ಪ್ರಭುತ್ವದ ಓಲೈಕೆ ಪ್ರಜ್ಞಾವಂತಿಕೆಯ ಲಕ್ಷಣವಲ್ಲ ಎಂದು ಕನ್ನಡ ವಿಶ್ವವಿದ್ಯಾಲಯದ ಡಾ. ರಹಮತ್ ತರೀಕೆರೆ ಅಭಿಪ್ರಾಯ ಪಟ್ಟರು. ಅವರು ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಆಲೋಚನೆ ಹಾಗು ಧೋರಣೆಗಳು ಮಾನವನ ಒಳಿತಿಗಾಗಿಯೇ ಬಳಕೆಯಾಗಬೇಕು ಎಂದರಲ್ಲದೆ ಪ್ರಭುತ್ವದ ಯಜಮಾನಿಕೆಯ ವಿರುದ್ದ ಧ್ವನಿಯತ್ತಿದ ಹರಿಹರ,ಬಸವಣ್ಣ ಮತ್ತು ಕುವೆಂಪು ಅಂತವರು ಚರಿತ್ರೆಯಲ್ಲಿ ಜೀವಂತವಾಗಿದ್ದಾರೆ. ವರ್ತಮಾನದ ದಿನಗಳಲ್ಲಿ ಧರ್ಮ, ಜಾತಿಯಂತಹ ಕೆಡಕಿನ ಸಂಗತಿಗಳೇ ಹೆಚ್ಚು ವಿಜೃಂಬಿಸಿತ್ತಿರವುದು ಅಪಾಯಕರ ಎಂದರಲ್ಲದೆ, ಬರಹಗಾರರು ಇಂಥ ಜೀವವಿರೋಧಿ ಸಂಗತಿಗಳ ವಿರುದ್ಧ ಧ್ವನಿಯತ್ತಬೇಕಾಗಿರುವುದು ಇಂದಿನ ತುರ್ತು ಎಂದರು.
ನಂತರ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಮತ್ತು ಮಾಜಿ ಸಚಿವೆ ಬಿ.ಟಿ.ಲಲಿತನಾಯಕ ಮಾತನಾಡಿ, ಸಂವಿಧಾನದ ಕೇಂದ್ರವಾದ ವಿಧಾನಸೌಧಂತಹ ಸ್ಥಳಗಳಲ್ಲಿ ಹೋಮ, ಹವನ ಮತ್ತು ಜ್ಯೋತಿಷ್ಯದಂತಹ ಮೌಢ್ಯಗಳು ಜರುಗುತ್ತಿರುವುದು ದುರಷ್ಟಕರ ಎಂದರು. ರಾಜಕಾರಣzಲ್ಲಿ ಬದ್ಧತೆಯೇ ಮಾಯವಾಗಿರುವ ದಿನಗಳಲ್ಲಿ ನಾವಿದ್ದೇವೆ ಎಂದರಲ್ಲದೆ ನಾಡಿನ ಅಪರೂಪದ ಸಂಪತ್ತು ಬಂಡವಾಳಶಾಹಿಗಳ ಪಾಲುಗುತ್ತಿರುವುದರ ಪರಿಣಾಮ ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿರುವುದು ಎಂದರು.
ಕವಿಗೋಷ್ಠಿಯಲ್ಲಿ ಅರುಣ ಜೋಳದಕೂಡ್ಲಿಗಿ, ಡಾ.ಕೆ.ಪನ್ನಂಗಧರ, ಡಾ. ಬಿ.ಜಿ.ಕನಕೇಶಮೂರ್ತಿ, ಹೆಚ್.ಬಿ.ರವೀಂದ್ರ ಸಾಗರ, ವಿ.ಹರಿನಾಥಬಾಬು, ಸೋಮೇಶ ಉಪ್ಪಾರ, ಟಿ.ಎಂ.ಉಷಾರಾಣಿ, ಡಾ.ಎಂ.ಮಲ್ಲಿಕಾರ್ಜುನ, ಹೆಚ್.ಎಂ.ಜಂಬುನಾಥ, ಪಂಪಾಮಹೇಶ, ನೂರ್ ಜಹಾನ್, ಉಮಾಮಹೇಶ್ವರ, ಸೈಯದ್ ಹುಸೇನ್ ಮತ್ತು ಡಿ.ಬಿ.ನಾಯಕ್ ಕವಿತೆ ವಾಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಅರವಿ ಬಸವನಗೌಡರವರು ಹಂಪಿ ಪರಿಸರದಲ್ಲಿರುವ ಹೊಸಪೇಟೆ ತಾಲೂಕು ಕ.ಸಾ.ಪ.ಘಟಕ ಬೆಳದು ಹೆಮ್ಮರವಾಗಲಿ ಎಂದು ಹಾರ‍್ಯೆಸಿದರು,
ಸಮಾರಂಭದಲ್ಲಿ ಸಾಲಿ ಸಿದ್ದಯ್ಯ ಸ್ವಾಮಿ, ಎಲ್.ಸಿದ್ದನಗೌಡ, ಷಾ. ರತನ್ಚಂದ್, ಖಾಜಾ ಹುಸೇನ್ ನಿಯಾಜಿ, ಜಿಲ್ಲಾ ಕ.ಸಾ.ಪ.ದ ಕಾರ್ಯದರ್ಶಿ ಸಿದ್ದರಾಮ ಕಲ್ಮಠ, .ಎಸ್. ನಾಗರತ್ನಮ್ಮ, ವಿದ್ಯಾಧರ, ಎಸ್.ಎಂ.ಶಶಿಧರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಕೆ.ವೆಂಕಟೇಶ ಕಾರ್ಯದರ್ಶಿಗಳಾದ ಟಿ.ಹೆಚ್.ಬಸವರಾಜ, ಅಗಳಿ ಪಂಪಾಪತಿ, ಲಿಂಗಾರೆಡ್ಡಿ, ಟಿ.ಎಂ.ನಾಗಭೂಷಣ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ.ಸಾ.ಪ. ನಿಕಟ ಪೂರ್ವ ಅಧ್ಯಕ್ಷರಾದ ಸುಜಾತ ರೇವಣಸಿದ್ದಪ್ಪರವರನ್ನು ಸನ್ಮಾನಿಸಲಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ