸಿ ಬೇಕು. ’ಆನಂದ ಮಠ’ ಕಾದಂಬರಿಯಲ್ಲಿ ಆ ತರುಣರು ಭವಾನಿ ಮಂದಿರ ಕಟ್ಟಬೇಕು ಅಂತ್ಹೇಳಿ ಪ್ರಯತ್ನ ಮಾಡ್ತಾರೆ.

ಸಂ: ನೀವೊಬ್ಬ ನ್ಯಾಯಾದಿsಶರಾಗಿ ರೂಲ್ ಆಫ್ ಲಾ ಬಗ್ಗೆ ಆದ್ಯತೆ ಕೊಡ ಬೇಕಾದವರು. ಆದರೆ ನಿಮ್ಮಲ್ಲಿ ಕಾನೂನು ಭಂಗಮಾಡುವ ರಾಜಕೀಯ ತೀವ್ರಗಾಮಿತನವೂ ಇದೆ. ಆಕ್ಟಿವಿಸಮ್ ಪರವಾದ ಆಲೋಚನೆಯೂ ಇದೆ.

ಕೋಚೆ: (ನಗುತ್ತಾ) ನಾ ಅದೇ ಹೇಳಾದು. ನಾವು ಈ ಮಿಲಿಟನ್ಸಿಯನ್ನು ದೀನಾವಸ್ಥೆ ಯಲ್ಲಿ ಇರಗೊಡದೆ ಅದಕ್ಕೊಂದು ಧೈರ್ಯ ಕೊಟ್ಟು ಅದನ್ನ ಕಾರ್ಯಗತ ಗೊಳಿಸಬೇಕು. ಗಾಂದಿsಜಿಯ ಸಿವಿಲ್ ಡಿಸ್‌ಒಬಿಡಿಯನ್ಸಿ, ಕಾನೂನು ಭಂಗ ಚಳುವಳಿ ಅಂತ್ಹೇಳಿದ್ರೆ, ಸಿವಿಲೈಜಡ್ ಸಿವಿಲ್ ಡಿಸ್‌ಓಬಿಡಿಯನ್ಸಿ. ಈಗ ಮಾಡೋಹಾಗೆ ರಸ್ತ್ಯಾಗ ಉರುಳೋದು, ರೈಲು ನಿಲ್ಲಿಸೋದು, ರಸ್ತೆ ತಡಿಯೋದು ಇದಲ್ಲ. ಗಾಂದಿsಯವರ ಉಪ್ಪಿನ ಸತ್ಯಾಗ್ರಹವೂ ಕಾನೂನು ಭಂಗವೇ. ಅದೂ ಮಿಲಿಟನ್ಸಿನೇ. ಇಟ್ ಈಜ್ ನಾಟ್ ಮೀಕ್ ಸಬ್ ಮಿಶನ್ ಟು ಅಥಾರಿಟಿ. ವಿ ಡಿಫೈ ಯು ಅವರು ಮಾಡಿ ತೋರಿಸಿದರು.

ಸಂ: ನೀವು ನ್ಯಾಯಾದಿsಶರಾಗಿ ಸರ್ಕಾರದ ಕಾನೂನಿನ ಚೌಕಟ್ಟಿನಲ್ಲೇ ನ್ಯಾಯ ತೀರ್ಮಾನ ಮಾಡಬೇಕಾದ ಅನಿವಾರ್ಯತೆ ಒದಗಿತು. ಒಂದು ತರಹ ವ್ಯವಸ್ಥೆಯ ಪರಿಪಾಲನೆ ಮಾಡಬೇಕಾದ ಇಕ್ಕಟ್ಟಿಗೆ ನಿಮ್ಮ ವೃತ್ತಿ ಜೀವನ ಸಿಕ್ಕಿತು. ಇದೇ ಕಾರಣದಿಂದ ನೀವು ನಿಮ್ಮ ಬರಹದಲ್ಲಿ ಹೆಚ್ಚು ಹೆಚ್ಚು ತೀವ್ರಗಾಮಿಯಾದ ಕ್ರಿಯಾಶೀಲತೆಯನ್ನು ಇನ್ನೊಂದು ಚೌಕಟ್ಟಿನೊಳಗೆ ಶೋಧನೆ ಮಾಡಿದಿರಾ?

ಕೋಚೆ: ಹೇಳ್ತೀನಿ ನಿಮಗೆ. ನಾನು ನ್ಯಾಯಾದಿsಶ ಆಗಿದ್ದಾಗ್ಯೂ ಕೂಡ ಈ ಕಾನೂನನ್ನು ಲೋಕಹಿತಕ್ಕಾಗಿ, ಸಮಾಜದ ಸುಖಕ್ಕಾಗಿ, ಯಾವ ರೀತಿಯಾಗಿ ಬಳಸಬೇಕು ಅನ್ನೋದು ನನ್ನ ತೀರ್ಮಾನಗಳಲ್ಲಿ ಕಾಣ್ತದೆ. ಉದಾಹರಣೆಗೆ ಬೆಂಗಳೂರಿನ ಸಬ್‌ಪೋಸ್ಟ್ ಮಾಸ್ಟರ್ ಒಬ್ಬಾತ ೨೦ ಸಾವಿರ ರೂಪಾಯಿ ನ್ಯಾಶನಲ್ ಸೇವಿಂಗ್ ಸರ್ಟಿಪಿsಕೇಟಿನ ಹಣವನ್ನ ಸ್ವಂತಕ್ಕೆ ಬಳಸ್ಕೊಂಡಿದ್ದ. ಕಾನೂನಿನ ಪ್ರಕಾರವಾಗಿ ಆತ ಅಪರಾದಿs. ಆತನಿಗೆ ೭ ವರ್ಷದವರೆಗೆ ಶಿಕ್ಷೆ ಕೊಡಬಹುದಾಗಿತ್ತು. ಆದರೆ ನಾನು ೭ ವರ್ಷ ಕೊಡ್ಲಿಲ್ಲ. ೧ ತಿಂಗಳು ಕೊಟ್ಟೆ. ಯಾಕೆ ಅಂತ್ಹೇಳಿದ್ರೆ ಆತ ಅಪರಾಧ ಮಾಡೋಕೆ ಕಾರಣವಾದ ಸರ್ಕಮ್ ಸ್ಟ್ಯಾನ್ಸಸನ್ನ ಗಣನೆ ಮಾಡಿದೆ. ಅನಿವಾರ್ಯತೆ ಇಲ್ಲದೆ ಹೋಗಿದ್ದರೆ ಆತ ಮಾಡ್ತಿದ್ದನೊ ಇಲ್ಲವೊ. ಆದರೆ ಆತನ ತಂಗಿಗೆ ಹೆರಿಗೆ ಆಗಿರಬೇಕಾಗಿರ್ತದೆ. ಮೊದಲನೇ ಹೆರಿಗೆ ತವರಿನಲ್ಲಿ ಆಗಬೇಕು. ಆಕೀನ ಕರ‍್ಕೊಂಡು ಬರಬೇಕು. ’ಜಾಗ ಇಲ್ವಲ್ಲಪ್ಪ ಮನೆಯಲ್ಲಿ ಏನ್ಮಾಡ್ತೀಯೊ ಮಾಡಪ್ಪ ನೀನು’ ಅಂತ ತಂದೆ ತಾಯಿ ಹೇಳಿದರು. ಜಾಗ ಇತ್ತು. ಅದಕ್ಕೊಂದು ಎಕ್ಸ್‌ಟೆನ್ಷನ್ ಬೇಕಿತ್ತು. ಅದಕ್ಕಾಗಿ ೧೦-೧೫ ಸಾವಿರ ರೂಪಾಯಿ ಬೇಕಾಗಿತ್ತು. ಅದಕ್ಕೆ ತಗೊಂಡು ಬಂದ ಮಾಡ್ದ. ಸಿಕ್ಕಿಬಿದ್ದ. ಒಪ್ಕೊಂಡ. ನಾನು ಆತನಿಗೆ ’ಪ್ರಾಮಾಣಿಕ ವಿಶ್ವಾಸ ದ್ರೋಹಿ’ ಅಂತ ಕರೆದೆ. ಅವನು ಕಾನೂನು ಪ್ರಕಾರ ತಪು ಮಾಡಿದಾನೆ. ಅವನಿಗೆ ಶಿಕ್ಷೆ ವಿದಿsಸಲೇಬೇಕು. ಶಿಕ್ಷೆ ವಿದಿsಸದೆ ಹೋದರೆ ನನ್ನ ಕರ್ತವ್ಯ ಚ್ಯುತಿ ಆಗ್ತದೆ. ರೂಲ ಆಫ್ ಲಾ ಎಲ್ಬಂತು? ತಪ್ಪಿತಸ್ಥನಿಗೆ ಶಿಕ್ಷೆ ವಿದಿsಸುವ ಅದಿsಕಾರ ನನಗುಂಟು. ಆದರೆ ಪ್ರಾಮಾಣಿಕನಿಗೆ ಪುರಸ್ಕಾರ ಮಾಡುವ ಅದಿsಕಾರ ನನಗಿಲ್ಲ. ಆದ್ದರಿಂದ ನಾನು ಏನ್ಮಾಡ್ತೀನಿ. ಆ ತಪ್ಪಿತಸ್ಥನಾದವನಿಗೆ ಶಿಕ್ಷೆ ಕೊಡ್ತೀನಿ. ಎಷ್ಟು ಕೊಡ್ತೀನಿ? ಸಾಂಕೇತಿಕವಾಗಿ ಕೊಡ್ತೀನಿ. ಇಷ್ಟು ಆದ್ಮೇಲೆ ಕೂಡ ಶಿಕ್ಷೆ ಆದ ಕೂಡಲೆ ಆತನಿಗೆ ನೌಕರಿಯಿಂದ ವಜಾ ಮಾಡ್ತಾರೆ. ನೌಕರಿ ಹೋದ್ರೆ, ನಾನು ಕೊಟ್ಟ ೭ ವರ್ಷ ಶಿಕ್ಷೆಗಿಂತ ಘೂರವಾದ ಶಿಕ್ಷೆಯನ್ನ ಇಡೀ ಜೀವಮಾನ ಆತ ಅನುಭವಿಸಬೇಕಾಗ್ತದೆ. ಆದ ಕಾರಣದಿಂದ ನಾನು ಈತನಿಗೆ ಶಿಕ್ಷೆ ವಿದಿsಸಿದ ಮೇಲೆ ನೌಕರಿಯಿಂದ ವಜಾ ಮಾಡಿದರೂ ಪುನರ್‌ನೇಮಕ ಮಾಡಬೇಕೆಂದು ಈ ಮೂಲಕ ಶಿಫಾರಸ್ಸು ಮಾಡ್ತೇನೆ ಅಂತ ಬರೆದೆ. ಆತನಿಗೆ ಪುನರ್ ನೇಮಕ ಆಯ್ತು. ಇಡೀ ಭರತಖಂಡದಲ್ಲಿ ಆಂಟಿ ಕರಪ್ಷನ್ ಕೇಸ್‌ನಲ್ಲಿ ವಜಾ ಮಾಡಿದವನನ್ನ ಮತ್ತೆ ನೇಮಕ ಮಾಡಿದ್ದು ಇದೇ ಒಂದು ಉದಾಹರಣೆ. ಇದನ್ನು ನಾನು ಕಾನೂನಿನ ವಿರುದ್ಧ ಮಾಡಿಲ್ಲ. ಇದಕ್ಕೆ Justice tempered with mercy ಅಂತಾರೆ.

ಸಂ: ನೀವು ನ್ಯಾಯಾದಿsಶರಾಗಿ ಅನೇಕ ಪ್ರಕರಣಗಳು ಬಂದಾಗ ಹೇಗೆ ಮಾನವೀಯ ವಾಗಿ ವರ್ತಿಸಿದಿರಿ ಅನ್ನೋದು ನಿಮ್ಮ ಆತ್ಮಚರಿತ್ರಾತ್ಮಕ ಬರೆಹಗಳಲ್ಲಿ ಕಾಣುತ್ತೆ. ನಿಮ್ಮಲ್ಲಿ ಒಟ್ಟು ವ್ಯವಸ್ಥೆಯ ಬಗ್ಗೆ ಒಂದು ಆಕ್ರೋಶ ಅಲ್ಲಿ ವ್ಯಕ್ತವಾಗ್ತದೆ. ಒಂದು ಬಗೆಯ ಅಸಹಾಯಕತೆ ಮತ್ತು ನೈತಿಕ ಆಕ್ರೋಶವೂ ವ್ಯಕ್ತವಾಗ್ತದೆ. ನಿಮಗೆ ನಮ್ಮ ಪ್ರಜಾಪ್ರಭುತ್ವವು ವಾಸ್ತವದಲ್ಲಿ ಹ್ಯಾಗೆ ಪ್ರಾಕ್ಟೀಸ್ ಆಗ್ತಿದೆ ಅಂತ ಆಡಳಿತಗಾರನಾಗಿ ಒಳಗಿದ್ದು ನೋಡಿದ ಅನುಭವ ಇದೆ. ನಮ್ಮ ಪ್ರಜಾಪ್ರಭುತ್ವದ ಸ್ವರೂಪ ಎಂತಹದ್ದು.

ಕೋಚೆ: ಹೇಳ್ತೀನಿ. ಇದನ್ನ ಆಗ್ಲೂ ನಂಬಿದ್ದೆ. ಈಗ್ಲೂ ನಂಬ್ತೀನಿ. ಈ ವ್ಯವಸ್ಥೆ. ಸಂಪೂರ್ಣ ಬುಡಮೇಲಾಗದ ಹೊರತು ನಿಜವಾದ ಬದಲಾವಣೆ ಸಾಧ್ಯವಿಲ್ಲ. ರೆವಲ್ಯೂಶನ್ನಿಂದಲೇ ಇದನ್ನ ಸರಿಪಡಿಸಬೇಕು. ಬಸವಣ್ಣ ಮಾಡಿದ್ದು ಆ ಕೆಲ್ಸ. ಈಗಿನ ಸಿಸ್ಟಂ ಏನಿದೆಯಲ್ಲ ಅದನ್ನು ಬದಲಾಯಿಸಬೇಕಿದೆ. ಇದು ಜನಕ್ಕೆ ಹಿತಕರವಾಗಿಲ್ಲ. ಯಾಕಂದ್ರೆ ಇಡೀ ವ್ಯವಸ್ಥೆ ಕರಪ್ಟ್ ಆಗಿದೆ.

ಸಂ: ಬದಲಾವಣೆಯ ನಂತರದ ಪರ್ಯಾಯ ಯಾವುದು?

ಕೋಚೆ: ನನಿಗೆ ಕಂಡು ಬರೋ ಹಾಗೆ ಸರ್ವಸಮಾನತೆಯ ಸಾಮಾಜಿಕ ಸಿದ್ಧಾಂತ. ಸಮಾಜವಾದ. ಅದನ್ನು ನೀವು ಕಮ್ಯುನಿಸಂ ಅಂತನಾದರೂ ಕರೀರಿ. ಸೆಕ್ಯುಲರಿಜಂ ಅಂತನಾದರೂ ಕರೀರಿ. ಒಟ್ಟಿನಲ್ಲಿ ಆಮೂಲಾಗ್ರ ಪರಿವರ್ತನೆ ಆಗಲೇಬೇಕು.

ಸಂ : ಕ್ರಾಂತಿ ಅಂದರೆ ಅನೇಕ ಮಾರ್ಗಗಳಿವೆ. ನಿಮ್ಮ ಮನಸ್ಸಿನಲ್ಲಿ ಯಾವುದು ಇದೆ?

ಕೋಚೆ: ನಮ್ಮ ದೇಶದ ಯುವಕರ ಆಂತರ್ಯದಲ್ಲಿ ಒಂದು ಆಕ್ರೋಶವಿದೆ. ಅವರಿಗೆ ಒಂದು ತಾತ್ವಿಕ ಹಿನ್ನೆಲೆಯಿದೆ. ಇಲ್ಲದೆ ಹೋದರೆ ಅಂಥ ಬುದ್ಧಿವಂತರಾದವರು, ವಿಶ್ವವಿದ್ಯಾಲಯದಲ್ಲಿ ದೊಡ್ಡ ಪದವಿ ಪಡೆದವರು, ಚರಿತ್ರೆ, ಅರ್ಥಶಾಸ್ತ್ರ, ರಾಜಕೀಯವನ್ನು ಬರೆದವರು, ಹುಟ್ಟಿನಿಂದ ಶ್ರೀಮಂತರಾದವರು, ತಮ್ಮ ಪ್ರಾಣತ್ಯಾಗಕ್ಕೆ ಸಿದ್ಧ ಯಾಕಾಗಿದಾರೆ? ಪರಿವರ್ತನೆ ಆಗ್ಬೇಕು. ಆಗ್ತಾಯಿಲ್ಲ. ಆಗಲಿಕ್ಕೆ ಅವಕಾಶ ಇಲ್ದಂಗೆ ಮಾಡಿದಾರೆ ಅನ್ನೋ ಕಾರಣಕ್ಕೇನೇ ಅವರು ಈ ದಾರಿ ತುಳಿದಿದಾರೆ. ನಮ್ಮ ಕ್ರಾಂತಿಕಾರಕ ಚಳುವಳಿಗಳು ತಾಳಿರುವ ರೂಪ ನೋಡಿದ್ರೆ ಒಂದು ತರಹ ಅಸಮಾಧಾನ ಆಗ್ತದೆ. ಹಿಂಗಾಗಬಾರದಿತ್ತು ಅಂತ ನೋವಾಗುತ್ತೆ. ಆದರೆ ದಾರಿ ಬೇರೆ ಏನಿದೆ ನಮ್ಗೆ ತೋರಿಸ್ಕೊಡಿ ಅಂತ ಅವರು ಕೇಳ್ತಾರೆ. ನೀವು ಮೇನ್ ಸ್ಟ್ರೀಮ್‌ಗೆ ಬರ್ರಿ ಅಂತ ನಾವು ಬುದ್ಧಿವಂತರು ಹೇಳ್ತೀವಿ. ಮೇನ್ ಸ್ಟ್ರೀಮ್‌ಗೆ ಬಂದ್ರೆ ಚುನಾವಣೆ ನಿಲ್ಲಬೇಕು. ಚುನಾವಣೆ ಯಲ್ಲಿ ಯಾರು ಗೆಲ್ಲೋಕೆ ಸಾಧ್ಯ? ಅವರು ಗೆದ್ದು ಬರಲ್ಲ. ಆದ ಕಾರಣದಿಂದ ಏನ್ಮಾಡ್ಬೇಕು ನಾವು. ಈ ಟೆರ್ರರಿಜಂ ಅಂತ ಏನು ನಡೀತಾ ಇದೆಯಲ್ಲ ದೇಶದಲ್ಲಿ, ಅದು ಯಾಕೆ ನಡೀತಿದೆ ಅಂತ ಅದರ ರೂಟ್‌ಕಾಸ್ ಬಗ್ಗೆ ಸ್ವಲ್ಪ ಯೋಚನೆ ಮಾಡಿದೀರಾ?. ಇದು ನಮ್ಮ ದೇಶದಲ್ಲಿ ೧೯೯೨ಕ್ಕಿಂತ ಮುಂಚೆ ಇರಲಿಲ್ಲ. ಬಾಬರಿ ಮಸೀದಿ ಯಾವಾಗ ಹೊಸಕಿ ಹಾಕಿದರೊ ಅವತ್ತಿನಿಂದ ಪ್ರಾರಂಭ ಆಯ್ತು. ಅಮೃತಸರದಲ್ಲಿ ಗೋಲ್ಡನ್ ಟೆಂಪಲ್‌ಗೆ ಬ್ಲೂಸ್ಟಾರ್ ಆಪರೇಶನ್ ಅಂತ ಯಾವಾಗ ಸೈನ್ಯವನ್ನು ಕಳಿಸಿದರೊ ಅವತ್ತಿಂದ ಸಿಖ್ಖರಿಗೆ ಅಸಮಾಧಾನ ಆಯ್ತು. ಗುಜರಾತ್ನಲ್ಲಿ ಗಬಿsಣಿ ಸ್ತ್ರೀಯನ್ನು ಸೀಳಿ ಶಿಶುವನ್ನು ಮೆರವಣಿಗೆ ಮಾಡ್ಕೊಂಡು ತಗಂಡೋದ್ರಲ್ಲ ಏನು ಮಾಡಬೇಕಂತೀರಿ? ಹತಾಶೆ. ಅವರನ್ನ ನಾವು ಸಿಂಪತೈಜ್ ಮಾಡಬೇಕು. ಅವರನ್ನ ಸರಿ ದಾರಿಗೆ ತರಲಿಕ್ಕೆ ಏನ್ಮಾಡಬೇಕು ಅಂತ ಯೋಚನೆ ಮಾಡಬೇಕು.

ಸಂ: ಆದರೆ ಈ ಮಿಲಿಟಂಟ್ ಹೋರಾಟಗಳು ಒಟ್ಟು ಸಮುದಾಯಗಳ ಬಿಡುಗಡೆ ಯನ್ನು ಮಾಡಬಲ್ಲವು ಅಂತ ಅನ್ನಿಸ್ತಿದೆಯಾ?

ಕೋಚೆ: ಬಹುದೊಡ್ಡ ದೇಶ ನಮ್ದು. ನೇಪಾದಲ್ಲಿ ನೋಡಿ, ಅವರು ಮಾಡಿ ತೋರಿಸಿದರು.

ಸಂ: ಕನ್ನಡದ ಲೇಖಕರಲ್ಲಿ ಅರವಿಂದ ದರ್ಶನದ ಪ್ರಭಾವಕ್ಕೆ ಒಳಗಾದವರಲ್ಲಿ ನೀವು, ಕುವೆಂಪು, ಮಧುರಚೆನ್ನ, ಬೇಂದ್ರೆ, ಗೋಕಾಕ, ಪುಣೇಕರ ಮುಂತಾದವರು ಇದ್ದಾರೆ. ಆದರೆ ನಿಮ್ಮಂತೆ ಆಧ್ಯಾತ್ಮಿಕ ಹುಟುಕಾಟದ ದರ್ಶನಗಳನ್ನು ಸಾಮಾಜಿಕ ಕ್ರಾಂತಿಯ ಜತೆಗೆ ಬೆಸೆದು ನೋಡಿದವರು ಕಡಿಮೆ. ನಿಮ್ಮ ಕಥಾನಾಯಕರು ಬಂಡುಕೋರರು. ಯಾಕೆ ನಿಮಗೆ ಪ್ರಭುತ್ವದ ವಿರುದ್ಧ ಅಷ್ಟೊಂದು ಆಕ್ರೋಶ?

ಕೋಚೆ: ನನ್ನ ಸ್ವಾನುಭವದಿಂದ ಹೇಳೋ ಮಾತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರತ್ಯಕ್ಷ ಪಾಲ್ಕೊಂಡವರ ಪೈಕಿ ನಾನೂ ಒಬ್ಬ. ಈ ಬಡತನ ಮತ್ತು ಅಸಮಾನತೆ ಬಗ್ಗೆ ನನ್ನ ತಿಳುವಳಿಕೆ, ನಾನು ಕಮ್ಯುನಿಸಂ ಸೋಶಿಯಲಿಸಂ ಓದಿದ ಮೇಲೆ ಇದು ಬಂದಿದ್ದಲ್ಲ. ನಾನು ಅತ್ಯಂತ ಚಿಕ್ಕವನಿದ್ದಾಗ ಈ ಅಸಮಾನತೆಯನ್ನು ಕಾಣ್ತಿದ್ದೆ. ಅದು ಸರಿಯಲ್ಲ ಅನ್ನಿಸ್ತು. ನನಗೆ ೧೪-೧೫ ವರ್ಷ. ಇನ್ನೂ ಹೈಸ್ಕೂಲಲ್ಲಿದ್ದೆ. ಒಂದಿನ ಮಂಗಳವಾರ, ಹೊಸಳ್ಳಿ ಸಂತಿಗೆ ಹೋಗಿದ್ದೆ. ಐನಳ್ಳಿಯಿಂದ ಒಬ್ಬಾತ ಸಂತಿಗೆ ಬಂದು ಅಂಗಡಿಯಿಟ್ಟಿದ್ದ. ಆ ಅಂಗಡಿಯಲ್ಲಿದ್ದ ಒಬ್ಬ ಹುಡುಗ ಕೂಲಿ ಆಳಾಗಿ ಬಂದವನು ಅಂಗಡಿಯಲ್ಲಿ ಎರಡಾಣೆ ಕದ್ದಿದ್ದ. ಅದಕ್ಕೆ ಅಂಗಡಿ ಮಾಲೀಕ ಬಾರಿಕೋಲಿಂದ ಬೀಸಿಬೀಸಿ ಹೊಡೀತಿದ್ದ. ನಾನು ತಕ್ಷಣವೇ ಹೋದೆ. ’ಏನ್ರೀ ನೀವು ಮನುಷ್ಯರೋ ದನಗಳ ಹಂಗೆ ಹೊಡೀ ತೀರಲ್ಲ. ಆತ ಕದ್ದಿದಾನಲ್ಲ. ಪೋಲೀಸ್ ಸ್ಟೇಷನ್ ಇದೆ. ಕಂಪ್ಲೆಂಟ್ ಕೊಡ್ರಿ. ಅವನು ಬಡವ ಕಾಲಿಗೆ ಬಂದಾನೆ ಅವ್ನಿಗೆ ಹೊಡಿತೀರಿ ನೀವು. ಇದು ತಪು ಅಂದೆ. ಈ ಮಾತು ನನ್ನ ಬಾಯಾಗೆ ಹ್ಯಾಗ್ಬಂತೊ ನಾನೇ ಯೋಚ್ನೆ ಮಾಡ್ತೇನೆ. ಬಸವಣ್ಣನವರು ದಲಿತರ ಜತೆ ಮದುವೆ ಮಾಡ್ಸಿದ್ರು. ಅಂಥದ್ದರಾಗೆ ದಲಿತರ ಮನ್ಯಾಗೆ ನಾವು ಹೋಗಿ ನೀರು ಕುಡಿದ್ರೇನು? ಹೀಗೆ ನನ್ನ ಮನಸ್ಸಿನಲ್ಲಿ ಮೊದಲಿನಿಂದಲೂ ಇತ್ತು. ಸ್ವಲ್ಪಮಟ್ಟಿಗೆ ಪ್ರಬುದ್ಧ ಸ್ಥಿತಿಗೆ ಹೋದ್ಮೇಲೆ ಇತಿಹಾಸವನ್ನು ಓದಿದ ಮೇಲೆ, ರಾಜಕೀಯ ವ್ಯವಸ್ಥೆಯನ್ನು ನೋಡಿದ ಮೇಲೆ, ಆರ್ಥಿಕ ಅಸಮಾನತೆಯನ್ನು ನೋಡಿದ ಮೇಲೆ, ಇದು ನನ್ನಲ್ಲಿ ಬಲವಾಗಿ ಕೂತಿತು. ಈ ಸಮಾಜದಲ್ಲಿ ಬದಲಾವಣೆ ಆಗಬೇಕಿದೆ. ಇದು ನಾಗರಿಕವಾದ ಚಾನಲ್‌ನಲ್ಲಿ ಹೋಗಬೇಕಿದೆ. ವಿವೇಕಾನಂದರ ಗ್ರಂಥಗಳನ್ನು ನೀವು ನೋಡಿದ್ರೆ ಅವರಂಥ ಕಮ್ಯುನಿಸ್ಟ್ ಮತ್ಯಾರು ನಿಮಗೆ ಸಿಗಲ್ಲ. ವಿವೇಕಾನಂದರು ತಮ್ಮ ಗುರುಭಾಯಿಗಳಿಗೆ ಬರೆದಿರೋ ಪತ್ರಗಳನ್ನು ನೋಡಬೇಕು ನೀವು.

ಸಂ: ಆದರೆ ವಿವೇಕಾನಂದ ಹಾಗೂ ರಾಮಕೃಷ್ಣರ ಹೆಸರಲ್ಲಿರೋ ಮಠಗಳು, ಈಗ ನೀವು ಹೇಳ್ತಿರೋ ಸಮನತಾವಾದಿ ಆಧ್ಯಾತ್ಮಕತೆಯನ್ನು ಪ್ರತಿನಿದಿsಸ್ತಾ ಇವೆ ಅಂತ ಅನಿಸುತ್ತಾ?

ಕೋಚೆ: ವಿವೇಕಾನಂದರ ಕಾಲದಲ್ಲೆ ಈ ಬಗ್ಗೆ ಬಿsನ್ನಾಬಿsಪ್ರಾಯ ಬಂದಿತ್ತು. ವಿವೇಕಾ ನಂದರು ಹೋಮ-ಹವನ, ಯಜ್ಞ-ಯಾಗ, ಬ್ರಾಹ್ಮಣ್ಯದ ಲಕ್ಷಣಗಳನ್ನು ಯಾವುದನ್ನು ಮಾಡ್ಲಿಲ್ಲ. ಅವರು ಒಂದು ಕಡೆ ’ಸನ್ಯಾಸಿಗಳು ನಾವು ಏನು ಮಾಡಿದ್ದೇವೆ. ಸಮಾಜ ಕೊಟ್ಟ ದುಡ್ಡನ್ನು ತಿಂದು ಬದುಕಿದ್ದೇವೆ’ ಅಂತ ಹೇಳ್ತಾರೆ. ’ನಿಮ್ಮ ಕೆಲಸ ಮಠಗಳಲ್ಲಿಲ್ಲ. ಹರಿಜನ ಕೇರಿಗಳಿಗೆ ಹೋಗ್ರಿ, ಅವರನ್ನ ವಿದ್ಯಾವಂತರನ್ನಾಗಿ ಮಾಡಿ. ಬ್ರಾಹ್ಮಣ ವಿದ್ಯಾರ್ಥಿಗೆ ಒಬ್ಬ ಉಪಾಧ್ಯಾಯ ಬೇಕಾದ್ರೆ, ಅಸ್ಪ್ನೃಶ್ಯ ಮತ್ತು ಶೂದ್ರ ವಿದ್ಯಾರ್ಥಿಗಳಿಗೆ ೧೦೦ ಜನ ಅಧ್ಯಾಪಕರು ಬೇಕು. ಅವರು ಶಾಲೆಗೆ ಬರದಿಲ್ಲ ಅಂತ ಹೇಳ್ತೀರಲ್ಲ. ಇಫ್ ಮೊಹಮ್ಮದ್ ಕ್ಯನಾಟ್ ಗೋ ಟು ದ ಮೌಂಟೇನ್, ಮೌಂಟೇನ್ ಮಸ್ಟ್ ಗೊ ಟು ಮಹಮ್ಮದ್’ ಅಂತ ಹೇಳ್ತಾರೆ.

ಸಂ: ನೀವು ನಿಮ್ಮ ಬರಹ ಮತ್ತು ಚಿಂತನೆಯಲ್ಲಿ ಪ್ರತಿರೋಧ ಮಾಡ್ಕೊಂಡು ಬಂದಿರೋ ಇನ್ನೊಂದು ಶಕ್ತಿಯೆಂದರೆ ವೈದಿಕ ಪುರೋಹಿತಶಾಹಿ. ಬಸವಣ್ಣ ಮತ್ತು ಕುವೆಂಪು ಅನುಯಾಯಿಗಳಾಗಿ ನಿಮ್ಮ ನಿಲುವು ಸಹಜ. ಆದರೆ ಆಧುನಿಕ ಕಾಲದಲ್ಲಿ ಪುರೋಹಿತಶಾಹಿ ಕೇವಲ ಮೌಢ್ಯವನ್ನು ಪೋಷಿಸುವಷ್ಟಕ್ಕೆ ಸೀಮಿತವಾಗಿಲ್ಲ. ಅದೊಂದು ರಾಜ್ಯಾದಿsಕಾರವನ್ನು ಹಿಡಿಯುವ ವ್ಯವಸ್ಥಿತ ರಾಜಕೀಯ ವ್ಯವಸ್ಥೆಯಾಗಿ ಬೆಳೆದಿದೆ. ಇದರ ಮುಖಾಮುಖಿ ನಮ್ಮ ಕಾಲದ ದೊಡ್ಡ ಸವಾಲು.

ಕೋಚೆ: ನಾವು ಗಾಂದಿsಜಿ, ಅರವಿಂದರು, ಪರಮಹಂಸರು ಹೇಳೋ ರೀತಿಯಲ್ಲಿ ಸರ್ವಮತ ಸಮನ್ವಯ, ಇವುಗಳಿಂದಲೇ ಬದುಕಬೇಕಾಗಿದೆ. ಬಹು ಸಾಂಸ್ಕೃತಿಕ, ಬಹುಭಾಷಿಕ, ಬಹುಧಾರ್ಮಿಕ, ಬಹು ಜಾನಾಂಗಿಕವಾದ ಈ ಭರತಖಂಡದಲ್ಲಿ ನಾವೆಲ್ಲ ಒಂದಾಗಿ ಹೋಗಬೇಕೇ ಹೊರತು, ಒಬ್ಬರಿಗೊಬ್ಬರು ಹಣಾಹಣಿ ಯಿಂದ ಹೋಗಲಿಕ್ಕೆ ಸಾಧ್ಯವಿಲ್ಲ. ಹಾಗಾಗಿದ್ದೇ ಆದರೆ ಈಗ ಮಧ್ಯ ಪ್ರಾಚ್ಯ ದಲ್ಲಿ ಏನಾಗ್ತಿದೆಯಲ್ಲ ರಕ್ತಪಾತ, ಅದು ನಮ್ಮಲ್ಲಾಗುತ್ತೆ. ನಮ್ಮ ದೇಶ ಇಷ್ಟು ಸಹಸ್ರ ವರ್ಷದವರೆಗೂ ಒಂದಾಗಿ ಬದುಕಿದ್ರೆ ಅದಕ್ಕೆ ಕಾರಣ, ನಮ್ಮ ಈ ಪರಮತ ಸಹಿಷ್ಣುತೆ ಮತ್ತು ಸರ್ವಧರ್ಮ ಸಮನ್ವಯ. ಅರವಿಂದರ ವಿಶನ್ ವಾಸ್ ಹ್ಯಾವಿಂಗ್ ಒನ್ ವರ್ಲ್ಡ್. ’ಹ್ಯೂಮನ್ ಯುನಿಟಿ’ ಅಂತ ಪುಸ್ತಕ ಬರ್ದಿದಾರೆ. ಅವರ ದೃಷ್ಟಿ ಏನಾಗಿತ್ತು ಅಂತ್ಹೇಳಿದ್ರೆ ಈ ಜಾತಿ, ಮತ, ಪಂಥ, ಭಾಷೆ, ಇವುಗಳನ್ನು ಒತ್ತರಿಸಿ ಇವುಗಳಾಚೆ ಇರತಕ್ಕಂಥ ವರ್ಲ್ಡ್ ಸಿಟಿಜನ್ ಆಗ್ಬೇಕು. ನಾವು ಅದನ್ನು ಯಾರೂ ಗಮನಿಸಿಲ್ಲ. ಅರವಿಂದರ ದಿವ್ಯ ಜೀವನದ ಕೊನೆಯ ಅಧ್ಯಾಯದಲ್ಲಿ ಯೂನಿವರ್ಸೆಲ್ ಸಿಟಿಜನ್ ಅಗುವ ಮಾತು ಬರ‍್ತದೆ. ಅದೇ ಕುವೆಂಪು ಅವರ ವಿಶ್ವಮಾನವ ಕಲ್ಪನೆ. ಹಾಗೆ ನಾವು ಆಗ್ಬೇಕಾಗಿದೆ.

ಸಂ: ನಮ್ಮ ದೇಶದಲ್ಲಿ ಧರ್ಮದ ಹೆಸರಲ್ಲಿ ನಡೆದಿರುವ ವಿದ್ವೇಷಗಳು ಕೊನೆಗೆ ಎಂಥ ಪರಿಣಾಮ ಬೀರಬಹುದು?

ಕೋಚೆ: ನೋಡಿ ಈಗಾಗಲೆ ದೇಶ ೞsದ್ರವಾಗಿದೆ. ಈ ಶಕ್ತಿಗಳು ಬೆಳೆದು ಉಗ್ರ ಸ್ವರೂಪ ತಾಳಿದರೆ ಪ್ಯಾಲಸ್ತೈನ್‌ನಲ್ಲಿ ಆದಂಗಾಗ್ತದೆ. ಇರಾಕ್‌ನಲ್ಲಿ ಅಂದಂಗಾಗ್ತದೆ. ಇದು ಆಗಬಾರದು. ಹಾಗಾದರೆ ನಾವು ಕ್ರಿಸ್ತಪೂರ್ವ ಯುಗಕ್ಕೆ ಹೋಗ್ತೀವಿ. ಅಲ್ಲ್ಭಿ ನೂರು ವರ್ಷದ ಯುದ್ಧ ಈ ಕ್ರಿಶ್ಚಿಯನ್ರಿಗೂ ಮತ್ತು ಯಹೂದಿಗಳಿಗೂ ನಡೀತು. ನಾವು ಉದಾರವಾದ ಮಾನವೀಯ ದೃಷ್ಟಿಯನ್ನು ತಾಳದೆ ಹೋದ್ರೆ ಈ ಜಾತಿ, ಮತ, ಪಂಥದ ಅಡ್ಡಗೋಡೆಗಳನ್ನು ಕೆಡವದೇ ಹೋದರೆ, ತುಂಬ ಅನಾಹುತವಾಗುತ್ತೆ.

ಸಂ: ಕರ್ನಾಟಕದಲ್ಲಿ ಈ ಹೊತ್ತು ಪುರೋಹಿತಶಾಹಿ, ಕೋಮುವಾದಿ, ಮತೀಯ ವಾದಿ ಶಕ್ತಿಗಳ ಜತೆ ಕೇವಲ ಉಚ್ಚಜಾತಿಗಳಿಲ್ಲ. ಕೆಳಜಾತಿಯವರೂ ಸೇರಿದ್ದಾರೆ. ವಿವೇಕಾನಂದ, ರಾಮಕೃಷ್ಣ ಮಠಗಳೂ ಸೇರಿವೆ. ಬಸವಣ್ಣನ ಅನುಯಾಯಿಗಳು ಎಂದುಕೊಳ್ಳುವ ಲಿಂಗಾಯತರೂ ಸೇರತಾ ಇದ್ದಾರೆ.

ಕೋಚೆ: ಇದು ಅದಿsಕಾರದ ಸ್ವಾರ್ಥಕ್ಕಾಗಿ ಹಾಕ್ಕೊಂಡಿರತಕ್ಕಂಥ ಬಣ್ಣ. ಈಗ ಕೋಮು ವಾದಿ ಪಕ್ಷಗಳಿಗೆ ಉತ್ತರ ಕರ್ನಾಟಕದ ಲಿಂಗಾಯಿತರು ಹೋಗಿದಾರೆ. ಈಗ ಸುಮಾರು ೫೦ ಜನ ಲಿಂಗಾಯಿತ ಶಾಸಕರು ಇದಾರೆ ಅಂತ ಕೇಳಿದೀನಿ. ಇವರೆಲ್ಲ ಹಿಂದುತ್ವ ಸಿದ್ಧಾಂತ ಒಪ್ಪಿ ಹೋಗಿದಾರೆ ಅಂತಲ್ಲ. ಬೇರೆ ಪಕ್ಷಗಳಲ್ಲಿ ಜಾಗವಿಲ್ಲ ಅಂತಲೂ ಕೆಲವರು ಹೋಗಿದಾರೆ.

ಸಂ: ಆದರೆ ಬಸವತತ್ವಕ್ಕೆ ಸೇರಿದ ಕೆಲವು ಧಾರ್ಮಿಕ ನಾಯಕರು ಇದರ ಅಪಾಯ ಮನಗಾಣದೆ ಇರೋದು ವಿಷಾದಕರವಾಗಿದೆ.

ಕೋಚೆ: ಅನೇಕ ಸ್ವಾಮಿಗಳು ಬರೀ ವೇಷಧಾರಿಗಳು. ಅವರಿಗೆ ಕೂಡ ನಮ್ಮ ಜಾತಿಯ ವರು ಹೆಂಗಾದ್ರೂ ಸರಿ ಅದಿsಕಾರಕ್ಕೆ ಬರಬೇಕು ಅಂತ ಯೋಚನೆಯಿದೆ.

ಸಂ: ನೀವು ಹಳ್ಳಿಯಿಂದ ಬಂದವರು. ಬೆಂಗಳೂರಿನಲ್ಲಿ ನೆಲೆಸಿದ್ದೀರಿ. ಈಚಿನ ಬೆಂಗಳೂರಿನ ಬೆಳವಣಿಗೆಗಳ ಬಗ್ಗೆ ಏನು ಅನಸ್ತಿದೆ?. ಒಳ್ಳೆಯ ಸರ್ಕಾರ ಅಂದ್ರೆ ಬಹುರಾಷ್ಟ್ರೀಯ ಕಂಪನಿಗಳಿಗೆ ಸೇವೆ ಮಾಡುವಂಥದ್ದು ಅನ್ನುವ ಹೊಸ ವ್ಯಾಖ್ಯೆ ತಯಾರಾಗ್ತಿದೆ.

ಕೋಚೆ: ಈಗ ನಮ್ಮ ಅವಶ್ಯಕತೆಗಳಿಗೆ ತಕ್ಕ ಹಾಗೆ ಇಂಡಸ್ಟ್ರಿಯಲೈಜೇಶನ್ ಆಗಲೇ ಬೇಕು. ನಿರುದ್ಯೋಗ ಸಮಸ್ಯೆ ಎದುರಿಸೋಕೂ ಇದು ಅಗತ್ಯ. ಆದರೆ ಇದನ್ನು ಹ್ಯಾಗೆ ಸಾದಿsಸಬೇಕು? ನಾವು ನೇರ ವಿದೇಶಿ ಸಾಲದಿಂದ ಆಗಬೇಕೇ, ವಿದೇಶಿ ಕಂಪನಿಗಳಿಗೆ ನಮ್ಮ ಹೆಬ್ಬಾಗಿಲು ತೆರಿದಿಡಬೇಕೆ? ಅವು ಇಲ್ದೇನೆ ನಮಗೆ ಆರ್ಥಿಕಾಬಿsವೃದ್ಧಿ ಮಾಡ್ಲಿಕ್ಕೆ ಸಾಧ್ಯ ಇಲ್ಲವೆ, ಅದಕ್ಕಾಗೀನೇ ಸಾವಿರಾರು ಎಕರೆ ಬೆಳೆ ಬೆಳೀತಕ್ಕಂತ ಭೂಮಿ ಅಕ್ವೈರ್ ಮಾಡಬೇಕು ಅನ್ನೋದು ಸರಿಯಲ್ಲ. ಈಗ ಕೆರೆಕಟ್ಟಿಸಬೇಕಂದ್ರೆ ಒಂದು ಸಾವಿರ ಎಕರೆ ಮುಳುಗ್ತದೆ ಅಂತ ಇಟ್ಕೊಳ್ಳಿ. ಸಾವಿರ ಮುಳುಗಿಸಿ ಅಲ್ಲಿರ‍್ತಕ್ಕಂಥ ಲಕ್ಷ ಎಕರೆಗೆ ನೀವು ನೀರು ಹರಿಸೋದಾದರೆ ಅಗತ್ಯವಾಗಿ ಮುಳುಗಿಸಿರಿ. ಬ್ಯಾಡ ಅನ್ನಲ್ಲ. ಈವಾಗೇನಾಗ್ತಿದೆ? ಕೆಲವೇ ಜನರಿಗಾಗಿ ಭಾಳ ಜನರಿಗೆ ತೊಂದ್ರೆ ಕೊಡೋ ನೀತಿ ಆಗಿದೆ. ಇದು ತಪು. ಈಗ ಜನ ಕ್ಯಾಪ್ಟಿವ್ಸ್ ಅಫ್ ಕಸ್ಟೊಮರ್ ಕಲ್ಚರ್ ಆಗಿದ್ದಾರೆ.

ಸಂ: ಅಂದ್ರೆ?

ಕೋಚೆ: ನಾವು ಗಿರಾಕಿಗಳು ಸೆರೆಯಾಳಾಗಿದೀವಿ. ಈಗ ಹೇಳ್ತಾ ಇದಾರಲ್ಲ, ಎಪಿಎಂಸಿ ಆಕ್ಟನ್ನು ತಿದ್ದುಪಡಿ ಮಾಡಿ ನಿಮ್ಮ ಎಲ್ಲಾ ಮಾಲನ್ನು ಅಲ್ಲೇನೇ ಕೊಂಡ್ಕೋ ಬೇಕು ಅಂದ್ರೆ, ಹಳ್ಳಿಯಲ್ಲಿರ‍್ತಕ್ಕಂಥ ಬಡ ಜನಗಳಿಗೆ ಇದು ಅನುಕೂಲ ಆಗುತ್ತಾ? ಬೇರೆ ದಾರೀನೇ ಇಲ್ಲದಂಗೆ ಕ್ಯಾಪ್ಟಿವ್ಸ್ ಆಗ್ತೀವಿ ನಾವು. ೧೦೦ ಕೋಟಿ ಜನ ಅವರ ಕಸ್ಟೋಮರ‍್ಸ್ ಆಗತೀವಿ. ಪಿಜ್ಜಾಕ್ಕೆ ಸಿಕ್ಕಿ ನಮ್ಮ ಹೋಳಿಗೆ, ಗೋದಿs ಹುಗ್ಗಿ, ಇವೆಲ್ಲಾ ನಿರ್ನಾಮ ಆಗ್ತವೆ.

ಸಂ: ನೀವು ಕುವೆಂಪು ಅವರ ಅಬಿsಮಾನಿಗಳು. ಆದರೆ ನಿಮ್ಮ ಬರೆಹದಲ್ಲಿ ಅವರ ಕಾದಂಬರಿಗಳ ಚರ್ಚೆ ಹೆಚ್ಚಿಲ್ಲ. ಯಾಕೆ?

ಕೋಚೆ: ಇಲ್ಲ. ಅವನ್ನು ನಾನು ಓದಿದೀನಿ.

ಸಂ: ಕುವೆಂಪು ಬಿಟ್ರೆ ಬೇರೆ ಯಾವ ಲೇಖಕರು ಕನ್ನಡದಲ್ಲಿ ನಿಮ್ಮನ್ನು ಅವರಿಸಿ ಕೊಂಡವರು.

ಕೋಚೆ: ನೋಡಿ, ಆಗಿನ ಕಾಲ್ದಲ್ಲಿ ಬೇಂದ್ರೆ ಮಾಸ್ತರು ನಮಿಗೆ ಎರಡು ಕಾರಣಗಳಿಂದ ಮುಖ್ಯವಾದರು. ಕುವೆಂಪು ರಾಮಕೃಷ್ಣ ಪರಮಹಂಸರ ಹತ್ರ ಕರ‍್ಕೊಂಡ್ಹೋದರು. ಬೇಂದ್ರೆ ಮಾಸ್ತರು ಅರವಿಂದರಿಗೆ ದಾರಿ ತೋರ‍್ಸಿದ್ರು. ಆ ಎರಡು ಕಾರಣಗಳಿಂದ ನಾನು ಇಬ್ರನ್ನೂ ತುಂಬಾ ಮೆಚ್ಕೊಂಡಿದಿನಿ. ಅದಾದ ಮೇಲೆ ಅನಕೃ, ಆನಂದಕಂದರು, ಬೆಟಗೇರಿ ಕೃಷ್ಣಶರ್ಮ, ಗೋಕಾಕರನ್ನ ಓದಿದೀನಿ. ಗೋಕಾಕರ ’ಭಾರತ ಸಿಂಧುರಶ್ಮಿ’ ಹಿಡ್ದಾಗ ಅದು ಯಾಕೊ ಕುಗ್ತದೆ. ಸರಾಗವಾಗಿ ಮುಂದಕ್ಕೆ ಹೋಗೋದಿಲ್ಲ. ಅವರು ನಮಿಗೆ ಅತ್ಯಂತ ಆಪ್ತರಾದವರು. ನಮ್ಮ ಪ್ರಗತಿಶೀಲ ಸಾಹಿತಿಗಳಾದವರ ಪೈಕಿ ನಾವು ಒಬ್ಬರದೊಬ್ಬರು ಓದ್ತಾ ಇದ್ವಿ. ಈಗಿನವರ‍್ಹಂಗ ತಮ್ಮಷ್ಟಕ್ಕ ತಾವೇ ಸೀಮಿತ ಇರಂಗಿಲ್ಲ.

ಸಂ: ಕಾರಂತರು?.

ಕೋಚೆ: ಕಾರಂತರ ಎಲ್ಲ ಪುಸ್ತಕಗಳನ್ನು ಓದಿದೀನಿ. ನಾನು ದಕ್ಷಿಣ ಕನ್ನಡದಲ್ಲಿ ಜಡ್ಜಾಗಿದ್ದಾಗ ಕಾರಂತರ ಕಾದಂಬರಿಲೋಕ ಅಂತ ಒಂದು ಪುಸ್ತಕ ಬರೀ ಬೇಕಂತ್ಹೇಳಿ ನೋಟ್ಸ್ ಮಾಡಿದ್ದೆ. ಆದರದು ಆಗ್ಲಿಲ್ಲ. ಆ ನೋಟ್ಸ್ ಇನ್ನೂ ಇದೆ ನನ್ಹತ್ರ.

ಸಂ: ಆಧ್ಯಾತ್ಮವಾದಿ ಲೇಖಕರನ್ನು ಇಷ್ಟಪಟ್ಟ ನಿಮಗೆ ನಾಸ್ತಿಕವಾದಿ ಕಾರಂತರು ಹ್ಯಾಗೆ ಇಷ್ಟ ಆದ್ರು?

ಕೋಚೆ: ಅವರು ನಾಸ್ತಿಕರಲ್ಲ. ಅವರ ’ಮೂಕಜ್ಜಿಯ ಕನಸು’ಗಳನ್ನು ನೋಡಿದೀರಾ?, ಈಗ ನೀವು ನಾಸ್ತಿಕರಂತ ಯಾರನ್ನು ಕರೀತಿರಿ?.
ಸಂ: ಅವರ ’ಬಾಳ್ವೆಯೇ ಬೆಳಕು’ ಕೃತಿಯಲ್ಲಿ ದೇವರಿಲ್ಲ ಅನ್ನೋದನ್ನೇ ಒಂದು ವಾದವಾಗಿ ಮಂಡನೆ ಮಾಡ್ತಾರೆ.
ಕೋಚೆ: ದೇವರು ಅಂದರೆ ಏನು ಅನ್ನೋದನ್ನೇ ಅರ್ಥ ಮಾಡ್ಕೋಬೇಕಲ್ಲ. ಅದಕ್ಕೆ ದೇವರಂದ್ರೆ ಏನು ಅನ್ನೋದನ್ನ ಮೊದಲು ತಿಳ್ಕೋಬೇಕು. ಆ ದೇವರು ಇದಾನೆ ಇಲ್ಲ ಅನ್ನೋದಕ್ಕೆ ನಮ್ಮ ವಿಚಾರವಾದಿ ಎಚ್. ನರಸಿಂಹಯ್ಯ ಮಾತಾಡ್ದಂಗೆ ಮಾತಾಡೋದಲ್ಲ ಅದು.

ಸಂ: ನರಸಿಂಹಯ್ಯನವರ ವೈಚಾರಿಕತೆಯ ಮಿತಿ ಏನು?

ಕೋಚೆ: ಸಾಯಿಬಾಬಾನ ಹತ್ರ ’ಬೂದಿ ಕೊಟ್ರೆ ಆಗಲ್ಲಪ್ಪ ಕುಂಬಳಕಾಯಿ ಕೊಡು’ ಅಂತ ಕೇಳದು ಇದೆಂಥ ವೈಚಾರಿಕತೆ? ಕುಂಬಳಕಾಯಿ ಕೊಡೋದೇ ಒಂದು ದೈವತ್ವನಾ ಅಥವಾ ಇವರ ಪರೀಕ್ಷೆ ಅದರೊಳಗೆ ಆಗಬೇಕಾ? ಅದಲ್ಲ. ದೇವರು ಅಂದ್ರೆ ಏನು? ಆ ಗಿಡದಲ್ಲಿ ನನಿಗೆ ಆ ದೇವರು ಅನ್ನೋದು ಕಾಣ್ತದೆ.

ಸಂ : ತಮ್ಮ ಕಾಲದಲ್ಲಿ ಬಹಳ ಜನಪ್ರಿಯ ಲೇಖಕರಾಗಿದ್ದ ಅನಕೃ ಬಗ್ಗೆ ನಿಮ್ಮ ಅಬಿsಪ್ರಾಯ ತಿಳಕೊಳ್ಳೋಕೆ ಕುತೂಹಲವಿದೆ.
ಕೋಚೆ: (ನಗು) ಅವರು ವಯಸ್ನಲ್ಲಿ ನನಗಿಂತ ೧೫ ವರ್ಷ ದೊಡ್ಡವರು. ಆದರೂ ಕೂಡ ನಮಿಗೆ ಬಾಳ ಪ್ರೀತಿಯಿಂದ ನೋಡ್ತಿದ್ರು. ಒಂದು ಸಣ್ಣ ಕವಿತೆಯೊ ಕತೆಯೊ ಬರದೆ ಅಂತ ಇಟ್ಕೊಳ್ಳಿ, ಅದು ಅವರ ಮನಸ್ಸಿಗೆ ಬಂದ್ರೆ ಭಾಳ ಪ್ರೀತಿ ಮಾಡೋರು. ಅವರು ಬೆಳಗಾವಿಗೆ ಬಂದ್ರೆ ನಾವು ಲಾ ಕಾಲೇಜು ಹುಡುಗರು, ಹಾಸ್ಟೆಲಿಗೆ ಇರತಿದ್ವಲ್ಲ, ನಮ್ ಜೊತೆಗೆ ಇರೋರು. ಅವರ ಮಾತಿನ ಓಘ ಏನಿದೆಯಲ್ಲ ಅದ್ಭುತವಾದಂಥದ್ದು. ಅವರೊಡನೆ ಹೋಲಿಸ್ತಕ್ಕಂಥ ಯಾವ ಕನ್ನಡ ಭಾಷಣಕಾರರೂ ಆಗ ಇರ‍್ತಿರ‍್ಲಿಲ್ಲ. ನಿರರ್ಗಳ ವಾಗಿ ಮಾತ್ನಾಡೋರು. ಅವರ ಬರವಣಿಗೆ ಕೂಡ ನಿರರ್ಗಳ. ’ಉದಯರಾಗ’, ’ಸಂಧ್ಯಾರಾಗ’ ಏನಿದಾವೆ ನಮಿಗೆ ಭಾಳ ಮೆಚ್ಚುಗೆ ಆದವು. ಅವರು ’ಸಾಹಿತ್ಯ ಮತ್ತು ಕಾಮಪ್ರಚೋದನೆ’ ಬರಿಯೋ ತನಕ ಅವರನ್ನ ಭಾಳ ಮೆಚ್ಚಿದೆ ನಾನು. ನಮ್ಮ ಪ್ರಗತಿಶೀಲದ ಪೈಕಿ ನನಗೆ ಬಾಳ ಪ್ರಿಯವಾದವ್ರು ಅಂದರೆ ’ತರಾಸು’. ಅವರು ಕನ್ನಡ ನುಡಿಸ್ಕೊಂಡು ಹೋಗ್ತಾರೆ. ಹಾರ್ಮೋನಿಯಮನ್ನು ಹೆಂಗ ನುಡಿಸ್ತಾರೊ ಹಂಗ ನುಡಿಸ್ತಾರ. ವಂಡರ್‌ಪುಲ್. ಕನ್ನಡ ಬಳಸೋದರಲ್ಲಿ ನಿಸ್ಸೀಮ ಅವರು?

ಸಂ: ನೀವು ಇಷ್ಟಾನೆ ಪಡದಿರೋ ಲೇಖಕರು ಅಂದರೆ..

ಕೋಚೆ: ಭೈರಪ್ಪ. ಆತನ ಪ್ರಾದೇಶಿಕತೆ ಮತ್ತು ರಿಚ್ ಇಮ್ಯಾಜಿನೇಷನ್ ಏನಿದೆಯಲ್ಲ ಅದನ್ನ ಒಪ್ಪಿದೀನಿ, ’ನಾಯಿ ನೆರಳು’ ’ಗೃಹಭಂಗ’ ’ದಾಟು’ ಓದಿದೀನಿ. ಆದರೆ ಆತನ ಚಿಂತನೆಯೇನಿದೆಯಲ್ಲ, ವೈದಿಕಶಾಹಿಯದು, ಇದರ ಬಗ್ಗೆ ನನಿಗೆ ಒಪ್ಪಿಗೆ ಇಲ್ಲ. ಮೊದ್ಲು ಓದ್ತಿದ್ದೆ.ಇತ್ತೀಚಿಗೆ ನಾನು ಓದೋದನ್ನು ಬಿಟ್ಟೆ.

ಸಂ: ಕುವೆಂಪು ಕಾರಂತರಂತಹ ಲೇಖಕರು ಆಗಿಹೋದ ಕನ್ನಡ ಸಾಹಿತ್ಯದಲ್ಲಿ ಬಲಪಂಥೀಯ ಚಿಂತನೆ ಈಗ ಕೆಲವು ಲೇಖಕರನ್ನು ಆವರಿಸಿಕೊಳ್ತಾ ಇದೆ. ಉದಾ.ಗೆ ನಮ್ಮ ಹಿರಿಯ ಸಂಶೋಧಕರಾದ ಚಿದಾನಂದ ಮೂರ್ತಿ ಅವರು. ಈ ಪರಿವರ್ತನೆಗೆ ಏನು ಕಾರಣವೊ ತಿಳೀತಾ ಇಲ್ಲ.

ಕೋಚೆ: ಅವರನ್ನ ’ಸಂಶೋಧಕ’ ಅನ್ನೋ ಹೆಸರಿನಿಂದ ಕರೀತೀರಲ್ಲ, ಅವರು ಸಂಶೋಧಕರು ಅಲ್ವೇ ಅಲ್ಲ.

ಸಂ: ಹ್ಯಾಗೆ?

ಕೋಚೆ: ಸಂಶೋಧಕ ಅಂದ್ರೇನು? ’ಶೋಧ’ ’ಸರ್ಚ್’ ಅನ್ನೋ ಮಾತಿನಿಂದ ಸಂಶೋಧನೆ ಬಂದಿದೆ. ಮರೆಯಾದದ್ದು, ಮರೆತು ಹೋದದ್ದು, ಕಣ್ಣಿಗೆ ಕಾಣದೇ ಇರತಕ್ಕಂಥದ್ದನ್ನು ಸರ್ಚ್ ಮಾಡ್ತೀವಿ ನಾವು. ಸಂಶೋಧನೆ ’ರಿಸರ್ಚ್’ ಅಂತ ಹೇಳ್ತೀರಲ್ಲ, ’ರೀ’ ಅಂದರೆ ಮತ್ತೆ ಶೋಧ ಅಲ್ಲ. ರಿಸರ್ಚ್ ಅಂತ ಹೇಳಿದ್ರೆ ಶೋಧ ಮಾಡಿರೋ ಸಾಮಗ್ರಿಯಲ್ಲಿ ಯಾವ ಸಿದ್ಧಾಂತ ಅಡಗಿದೆ, ಯಾವ ತತ್ವ, ಯಾವ ದರ್ಶನ ಅಡಗಿದೆ, ಅದನ್ನು ಕಂಡು ಹಿಡಿಯೋದು. ’ರಾಮಾಯಣ ದರ್ಶನಂ’ ತಗೊಂಡರೆ ಅದರ ಹಿಂದೆ ಏನಿದೆ ಅನ್ನೋದನ್ನು ನೋಡೋದು ರಿಸರ್ಚ್. ಈಗ ಚಿದಾನಂದ ಮೂರ್ತಿಯವರ ಬರವಣಿಗೆಯಲ್ಲಿ ಏನಾಗಿದೆ? ಯಾವುದೋ ಒಂದು ದಾಖಲೆ ಇಟ್ಟುಕೊಂಡು ಟಿಪುಸುಲ್ತಾನ ಮತಾಂಧ ಅಂತಿದಾರೆ. ಅವನ ಬಗ್ಗೆ ಇರೋ ದಾಖಲೆಗಳನ್ನು ಯಾರು ಬರೆದರು, ಯಾಕೆ ಬರೆದರು ಅನ್ನೋದನ್ನು ವಿಶ್ಲೇಷಣೆ ಮಾಡೋಕೆ ಮತ್ತು ಅದರ ಹಿಂದಿನ ಸಿದ್ಧಾಂತಕ್ಕೆ ಹೋಗೋಕೆ ಅವರಿಗೆ ಸಾಧ್ಯವಾಗಿಲ್ಲ.

ಸಂ: ಇದನ್ನು ಮತ್ತಷ್ಟು ಬಿಡಿಸಿಹೇಳಿ.

ಕೋಚೆ: ಚರಿತ್ರೆಯಲ್ಲಿ ಒಂದು ಸನ್ನಿವೇಶ ಹ್ಯಾಗಿತ್ತು, ಆ ಚಾರಿತ್ರಿಕ ಸಂದರ್ಭ ಹ್ಯಾಗಿತ್ತು, ಅದು ಯಾವ ಹಿನ್ನೆಲೆಯಲ್ಲಿ ಹೀಗಾಯ್ತು ಇದನ್ನ ಕ್ಷಕಿರಣ ಹಾಕಿ ಹಿಂದಕ್ಹೋಗಿ ಆ ಸಮಯದಲ್ಲಿ ಕೂತಿದ್ದು, ಆ ಸಮಾಜವನ್ನು ರೂಪಿಸ್ಕೊಂಡು ನಾವೊಂದು ಸಿದ್ಧಾಂತಕ್ಕೆ ಬರಬೇಕು. ಆ ಕಲ್ಪನೆಯನ್ನು ಬಿ. ಪುಟ್ಟಸ್ವಾಮಯ್ಯನವರು ತಮ್ಮ ’ಕ್ರಾಂತಿಕಲ್ಯಾಣ’ದಲ್ಲಿ ಮಾಡಿದ್ರು. ಅವರ ಆ ರಿಚ್ ಇಮ್ಯಾಜಿನೇಷನ್ ಏನಿದೆಯಲ್ಲ ಅದು ದೊಡ್ಡದು. ಅದರಲ್ಲಿ ಬಿಜ್ಜಳನ ಕೊಲೆ ಆಗ್ತದಲ್ಲ ರಾತ್ರಿ ಹೊತ್ತು ಓದಿದಾಗ ನಮ್ಮ ರಕ್ತ ಹೆಪುಗಟ್ತದೆ. ಅಂಥದ್ದನ್ನು ಕ್ರಿಯೇಟ್ ಮಡ್ತಾರವ್ರು.

ಸಂ: ನಿಮ್ಮ ಬರಹಗಳನ್ನು ಓದುವಾಗ ಕರ್ನಾಟಕದ ಬಹಳ ಪ್ರಸಿದ್ಧ ಸಾರ್ವಜನಿಕ ವ್ಯಕ್ತಿಗಳ, ದೊಡ್ಡ ರಾಜಕಾರಣಿಗಳ ಚಿತ್ರಗಳೆಲ್ಲ ಸಿಗ್ತಾವೆ. ಡಿವಿಜಿ ಬಿಟ್ಟರೆ ಬಹುಶಃ ನೀವೇ ಅನಿಸುತ್ತೆ ಸಮಕಾಲೀನ ಸಾರ್ವಜನಿಕರ ಬಗ್ಗೆ ಇಷ್ಟೊಂದು ಚಿತ್ರಗಳನ್ನ ಕೊಟ್ಟವರು. ನಿಮ್ಮ ಅನುಭವದಲ್ಲಿ ಕರ್ನಾಟಕದ ದೊಡ್ಡ ದಾರ್ಶನಿಕ ಮಟ್ಟದ ರಾಜಕಾರಣಿ ಅಂದರೆ ಯಾರು?

ಕೋಚೆ: ಪ್ರಾಮಾಣಿಕತೆ ದೃಷ್ಟಿಯಿಂದ ನೋಡಿದ್ರೆ ನಿಜಲಿಂಗಪ್ಪ. ಅವರನ್ನ ಮೀರಸೋರಿಲ್ಲ. ಆದರೆ ಈ ರಾಜ್ಯವನ್ನು ಸುಖೀರಾಜ್ಯ ಮಾಡಬೇಕು ಅಂತ ದೃಢ ನಿರ್ಧಾರದಿಂದ ಹೊರಟವರ ಪೈಕಿ ದೇವರಾಜ್ ಅರಸು. ಅವರು ತಂದ ಭೂಸುಧಾರಣೆ ಕಾಯ್ದೆ ಏನಿದೆಯಲ್ಲ, ಅದ್ಭುತವಾದ ಕೆಲಸ ಅದು. ಇಂದಿರಾ ಗಾಂದಿs ಗರೀಬಿ ಹಟಾವೊ ಏನಂದ್ರಲ್ಲ, ಅದನ್ನ ರಾಜ್ಯದಲ್ಲಿ ಜಾರಿಗೆ ತಂದ ಮೊದಲ ಮುಖ್ಯಮಂತ್ರಿ ದೇಶದಲ್ಲಿ ಅರಸು. ಇದು ಬೆಂಗಾಲ್‌ನಲ್ಲಿ ಇಲ್ಲ. ಕೇರಳದಲ್ಲಿಲ್ಲ. ಆಂಧ್ರದಲ್ಲಿಲ್ಲ. ಇವತ್ತಿಗೂ ತಮಿಳ್ನಾಡಿನಲ್ಲಿ ಸಾವಿರಾರು ಎಕರೆ ಇರತಕ್ಕಂಥ ಭೂಸ್ವಾಮಿಗಳಿದ್ದಾರೆ. ನಮ್ಮಲ್ಲೂ ಭೂಸ್ವಾಮಿಗಳಿದಾರೆ. ನಮ್ಮಲ್ಲಿ ಅಲ್ಲಿರತಕ್ಕಂಥ ಭೂಸ್ವಾಮ್ಯ ಇಲ್ಲ, ಬಹಳಷ್ಟು ಟೆನೆನ್ಸಿ ರೂಪದಲ್ಲಿ ಹೋಗಿದೆ.

ಸಂ: ನಿಮ್ಮ ಬರೆಹದಲ್ಲಿ ರಾಮಕೃಷ್ಣ ಹೆಗ್ಗಡೆಯವರ ಬಗ್ಗೆ ಬಹಳ ಗೌರವವಿದೆ.

ಕೋಚೆ: ಆತ ಒಳ್ಳೇ ಆಡಳಿತ ಮಾಡಿದವರು. Power to the people, De-cent ralization of power. Down to the village panchayath.ಅದೊಂದು ದೊಡ್ಡ ಕೆಲಸ. ಇಟ್ ವಾಸ್ ಹಿಸ್ ಬ್ರೈನ್‌ಚೈಲ್ಡ್. ಒಂದ್ಸಲ ಸ್ತ್ರೀಯರಿಗೆ ಶೇಕಡಾ ೩೩ ಮೀಸಲಾತಿ ಮಾಡಿ ಅಂತ ನಾನು ಹೇಳಿದೆ. ಚನ್ನಬಸಪ್ಪನವರೇ ೨೦ ಮಾಡ್ಲಿಕ್ಕೇ ನಮ್ಮ ಪುರುಷ ಶಾಸಕರು ಒಪೊದಿಲ್ಲ. ಇನ್ನ ೩೩ ಮಾಡಿದ್ರೆ ನನಿಗೆ ಗಾದಿsಯಿಂದ ಕೆಳಗಿಳಿಸ್ತಾರೆ ಅಂದ್ರು. ಬಹಳ ಬುದ್ಧಿವಂತರ ಪೈಕಿ ಲೆಕ್ಕ ಹಾಕಿದ್ರೆ ನಮ್ಮ ಜೆ.ಎಚ್. ಪಟೇಲ್.

ಸಂ: ಆದರೆ ಅವರಲ್ಲಿ ಅನೇಕ ಕೊರತೆಗಳಿದ್ದವು. ಮುಖ್ಯವಾಗಿ ಕಮಿಟ್‌ಮೆಂಟಿನ ಕೊರತೆಯಿತ್ತು.

ಕೋಚೆ: (ನಗು) ಈಜಿ ಗೋಯಿಂಗ್ ಮನುಷ್ಯ ಅವರು. ಜನತಾಪಾರ್ಟಿ ಅಧ್ಯಕ್ಷ ರಾಗಿದ್ದಾಗ ಲೀಗಲ್ ಅಡ್ವೆಜರ್ ಆಗಿದ್ದ ನಾನು ಅವರ ಹತ್ರ ಹೋಗ್ತಿದ್ದೆ. ನನಗಿಂತ ಚಿಕ್ಕ ವಯಸ್ಸು. ಆದರೆ ಅಡ್ವೋಕೇಟ್ ಆಗಿದ್ದೆ ಅನ್ನೋ ಕಾರಣಕ್ಕಾಗಿ ತುಂಬ ಗೌರವ ಕೊಡ್ತಿದ್ದರು. ನಾನು ಹೋದಕೂಡ್ಲೆ ಸಿಗರೇಟ್ ಆರಿಸಿ ಬಿಡೋರು. ಭಾಳ ಬುದ್ಧಿವಂತ. ಆದರೆ ಸೋಮಾರಿ. ನೀವು ಸರಿಯಾಗಿ ಕೆಲ್ಸ ಮಾಡ್ರಿ ಅಂತ ನಾನ್ಹೇಳ್ತಿದ್ದೆ. ಆತನ ವೀಕ್‌ನೆಸ್ ಸೆಕ್ಸ್ ಮತ್ತು ಆಲ್ಕೊಹಾಲ್. ಕಪಟಿಯಲ್ಲ. ಮುಚ್ಚುಮರೆ ಏನಿಲ್ಲ. ಎಲ್ಲ ಓಪನ್ ಆಗಿ ಹೇಳ್ತಿದ್ದ. ಸ್ವಲ್ಪಮಟ್ಟಿಗೆ ವಿಶನ್ ಇತ್ತು. ಆದರೆ ನೀವು ಹೇಳ್ದಂಗೆ ಕಮಿಟ್‌ಮೆಂಟಿರಲಿಲ್ಲ.

ಸಂ: ಕರ್ನಾಟಕದ ಬೌದ್ಧಿಕ ಪರಿಸರದ ಬಗ್ಗೆ ನಿಮ್ಮ ಆಲೋಚನೆ ತಿಳಿಯೋ ಆಸಕ್ತಿಯಿಂದ ಕೇಳ್ತಿದೇನೆ. ಹೇಗಿದೆ?

ಕೋಚೆ: ನೋಡಿ, ನಮ್ಮಲ್ಲಿ ಇಂಟಲೆಕ್ಚವಲ್ಸ್‌ಗೆ ಕಾಮನ್‌ಕಾಸಿಗಾಗಿ ಒಂದಾಗಿ ಹೋಗಬೇಕನ್ನೋ ಗುಣ ಇಲ್ಲ. ಫ್ರೆಂಚ್ ರಾಜ ಒಂದು ಮಾತು ಹೇಳ್ತಾನೆ, How i Wish, i am in the company of men of letters who have no malice ಅಂತ.

ಸಂ: ಅಂದ್ರೆ....

ಕೋಚೆ: ಹೊಟ್ಟೆಕಿಚ್ಚು. ಹೊಟ್ಟೆಕಿಚ್ಚು ಇಲ್ಲದಿರೋ ಸಾಹಿತಿಗಳ ಮಧ್ಯೆ ನಾನು ಇರ‍್ಲಿಕ್ಕೆ ಎಷ್ಟು ಅಪೇಕ್ಷೆ ಪಡ್ತೀನಿ ಅಂತಾನವನು. ಅಂದರೆ ಹೊಟ್ಟೆಕಿಚ್ಚಿಲ್ಲದ ಲೇಖಕರು ಇರೋಕೆ ಸಾಧ್ಯವಿಲ್ಲ ಅಂತ ಅರ್ಥ. ನಮ್ಮ ಬರಹಗಾರರನ್ನು ನೋಡ್ರಿ ಒಬ್ಬೊಬ್ಬರು ಒಂದೊಂದು ದಿಕ್ಕು. ಹೊಂದಿಕೊಂಡು ಹೋಗೋ ಪ್ರವೃತ್ತಿನೇ ಇಲ್ಲ. ನಮ್ಮ ಬುದ್ಧಿಜೀವಿಗಳು ಏನದಾರಲ್ಲ, ಪ್ರತಿಯೊಬ್ಬರೂ ತಾವೇನೇ ಸರಿ ಅಂತ ತಿಳಿದೋರು. ಸತ್ಯಕ್ಕೆ ಇನ್ನೊಂದು ಮುಖ ಇರಬಹುದಪ್ಪ ಅಂತಕ್ಕಂಥ ದೃಷ್ಟಿ ಅವ್ರಿಗೆ ಕಡಿಮೆ. ನಮ್ಮ ಲೋಹಿಯಾವಾದಿಗಳಲ್ಲಿ ಚಂದ್ರಶೇಖರ್ ಒತ್ತಟ್ಟಿಗೆ ಹೋದ್ರು. ಮಧು ದಂಡವತೆ ಒತ್ತಟ್ಟಿಗೆ ಹೋದ್ರು.

ಸಂ: ನೀವು ಲೋಹಿಯಾ ಅವ್ರನ್ನು ನೋಡಿದ್ರಾ?

ಕೋಚೆ: ಇಲ್ಲ. ನಾನು ಅವರ ಸಂಪರ್ಕಕ್ಕೂ ಬರಲಿಲ್ಲ. ಆದರೆ ಅವರ ಬರಹಗಳನ್ನು ಓದ್ತಿದ್ದೆ. ಸ್ನೇಹಿತರಿಂದ ಕೇಳಿ ತಿಳಿದಿದ್ದೆ.

ಸಂ: ಗೋಪಾಲಗೌಡರನ್ನ ..

ಕೋಚೆ: ಗೋಪಾಲಗೌಡರನ್ನ ನೋಡಿದ್ದೆ. ಆದರೆ ಅವರ ಜತೆ ನಿಕಟ ಸಂಪರ್ಕ ಇರ‍್ಲಿಲ್ಲ. ಆತ ಒಳ್ಳೇ eನಿ. ರಾಜಕಾರಣದಲ್ಲಿ ಪ್ರಾಮಾಣಿಕ. ಜೀವನ ಪ್ರೀತಿ ಇರುವವರ ಪೈಕಿ ಆತ ಒಬ್ಬಾತ. ಆತ ಎಂದೂ ಲುಚ್ಚ ಕೆಲಸಕ್ಕೆ ಕೈಯೊಡ್ಡಲಿಲ್ಲ.

ಸಂ: ನಮ್ಮ ಬಳ್ಳಾರಿ ಭಾಗದ ಆ ಕಾಲದ ರಾಜಕಾರಣಿಗಳಲ್ಲಿ ಹಾಗೆ ಒಂದು ದೊಡ್ಡ ವಿಶನ್ ಇದ್ದವರು ಅಂತಂದ್ರೆ ಯಾರು?

ಕೋಚೆ: ಕೇಳಬಾರದು. ಬುದ್ಧಿಜೀವಿಗಳು ದೊಡ್ಡ ವಿಶನ್ ಇರೋರು ಯಾರೂ ಇರಲಿಲ್ಲ.

ಸಂ: ನೀವು ನ್ಯಾಯಾದಿsಶರಾಗಿ ಕರ್ನಾಟಕದ ಅನೇಕ ಭಾಗಗಳಲ್ಲಿ ಸೇವೆ ಸಲ್ಲಿಸಿ ದೋರು. ಜನರ ನೋವುಗಳನ್ನು ನ್ಯಾಯಾದಿsಶರಾಗಿ ಬೇರೆ ಬೇರೆ ಥರ ಕಂಡೋರು. ಕರ್ನಾಟಕದ ಯಾವ ಭಾಗ ನಿಮಗೆ ಒಳ್ಳೆಯ ಅನುಭವ ಕೊಡ್ತು?.
ಕೋಚೆ: ದಕ್ಷಿಣ ಕನ್ನಡ ನನಗೆ ಬಹಳ ಮೆಚ್ಚುಗೆ ಆಯ್ತು. ಅಲ್ಲಿನ ಜನ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಭಾಳ ಎತ್ತರದಲ್ಲಿದಾರೆ. ದಕ್ಷಿಣ ಕನ್ನಡದಲ್ಲಿ ಇರುವಷ್ಟು ಬರಹ ಗಾರರು ಕರ್ನಾಟಕದ ಯಾವ ಭಾಗದಲ್ಲೂ ಇಲ್ಲ. ಮತ್ತೆ ಕ್ವಾಲಿಟಿ ರೈಟಿಂಗ್ಸ್ ಇದೆ. ಸುಸಂಸ್ಕೃತ ಜನ. ಆದರೆ ಈಚೆಗೆ ಕೇಸರಿಮಯ ಆಗಿ ಅತ್ಯಂತ ಜಾತಿ ದ್ವೇಷಕ್ಕೆ ಕಾರಣ ಆಗಿದೆ. ಪ್ರಗತಿ ದೃಷ್ಟಿಯಿಂದ ಆರ್ಥಿಕವಾಗಿ ಭಾಳ ಮೇಲೆ ಬಂದಿದಾರೆ ಅವರು. . Left to themselves they are very Good.ಆದರೆ ಒಬಿಡಿಯನ್ಸ್‌ನಲ್ಲಿ ಕಷ್ಟಪಡೋದರಲ್ಲಿ ಬಿಜಾಪುರ, ಬೆಳಗಾವಿ, ಜನ ಬಿಟ್ರೆಯಿಲ್ಲ. ಅಲ್ಲಿದ್ದಾಗ ಭಾಳ ಖೂನಿ ಕೇಸಗಳನ್ನ ನಾನು ವಿಚಾರಣೆ ಮಾಡಬೇಕಾಯಿತು. ಇದನ್ನ ಕೇಳಿ ಕುವೆಂಪು ಅವರು ’ಅಷ್ಟೊಂದು ಕೇಸು ಇರ‍್ತವಾ? ಅಲ್ಲಿನ ಜನ ಅಂಥ ಕೆಟ್ಟವರೇ’ ಅಂತ ಮುಗ್ಧವಾಗಿ ಆಶ್ಚರ್ಯ ಪಟ್ಟರು. ಇಲ್ಲ, ಕೆಟ್ಟ ಜನ ಅಲ್ಲ, ಭಾಳ ಒಳ್ಳೇರು ಅಂದೆ. ’ಮತ್ತೆ ಹೀಗೆ ಹಿಂಸೆ ಯಾಕ್ಮಾಡ್ತಾರೆ’ ಅಂದರು. ಅವರಿಗೆ ಅನ್ಯಾಯವನ್ನ ತಡೀಲಿಕ್ಕೆ ಆಗೋದಿಲ್ಲ. ಯಾವುದೋ ಒಂದು ತಪು ಅಂತ ಕಂಡು ಬಂದ್ರೆ ನೇರವಾಗಿ ಪ್ರತಿಭಟಿಸ್ತಾರೆ. ಆಕ್ರೋಶದಿಂದ ಪ್ರತಿಕ್ರಿಯೆ ಮಾಡ್ತಾರೆ ಅಂತ ವಿವರಿಸಿದೆ. ನಮ್ಮ ಬಸವರಾಜ ಕಟ್ಟಿಮನಿ ಒಂದು ಕತೆ ಹೇಳಿದ್ದರು. ಕಿತ್ತೂರಿನಲ್ಲಿ ಚಾದಂಗಡಿಯಲ್ಲಿ ಇಬ್ಬರು ಗೆಳೆಯರು ಚಾ ಕುಡ್ದಿದಾರೆ. ಒಬ್ರ ಹೆಗಲ ಮೇಲೆ ಒಬ್ರು ಕೈಹಾಕ್ಕೊಂಡು ಬಸ್‌ಸ್ಟ್ಯಾಂಡ್ ಕಡಿಗೆ ಬರ‍್ತಾ ಇದಾರೆ. ರಸ್ತೆಗೆ ಬರೋದ್ರಲ್ಲಿ ಏನಾಯ್ತೊ ಏನೋ ಒಬ್ರಿಗೊಬ್ಬರು ಬಾಯಿ ಹತ್ತಿತು. ಅವನ ಕೈಯಾಗೆ ಜಂಬಿಯಾ ಇತ್ತು. ತಗಂಡು ತಿವಿದೇ ಬಿಟ್ಟ. ಅವರು ನಂಬಿದ್ರೆ ಪ್ರಾಣ ಕೊಡೋಕು ತಯಾರು. ಪ್ರಾಣ ತಗಳೋಕೂ ತಯಾರು. ಕಪಟಿಗಳಲ್ಲ. ಮುಗ್ಧಜನ.

ಸಂ: ನ್ಯಾಯಾಂಗ ಇಲಾಖೆಯಲ್ಲಿ ೪೦ ವರ್ಷ ಕೆಲಸ ಮಾಡಿದೀರಿ. ನಮ್ಮ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಸ್ವರೂಪ ಹೇಗಿದೆ?

ಕೋಚೆ: ಈ ಮಾತನ್ನು ನಾನು ಮೊದಲಿಂದಲೂ ಹೇಳ್ತಾ ಬಂದಿದೀನಿ. ಈಗಿರೋ ಆಂಗ್ಲೊಸ್ಯಾಕ್ಸನ್ ಜುಡಿಶಿಯಲ್ ಸಿಸ್ಟಮ್ ಅನ್‌ಪಿsಟ್ ಫಾರ್ ಇಂಡಿಯ. ಇದು ನಮಿಗೆ ಒಗ್ಗೋದಿಲ್ಲ. ನಮಿಗೆ ಪರಿಹಾರ ನೀಡೋದಿಲ್ಲ. ಯಾಕಂತ ಹೇಳಿದ್ರೆ ಇದು ಇಂಗ್ಲೆಂಡಿನ ಸಮಾಜದ ಸಿಸ್ಟಮ್. ಇದನ್ನ ತಂದು ನಮ್ಮ ತಲೇ ಮೇಲೆ ಹೇರಿದರು. ಜಹಾಂಗೀರನ ಕಾಲ್ದಲ್ಲಿ ಅರಮನೆ ಮುಂದೆ ಒಂದು ಗಂಟೆ ಕಟ್ಟಿದ್ರು. ಅನ್ಯಾಯಕ್ಕೊಳಗಾದವರು ಬಂದು ಆ ಗಂಟೆ ಬಡಿದ್ರೆ ಅವನು ಬಂದು ವಿಚಾರಣೆ ಮಾಡ್ತಿದ್ದ. ಜಹಾಂಗೀರನ ಮಗ ಯಾವುದೋ ಒಂದು ತಪು ಮಾಡಿದ್ದ. ಅವನಿಗೆ ಶಿಕ್ಷೆ ಆಯಿತು. ನಮ್ಮಲ್ಲೊಂದು ಹೇಳಿಕೆಯಿದೆ. ಸಾಧಾರಣ ಜನ ತಪು ಮಾಡಿದ್ರೆ ಯಾವ ಶಿಕ್ಷೆಯನ್ನು ಕೊಡ್ತಾರೋ ಅದರ ದುಪ್ಪಟ್ಟು ಶಿಕ್ಷೆಯನ್ನು ಅರಸನ ಮಗ ಮಾಡಿದ್ರೆ ಕೊಡಿ ಅಂತ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಲ್ಲೆದಲ್ಲೆ ತೀರ್ಮಾನ ಆಗ್ತಕ್ಕಂತ ವ್ಯವಸ್ಥೆ ಏನಿತ್ತು ಅದು ನಮಗೆ ಅಗತ್ಯ.

ಸಂ: ಆದರೆ ಭೂಮಾಲೀಕರು ಉಚ್ಚಜಾತಿಯವರು ಇರೋ ನಮ್ಮ ಗ್ರಾಮ ವ್ಯವಸ್ಥೆಯಲ್ಲಿ ದಲಿತರಿಗೆ ಭೂರಹಿತರಿಗೆ ನ್ಯಾಯ ಸಿಗುತ್ತೆ ಅನಿಸುತ್ತಾ?.

ಕೋಚೆ: ಯಾರಾದ್ರೂ ಸರಿ. ಊರ ದೈವದ ಮುಂದೆ ಅಹವಾಲು ಹೇಳ್ಲಿಕ್ಕೆ ಅವಕಾಶ ಇತ್ತಲ್ಲ.

ಸಂ: ಆದರೆ ದೈವದಲ್ಲಿ ಗೌಡರು ಶಾನುಭೋಗರು ಮಠದ ಅಯ್ಯನವರು ಇರ‍್ತಿದ್ರು.

ಕೋಚೆ: ಹಾಗೇನಿಲ್ಲ. ಎಲ್ಲಾ ಜನ ಇರ‍್ತಿದ್ರು. ನಮ್ಮೂರಲ್ಲಿ ಮಾದಿಗರ ದುರ್ಗಪ್ಪ ಇದ್ದ. ಅಂಗಿ ತೊಡ್ತಿದ್ದಿಲ್ಲ. ರುಮಾಲು ಮಾತ್ರ ಇಟ್ಕೊಳ್ತಿದ್ದ. ದೈವ ಕೂಡ್ದಾಗ ಬಂದು ಕೆಳಗ ಕೂಡ್ತಿದ್ದ. ಅವರ ಜೊತೆ ಸಮಾನವಾಗಿ ಏನು ಕೂಡ್ತಿದ್ದಿಲ್ಲ. ವಿಚಾರಣೆ ಆಗ್ಬೇಕಾದ್ರೆ ದೈವದೋರು ಕೇಳ್ತಿದ್ರು. ಏನು ದುರ್ಗಪ್ಪ ಇದಕ್ಕೆ ನೀನು ಏನ್ಹೇಳ್ತಿ ಅಂತ. ಅಲ್ರೀ ಅವರು ಹಿಂಗ್ಹೇಳ್ತಾರೆ. ಇವರು ಹಿಂಗ್ಹೇಳ್ತಾರೆ. ನನಿಗನ್ನಿಸ್ತತಿ ಹಿಂಗ್ಮಾಡಿದ್ರೆ ಆದೀತು ಅಂತ ಹೇಳ್ತಿದ್ದ ಅವನು. ನಾನು ಕಿವಿಯಾರೆ ಕೇಳಿದ್ದಿದು.

ಸಂ: ನಿಮ್ಮ ವ್ಯಕ್ತಿತ್ವದಲ್ಲಿ ತೀಕ್ಷ್ಣವಾದ ನಿಷುವಿರತೆ, ಇಷ್ಟಪಡದ್ದರ ಬಗ್ಗೆ ಕಹಿಯಾಗಿ ಇರೋದು, ಕೆಟ್ಟದ್ದು ಅನಿಸಿದ್ದರ ಬಗ್ಗೆ ನಿರ್ದಾಕ್ಷಿಣ್ಯವಾಗಿ ಮಾತಾಡೋದು ಇದೆ. ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಒಂದು ನೈತಿಕತೆ ಬಂದಿದೆ. ಆದರೆ ಆ ನೈತಿಕ ವ್ಯಕ್ತಿತ್ವಾನೇ ಸಾರ್ವಜನಿಕ ಸಂಬಂಧಗಳಲ್ಲಿ ಸಮಸ್ಯೆ ಕೂಡ ಉಂಟು ಮಾಡಿರಬಹುದು. ನಿಮಗೆ ಇದರಿಂದ ನಾನು ಕೆಲವು ಸಂಗತಿಗಳನ್ನು ಕಳಕೊಂಡೆ ಅನಿಸಿದೆಯಾ?

ಕೋಚೆ: ನಾನು ಯಾವ ರೀತಿಯಾಗಿ ಜೀವಿಸಿದೆ ಅನ್ನೋದರಲ್ಲಿ ಐ ಹ್ಯಾವ್ ನೋ ರಿಗ್ರೆಟ್ಸ್. ನನ್ನ ಗುಣಗಳಿಂದ ನನಗೆ ನಷ್ಟವಾಗ್ತದೆ, ಲಾಭವಾಗ್ತದೆ ಅನ್ನೋದನ್ನು ನಾನು ಮನಸ್ನಲ್ಲಿ ಇಟ್ಕೊಳ್ಕಿಲ್ಲ. ಅದು ಆಡ್ಬೇಕಾದಂಥ ಮಾತು, ಬರೀಬೇಕಾದಂಥ ಮಾತು ಅಂತಾದ್ರೆ, ಮುಂದೆ ಬರಬಹುದಾದ ಯಾವುದನ್ನೇ ಆಗಲಿ ಎದುರಿಸ್ಲಿಕ್ಕೆ ಸಿದ್ಧವಾಗಿ ನಾನು ಆಡತಿದ್ದೆ. ಬರೀತಿದ್ದೆ. ಅದ್ರಿಂದ ಕೆಲಮಟ್ಟಿಗೆ ನನಗೆ ತೊಂದರೆಗಳಾಗಿವೆ. ಇಲ್ಲ ಅಂತ ಹೇಳದಿಲ್ಲ. ಆದ್ರೆ ಆ ತೊಂದರೆಗಳಿಂದ ನಾನೇನು ಕುಗ್ಗಿಲ್ಲ. ನಾನು ಬಡ್ತಿ ಪಡೆಯೋ ಸಂದರ್ಭ ಬಂದಾಗ, ನನ್ನ ವಿರೋದಿsಗಳು ’ರೈತ’ ಪತ್ರಿಕೆಯಲ್ಲಿ ಬರೆದ ಲೇಖನಗಳ ಕಟಿಂಗ್ಸನ್ನ ಸರ್ಕಾರಕ್ಕೆ ಕಳಿಸಿಕೊಟ್ಟಿದ್ರು. ಹೈಕೋರ್ಟ್ ಜಡ್ಜಾದಂಥ ತುಕೋಳ್ ಮಾಸ್ತರೇ ಇದನ್ನ ನನಗೆ ಹೇಳಿದರು. ’ಚನ್ನಬಸಪ್ಪನವರೇ, ನಿಮಗೆ ಎಷ್ಟು ಜನ ಆಪ್ತರಿದಾರೊ, ಸ್ನೇಹಿತರಿದಾರೊ, ಅದಕ್ಕಿಂತಲೂ ಅದಿsಕವಾಗಿ ಆಗದವರೂ ಶತ್ರುಗಳೂ ಇದಾರೆ’ ಅಂತ. ನೀವು ಸರ್ಕಾರವನ್ನು ಕಟು ವಿಮರ್ಶೆ ಮಾಡಿದ ನಿಮ್ಮ ಲೇಖನಗಳನ್ನು ನಮ್ಗೆ ಕಳ್ಸಿದ್ರು. ಅದನ್ನು ನಾವು ಗಮನಕ್ಕೆ ತಗೊಳ್ಳಿಲ್ಲ. ನಿಮ್ಮ ಕರ್ತವ್ಯ ನೀವು ಸರಿಯಾಗಿ ನಿಭಾಯಿಸ್ತೀರೋ ಇಲ್ಲವೊ ಅನ್ನೋದನ್ನ ಮಾತ್ರ ನಾವು ನೋಡಿದ್ವಿ ಅಂದರು. ಆದ ಕಾರಣದಿಂದ ನನ್ಗೆ ಅನೇಕ ಸಂದರ್ಭಗಳಲ್ಲಿ ತೊಂದ್ರೆ ಬರಬಹುದಾಗಿತ್ತು. ಆದ್ರೆ ಬರ‍್ಲಿಲ್ಲ.

ಸಂ: ನಿಮಗೆ ಅನಿಸಿರುವ ನಿಮ್ಮ ಮಿತಿ ಅಂದರೆ ಯಾವುದು?

ಕೋಚೆ: ನನ್ನ ಪ್ರೇರಣೆ ಒದಗಿಸಿದೆಯಲ್ಲ ಅದೇ ನನ್ನ ಮಿತಿ. ಆದ ಕಾರಣದಿಂದ ಈಗ ನಾನು ಇಷ್ಟೆಲ್ಲ ಮಾಡಿದೆ ಅಂತ ಇಟ್ಕೊಳ್ನಿ. ನನ್ನ ಬಗ್ಗೆ ಕೆಲವರು ಹೇಳ್ಕೊಳ್ತಾರೆ. ನಾನು ಬಸ್ಸಲ್ಲಿ ಓಡಾಡಲ್ಲ ಅಂತ. ಯಾಕಂದ್ರೆ ನನಿಗೆ ದೇಹತಡಿಯಲ್ಲ. ಆದ್ರೆ ನಾನು ಬಸ್ಸಲ್ಲಿ ಓಡಾಡೋದ್ರಿಂದ ನನ್ನ ಮರ‍್ಯಾದೆ ಕಡಿಮೆ ಆಗುತ್ತೆ ಅಂತ ನಾನು ಎಂದೂ ತಿಳ್ಕಂಡಿಲ್ಲ. ಅದು ನನ್ನ ಅಟಿಟ್ಯುಡ್. ಆದ್ರೆ ನನಗಿಂತ ವಿನಯವಂತರನ್ನ ನಾನೇ ನೋಡಿಲ್ಲ. (ನಗು) ಈವೆನ್ ದೊ ಲೋಯೆಸ್ಟ್ ಮ್ಯಾನ್, ಎಲ್ಲೋ ಒಬ್ಬ ಹೂಮಾರೋ ಹೆಣ್ಮಗಳು ಇರ‍್ತಾಳೆ ನಮಸ್ಕಾರ ಸ್ವಾಮಿ ಅಂತಾಳೆ. ನಮಸ್ಕಾರಮ್ಮ ಅಂತೀನಿ ನಾನು. ಅವರು ನಮಿಗೆ ಗೊತ್ತಿಲ್ಲದೆ ಇರಬಹುದು. ಆದ್ರೆ ಅವರು ನಮಿಗಿಂತ ಕಡಿಮೆ ಅನ್ನೋ ಭಾವನೆ ನನೀಗೆ ಬರೋದೇ ಇಲ್ಲ.

ಸಂ: ಚಿತ್ರದುರ್ಗದ ಮುರುಘಾಮಠದ ಸ್ವಾಮಿಗಳು ಲಿಂಗದೀಕ್ಷೆ ಪಡೆಯುವವರು ಆಹಾರದ ವಿಷಯದಲ್ಲಿ ಕಟ್ಟು ಮಾಡಬೇಕಾಗಿಲ್ಲ. ಬೇಕಾದವರು ಮಾಂಸಾಹಾರ ಮಾಡಬಹುದು ಅನ್ನುವ ಮಾತಾಡಿದರು. ಆಗ ಅದನ್ನು ಹಲವಾರು ಜನ ವಿರೋದಿsಸಿದರು. ಚಿದಾನಂದಮೂರ್ತಿ ವಿರೋದಿsಸಿದರು. ನೀವು ವಿರೋಧ ಮಾಡಿದಿರಿ. ಈ ನಿಲುವು ಸಂಪ್ರದಾಯವಾದಿ ಅಂತ ಅನ್ಸಲ್ವ?

ಕೋಚೆ: ನೋಡಿ, ನಾನು ಇನ್ನೊಂದು ಬರ‍್ದಿದೀನಿ. ನೀವು ನೋಡಿದಿರೋ ಇಲ್ವೋ ಗೊತ್ತಿಲ್ಲ. ಮಾಂಸಾಹಾರವನ್ನೇ ನಿಷೇಧ ಮಾಡಬೇಕು ಅಂತ ನಾನು ಎಲ್ಲೂ ಹೇಳಿಲ್ಲ. ಯಾರಿಗೆ ಅಪೇಕ್ಷೆ ಇದೆಯೋ ಅವರು ಅದನ್ನ ಮಾಡ್ಲಿ. ನಮ್ದೇನು ತಕರಾರಿಲ್ಲ. ಆದರೆ ಲಿಂಗಾಯತರಾದ ಮೇಲೂ ನೀವು ಮಾಂಸ ತಿನ್ನಬಹುದು ಅನ್ನೋ ಮಾತೇನಿದೆಯಲ್ಲ, ಅದು ಸರಿಯಾದ ಮಾತಲ್ಲ. ಆ ಮಾತಿಗೆ ನಾನು ಇವತ್ತಿಗೂ ಬದ್ಧವಾಗಿದೀನಿ. ಇವಾಗ ನಾನು ಅರಸೀಕೆರೆ ವೆಂಕಟಸ್ವಾಮಿಯವರ ಮನೆಗೆ ಬರ‍್ತಿದ್ದೆ. ಅವರ ಮನೆಯಲ್ಲಿ ಮಾಂಸಾಹಾರ ಮಾಡ್ತಿದ್ರು. ಒಂದೇ ಟೇಬಲ್ ಮೇಲೆ ಕೂಡ್ತಿದ್ವಿ. ಸ್ವತಃ ವಿವೇಕಾನಂದರು ಮಾಂಸ ತಿನ್ತಿದ್ರಲ್ಲ. ಕುವೆಂಪುನೂ ತಗಳ್ತಿದ್ರಲ್ಲ. ಅವರು ಮಾಂಸಹಾರ ನಿಷಿದ್ಧ ಅಂತ ಹೇಳದಿಲ್ಲ. ಮದರ್ ಹುಟ್ಟಿನಿಂದ ನಾನ್‌ವೆಜ್ ಇದ್ರು. ಬಟ್ ವೆನ್ ಶಿ ಟುಕ್ ಟು ದಿ ಸ್ಪಿರಿಚ್ಯುವಲ್ ಲೈಫ್, ದಿ ಮೀಟ್ ಯೀಟಿಂಗ್ ಹ್ಯಾಬಿಟ್ ಡ್ರಾಪಡ್ ಆಫ್. ಅವರೇನದನ್ನ ಬಿಟ್ಟೇ ಬಿಡ್ಬೇಕು ಅಂತ ಉದ್ದೇಶ ಪಟ್ಕೊಂಡು ಬಿಡ್ಲಿಲ್ಲ. ಆದ್ರೆ ಅದು ಅವ್ರಿಗೆ ಬಿಡಬೇಕನ್ನಿಸ್ತು, ಬಿಟ್ರು. ಅದಕ್ಕೆ ಅವರ್ರು ಹೇಳ್ತಾರೆ ಸಾಧಕರಿಗೆ ಬೇಕು ಅನ್ನೋದು ಹೇಗೆ ಅನುಚಿತವೋ ಹಾಗೆಯೇ ಬಂದದ್ದನ್ನು ಬೇಡ ಎನ್ನುವುದೂ ಅನುಚಿತ ಅಂತ.

ಸಂ: ಅಲ್ಲ, ಶಿವಭಕ್ತರಿಗೆ ಅದು ಯಾಕೆ ಬೇಡ ಅಂತ. ನಿಮಗೇ ಗೊತ್ತಿರುವ ಹಾಗೆ ಈಗ ಎಲ್ಲ ಜಾತಿಯ ತರುಣರಲ್ಲಿ ಬಹಳಷ್ಟು ಜನ ತಗೊಳ್ತಾ ಇದಾರೆ.

ಕೋಚೆ: ಶಿವಭಕ್ತರು ಅಂತಲ್ಲ, ಯಾರೇ ಆಗಲಿ ಮಾಂಸಾಹಾರ ಮಾಡಲು ಅವರಿಗೆ ಅಭ್ಯಂತರಗಳಿಲ್ಲ. ವಾಲ್ಮೀಕಿ ವ್ಯಾಸರು ಎಲ್ಲರೂ ತಿಂದವರೇ. ಆಧುನಿಕ ಅಂತ ಬೇಡಿ. ಅತ್ಯಂತ ಪ್ರಾಚೀನ ಕಾಲ್ದಲ್ಲೇ ಇದಿತ್ತು. ಧರ್ಮಕ್ಕೂ ಆಹಾರಕ್ಕೆ ಸಂಬಂಧವೇ ಇಲ್ಲ. ಬಸವಣ್ಣನವರು ಯಾವಾಗ ನಮ್ಗೆ ಲಿಂಗವನ್ನು ಕೊಟ್ಟು ನೀವು ನಿಮ್ಮ ಅಪರ ಪ್ರವೃತ್ತಿಗಳನ್ನ, ನೀಚ ಅನ್ನೋದಿಲ್ಲ ನಾನು, ಲೊವರ್ ಇನ್‌ಸ್ಟಿಂಕ್ಸ್‌ಟ್‌ಗಳನ್ನ, ನಾಲಿಗೆ ರುಚಿಗೆ ತಕ್ಕ ಹಾಗೆ ನಮ್ಮ ಪಂಚೇಂದ್ರಿಯ ಗಳಲ್ಲಿ ಇರಬಹುದಾದಂಥ ’ಬೇಸಿಕ್ ಇನ್‌ಸ್ಟಿಂಕ್ಟ್’ಗಳಿಗೆ ಒಳಗಾಗ ಕೂಡದು ಅಂತ ಹೇಳಿದರು. ಆಧಾರ ಸಿದ್ಧಿಗೆ ಆಹಾರ ಕಾರಣವಾಗ್ತದೆ. ಈಗ ನೀವು ಮಾಂಸಾಹಾರ ತೊಗೊಳ್ಳೋದರಿಂದ ತಾಮಸ ಪ್ರವೃತ್ತಿ ಜಾಸ್ತಿ ಆಗ್ತದೆ. ನೀವು ಯಾವ ಸ್ಟೇಜ್‌ಗೆ ಬಂದಿದ್ದೀರಿ? ಲಿಂಗಾಯಿತ ಧರ್ಮವನ್ನು ಅನುಸರಿಸಿ, ಅದರ ಕಡಿಗೆ ನೀವು ಗಮನ ಕೊಡೋದಾದ್ರೆ ಇದನ್ನ ಬಿಡಬೇಕಾಗುತ್ತೆ. ವಿವೇಕಾನಂದರು ಪರಮಹಂಸರ ಹತ್ರ ಹೋದಾಗ ಯಾರ‍್ಯಾರೋ ಪಾಪ, ಕಲ್ಕತ್ತದಲ್ಲಿದ್ದ ವೇಶ್ಯೆಯರು ಬಂದು ಹಣ್ಣು ಕೊಡ್ತಿದ್ರು. ಯಾರೋ ಕುಡುಕ ಬಂದು ಸಂದೇಶ ತಂದು ಕೊಡ್ತಿದ್ದ. ಅದನ್ನು ಪರಮಹಂಸರು ಎಲ್ಲರಿಗೂ ಕೊಡ್ತಿದ್ದಿಲ್ಲ. ವಿವೇಕಾನಂದರಿಗೆ ಮಾತ್ರ ಕೊಡೋರು. ಯಾಕಂತ ಕೇಳಿದ್ರೆ, ಏನು ಕೊಟ್ರು ಜೀರ್ಣಿಸಿಕೊಳ್ತಕ್ಕಂಥ ಶಕ್ತಿ ಅವ್ನಿಗೆ ಇದೆ ಅನ್ನೋರು.

ಸಂ: ಆಹಾರವು ಸಾಧನೆಯಲ್ಲಿ ಯಾವ ಬಗೆಯಲ್ಲಿ ಸಹಾಯ ಮಾಡುತ್ತೆ ಯಾವ ಬಗೆಯಲ್ಲಿ ಅಡ್ಡಿಮಾಡುತ್ತೆ ಅನ್ನೋದು ಒಂದು ವಿಷಯ. ಅದರೆ ಅದೊಂದು ವೈಯಕ್ತಿಕ ಅಬಿsರುಚಿಯ ಪ್ರಶ್ನೆ ಆಗಿದೆ. ಜತೆಗೆ ಈ ದೇಶದ ಬಹುಸಂಖ್ಯಾತ ಜನರ ಸಾಂಸ್ಕೃತಿಕ ಹಕ್ಕನ್ನು ಮಾನ್ಯಮಾಡುವ ಪ್ರಶ್ನೆ ಕೂಡ ಆಗಿದೆ.

ಕೋಚೆ : ತಾರತಮ್ಯದ ಪ್ರಶ್ನೆ ಅಲ್ಲ ಅದು. ವೈಯಕ್ತಿಕ ಅಬಿsರುಚಿ ಅದು. ನೀವು ತಿನ್ನೋದಾದ್ರೆ ತಿನ್ನಿ. ನಮಗೇನಂತೆ? ನೀವು ಈ ಮಾರ್ಗವನ್ನು ಅನುಸರಿಸಿಕೊಂಡು, ಆಧ್ಯಾತ್ಮದಲ್ಲಿ ಒಂದು ಮಟ್ಟಕ್ಕೆ ಬಂದ ಮೇಲೆ ಅಲ್ಲಿಂದ ನೀವು ಹಿಂದಕ್ಕೆ ಹೋಗ್ತೀವಿ ಅಂತಂದ್ರೆ ಹ್ಯಾಗೆ? ಅಲ್ಲಿಗೆ ಹೋದಮೇಲೆ ತಿನ್ನಬಾರದು ಅಂತಲ್ಲ. ಪುಟ್ಟಪ್ಪನವರು ಆಶ್ರಮದಲ್ಲಿ ಇರೋತನಕ ಬಿಟ್ಟಿದ್ರು. ಮನೀಗೆ ಹೋದ್ಮೇಲೆ ತಿನ್ನೋಕೆ ಆರಂಭ ಮಾಡಿದ್ರು. ಏನು ತಿಂದ್ರೂ ಯಾವುದೇ ವಿಚಲಿತವಾಗದ ಸ್ಥಿತಿಯನ್ನ ಅವರು ತಲುಪಿದ್ರು. ಇದು ಎಲ್ಲಿ ತನಕ ಬರ‍್ತದೆ ಅಂದ್ರೆ, ಲೈಂಗಿಕ ಸಂಪರ್ಕ ಬಂದಾಗ ತನುವಿನ ದಾಹಕ್ಕಾಗಿ ಅದು ಆಗೋದಿಲ್ಲ. ಇಂದ್ರಿಯಗಳನ್ನು ತಣಿಸಬೇಕು ಅನ್ನೋದು ಹೋಗಿಬಿಟ್ಟ ಮೇಲೆ, ಯೋಗಿಗಳಿಗೆ ನಿದ್ರಾಸುಖದ ಹಾಗೆ ದೇಹ ಸುಖವು ಅಲ್ಲಿ ಸಹಜ. ಅದಿಕ್ಕೇನೇ ಆ ಸ್ಥಿತಿ ಮುಟ್ಟಿದವರಿಗೆ ದೇಹದ ಯಾವ ನಿಯಮಗಳೂ ಅನ್ವಯವಾಗಲ್ಲ. ಅವರು ನಿಯಮಾತೀತರಾಗಿ ಬಿಡ್ತಾರೆ....